ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ (ನಿರಂತರವಾಗಿ) ಮಾಡುತ್ತಿರಿ. ಏಕೆಂದರೆ, ಅವೆರಡೂ ಕುಲುಮೆಯು ಕಬ್ಬಿಣ, ಚಿನ್ನ ಮತ್ತು…

ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ (ನಿರಂತರವಾಗಿ) ಮಾಡುತ್ತಿರಿ. ಏಕೆಂದರೆ, ಅವೆರಡೂ ಕುಲುಮೆಯು ಕಬ್ಬಿಣ, ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು (ಕಿಲುಬನ್ನು) ನಿವಾರಿಸುವಂತೆ, ಬಡತನ ಮತ್ತು ಪಾಪಗಳನ್ನು ನಿವಾರಿಸುತ್ತವೆ. 'ಮಬ್ರೂರ್' (ಸ್ವೀಕಾರಾರ್ಹ) ಹಜ್‌ಗೆ ಸ್ವರ್ಗವನ್ನು ಹೊರತುಪಡಿಸಿ ಬೇರೆ ಪ್ರತಿಫಲವಿಲ್ಲ

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ (ನಿರಂತರವಾಗಿ) ಮಾಡುತ್ತಿರಿ. ಏಕೆಂದರೆ, ಅವೆರಡೂ ಕುಲುಮೆಯು ಕಬ್ಬಿಣ, ಚಿನ್ನ ಮತ್ತು ಬೆಳ್ಳಿಯ ಕಲ್ಮಶವನ್ನು (ಕಿಲುಬನ್ನು) ನಿವಾರಿಸುವಂತೆ, ಬಡತನ ಮತ್ತು ಪಾಪಗಳನ್ನು ನಿವಾರಿಸುತ್ತವೆ. 'ಮಬ್ರೂರ್' (ಸ್ವೀಕಾರಾರ್ಹ) ಹಜ್‌ಗೆ ಸ್ವರ್ಗವನ್ನು ಹೊರತುಪಡಿಸಿ ಬೇರೆ ಪ್ರತಿಫಲವಿಲ್ಲ".

[صحيح] [رواه الترمذي والنسائي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಜ್ ಮತ್ತು ಉಮ್ರಾಗಳನ್ನು ಒಂದರ ನಂತರ ಒಂದರಂತೆ ಮಾಡಲು ಮತ್ತು ಸಾಮರ್ಥ್ಯವಿರುವಾಗ ಅವುಗಳನ್ನು ನಿರ್ವಹಿಸುವುದನ್ನು ನಿಲ್ಲಿಸದಿರಲು ಪ್ರೋತ್ಸಾಹಿಸಿದ್ದಾರೆ. ಏಕೆಂದರೆ, ಅವುಗಳನ್ನು ನಿರ್ವಹಿಸುವುದು ಬಡತನ ಮತ್ತು ಪಾಪಗಳನ್ನು ಹಾಗೂ ಹೃದಯದ ಮೇಲೆ ಪಾಪಗಳ ಪರಿಣಾಮವನ್ನು ಹೋಗಲಾಡಿಸಲು ಕಾರಣವಾಗುತ್ತದೆ; ಹೇಗೆ ಬೆಂಕಿಯನ್ನು ಊದುವುದು (ಕುಲುಮೆ) ಕಬ್ಬಿಣದ ಕೊಳೆಯನ್ನು ಮತ್ತು ಅದರಲ್ಲಿ ಬೆರೆತಿರುವ ಇತರ (ಅನಗತ್ಯ) ಲೋಹಗಳನ್ನು ಹೋಗಲಾಡಿಸಲು ಕಾರಣವಾಗುತ್ತದೆಯೋ ಹಾಗೆ.

فوائد الحديث

ಹಜ್ ಮತ್ತು ಉಮ್ರಾವನ್ನು ಒಂದರ ನಂತರ ಒಂದರಂತೆ ಮಾಡುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ ಮತ್ತು ಅದಕ್ಕಾಗಿ ಪ್ರೋತ್ಸಾಹಿಸಲಾಗಿದೆ.

ಹಜ್ ಮತ್ತು ಉಮ್ರಾವನ್ನು ನಿರಂತರವಾಗಿ ಮಾಡುವುದು ಶ್ರೀಮಂತಿಕೆಗೆ ಮತ್ತು ಪಾಪಗಳ ಕ್ಷಮೆಗೆ ಕಾರಣವಾಗುತ್ತದೆ.

ಮುಬಾರಕ್‌ಪೂರಿ ಹೇಳುತ್ತಾರೆ: "ಅವೆರಡೂ ಬಡತನವನ್ನು ನಿವಾರಿಸುತ್ತವೆ" — ಅಂದರೆ ಅದನ್ನು ಹೋಗಲಾಡಿಸುತ್ತವೆ. ಇದು ಕೈಯಲ್ಲಿ ಸಂಪತ್ತು ಬರುವ ಮೂಲಕ 'ಬಾಹ್ಯ ಬಡತನ'ವನ್ನು, ಮತ್ತು ಹೃದಯದ ಶ್ರೀಮಂತಿಕೆ (ತೃಪ್ತಿ) ಬರುವ ಮೂಲಕ 'ಆಂತರಿಕ ಬಡತನ'ವನ್ನು ನಿವಾರಿಸುವುದನ್ನು ಒಳಗೊಳ್ಳಬಹುದು.

التصنيفات

Virtue of Hajj and Umrah