إعدادات العرض
ನಮಾಝ್‌ಗೆ 'ಇಕಾಮತ್' ಕರೆಯಲಾದರೆ, ಕಡ್ಡಾಯ (ಫರ್ಝ್) ನಮಾಝ್ ಹೊರತುಪಡಿಸಿ ಬೇರೆ ಯಾವುದೇ ನಮಾಝ್ ಇಲ್ಲ
ನಮಾಝ್‌ಗೆ 'ಇಕಾಮತ್' ಕರೆಯಲಾದರೆ, ಕಡ್ಡಾಯ (ಫರ್ಝ್) ನಮಾಝ್ ಹೊರತುಪಡಿಸಿ ಬೇರೆ ಯಾವುದೇ ನಮಾಝ್ ಇಲ್ಲ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮಾಝ್‌ಗೆ 'ಇಕಾಮತ್' ಕರೆಯಲಾದರೆ, ಕಡ್ಡಾಯ (ಫರ್ಝ್) ನಮಾಝ್ ಹೊರತುಪಡಿಸಿ ಬೇರೆ ಯಾವುದೇ ನಮಾಝ್ ಇಲ್ಲ."
الترجمة
العربية Português دری Македонски Magyar Tiếng Việt ქართული বাংলা Kurdî ไทย অসমীয়া Nederlands ਪੰਜਾਬੀ Indonesia Kiswahili Hausa ភាសាខ្មែរ English ગુજરાતી Tagalog Русский मराठी മലയാളം Српски සිංහලالشرح
ಕಡ್ಡಾಯ (ಫರ್ಝ್) ನಮಾಝ್‌ಗಾಗಿ 'ಇಕಾಮತ್' ಕರೆ ನೀಡಿದ ನಂತರ, ಮಸೀದಿಯಲ್ಲಿರುವವರು ನಫಿಲ್ (ಐಚ್ಛಿಕ) ನಮಾಝ್ ಪ್ರಾರಂಭಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ.فوائد الحديث
ಮಸೀದಿಯಲ್ಲಿರುವಾಗ ಕಡ್ಡಾಯ ನಮಾಝ್‌ಗೆ ಇಕಾಮತ್ ಕರೆಯಲಾದರೆ, ನಫಿಲ್ ನಮಾಝ್ ಮಾಡುವುದನ್ನು ನಿಷೇಧಿಸಲಾಗಿದೆ.
ಇಕಾಮತ್ ಆದ ನಂತರ ನಫಿಲ್ ನಮಾಝನ್ನು ಆರಂಭಿಸುವುದು ನಿಷಿದ್ಧವಾಗಿದೆ. ಅದು ಕಡ್ಡಾಯ ನಮಾಝಿನ ಜೊತೆಗಿರುವ ಸುನ್ನತ್ ನಮಾಝ್ ಆಗಿದ್ದರೂ ಸರಿ — ಉದಾಹರಣೆಗೆ ಸುಬಹ್ ಅಥವಾ ಝುಹರ್‌ನ ಸುನ್ನತ್ ಆಗಿದ್ದರೂ ಅಥವಾ ಬೇರೆಯದಾಗಿದ್ದರೂ ಸರಿ.
ಒಬ್ಬ ವ್ಯಕ್ತಿ ನಫಿಲ್ ನಮಾಝಿನಲ್ಲಿದ್ದಾಗ (ಜಮಾಅತ್) ನಮಾಝ್‌ಗೆ ಇಕಾಮತ್ ಕರೆಯಲಾದರೆ; ಒಂದು ವೇಳೆ ಅವನ ನಮಾಝಿನಲ್ಲಿ ಒಂದು ರಕ್ಅತ್‌ಗಿಂತ ಕಡಿಮೆ ಭಾಗ ಉಳಿದಿದ್ದರೆ (ಅಂದರೆ ನಮಾಝ್ ಮುಗಿಯುವ ಹಂತದಲ್ಲಿದ್ದರೆ), ಅವನು ಅದನ್ನು ಹಗುರವಾಗಿ (ಬೇಗ) ಪೂರ್ತಿಗೊಳಿಸಬೇಕು. ಇಲ್ಲದಿದ್ದರೆ (ಇನ್ನೂ ಹೆಚ್ಚು ಬಾಕಿಯಿದ್ದರೆ), 'ತಕ್ಬೀರತುಲ್-ಇಹ್ರಾಮ್'ನ (ಆರಂಭದ ತಕ್ಬೀರ್‌ನ) ಪುಣ್ಯವನ್ನು ಪಡೆಯಲು ಅವನು ನಮಾಝನ್ನು ಮುರಿದುಬಿಡಬೇಕು.
