ಒಬ್ಬ ವ್ಯಕ್ತಿ ಒಂದು ದಾರಿಯಲ್ಲಿ ನಡೆಯುತ್ತಿದ್ದಾಗ, ದಾರಿಯಲ್ಲಿ ಒಂದು ಮುಳ್ಳಿನ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ…

ಒಬ್ಬ ವ್ಯಕ್ತಿ ಒಂದು ದಾರಿಯಲ್ಲಿ ನಡೆಯುತ್ತಿದ್ದಾಗ, ದಾರಿಯಲ್ಲಿ ಒಂದು ಮುಳ್ಳಿನ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಒಂದು ದಾರಿಯಲ್ಲಿ ನಡೆಯುತ್ತಿದ್ದಾಗ, ದಾರಿಯಲ್ಲಿ ಒಂದು ಮುಳ್ಳಿನ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿ ನಡೆಯುತ್ತಿದ್ದಾಗ, ದಾರಿಯಲ್ಲಿ ಮುಸ್ಲಿಮರಿಗೆ ತೊಂದರೆ ಕೊಡುವ ಮುಳ್ಳುಗಳಿದ್ದ ಒಂದು ಮರದ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು.

فوائد الحديث

ತೊಂದರೆ ನೀಡುವ ವಸ್ತುವನ್ನು ದಾರಿಯಿಂದ ದೂರ ಸರಿಸುವುದರ ಶ್ರೇಷ್ಠತೆಯನ್ನು, ಮತ್ತು ಅದು ಅಲ್ಲಾಹನ ಕ್ಷಮೆಗೆ ಒಂದು ಕಾರಣವಾಗಿದೆ ಎಂದು ತಿಳಿಸಲಾಗಿದೆ.

ಒಳಿತಿನ ಕಾರ್ಯಗಳು ಎಷ್ಟೇ ಚಿಕ್ಕದಾಗಿದ್ದರೂ ಅವುಗಳನ್ನು ಕೀಳಾಗಿ ಕಾಣಬಾರದು.

ಇಸ್ಲಾಂ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸುರಕ್ಷತೆಯ ಧರ್ಮವಾಗಿದೆ.

التصنيفات

Merits of Good Deeds