Virtue and Rulings of Congregational Prayer

Virtue and Rulings of Congregational Prayer

2- "ಒಬ್ಬ ವ್ಯಕ್ತಿ ಸಾಮೂಹಿಕವಾಗಿ (ಜಮಾಅತ್‌ನೊಂದಿಗೆ) ನಮಾಝ್ ನಿರ್ವಹಿಸುವುದು, ಆತ ತನ್ನ ಮನೆಯಲ್ಲಿ ಅಥವಾ ತನ್ನ ಮಾರುಕಟ್ಟೆಯಲ್ಲಿ ನಿರ್ವಹಿಸುವ ನಮಾಝ್‌ಗಿಂತ ಇಪ್ಪತ್ತಕ್ಕಿಂತಲೂ ಹೆಚ್ಚು ಪದವಿಗಳನ್ನು ಹೊಂದಿದೆ.* ಅದೇಕೆಂದರೆ, ಅವರಲ್ಲೊಬ್ಬನು ಅತ್ಯುತ್ತಮ ರೀತಿಯಲ್ಲಿ ವುದೂ (ಅಂಗಸ್ನಾನ) ನಿರ್ವಹಿಸಿ, ನಂತರ ಮಸೀದಿಗೆ ಹೊರಡುತ್ತಾನೆ. ನಮಾಝಿನ ಹೊರತು ಇನ್ನೇನೂ ಅವನನ್ನು (ಹೊರಡುವಂತೆ) ಪ್ರಚೋದಿಸುವುದಿಲ್ಲ. ಅವನು ನಮಾಝನ್ನಲ್ಲದೆ ಇನ್ನೇನನ್ನೂ ಉದ್ದೇಶಿಸುವುದೂ ಇಲ್ಲ. ಹಾಗಾದರೆ, ಅವನು ಮಸೀದಿಯನ್ನು ಪ್ರವೇಶಿಸುವ ತನಕ ಅವನ ಒಂದೊಂದು ಹೆಜ್ಜೆಗೂ ಅವನಿಗೆ ಒಂದೊಂದು ಪದವಿಯನ್ನು ಏರಿಸಲಾಗುತ್ತದೆ ಮತ್ತು ಅವನಿಂದ ಒಂದೊಂದು ಪಾಪವನ್ನು ಅಳಿಸಲಾಗುತ್ತದೆ. ಅವನು ಮಸೀದಿಯನ್ನು ಪ್ರವೇಶಿಸಿದ ನಂತರ, ಎಲ್ಲಿಯವರೆಗೆ ನಮಾಝ್ ಅವನನ್ನು ಅಲ್ಲಿ ತಡೆದಿರಿಸುತ್ತದೋ ಅಲ್ಲಿಯ ತನಕ ಅವನು ನಮಾಝ್ ಮಾಡುತ್ತಿದ್ದಾನೆಂದೇ ಪರಿಗಣಿಸಲಾಗುತ್ತದೆ. ನಿಮ್ಮಲ್ಲೊಬ್ಬನು ನಮಾಝ್ ಮಾಡಿದ ಸ್ಥಳದಲ್ಲೇ ಕುಳಿತಿರುವ ತನಕ ದೇವದೂತರುಗಳು, “ಓ ಅಲ್ಲಾಹ್! ಇವನಿಗೆ ದಯೆ ತೋರು! ಓ ಅಲ್ಲಾಹ್! ಇವನನ್ನು ಕ್ಷಮಿಸು! ಓ ಅಲ್ಲಾಹ್! ಇವನ ಪಶ್ಚಾತ್ತಾಪವನ್ನು ಸ್ವೀಕರಿಸು!” ಎಂದು ಅವನಿಗಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ. ಅವನು ಇತರರಿಗೆ ತೊಂದರೆ ಕೊಡದಿರುವ ತನಕ, ಅಥವಾ ಅವನ ವುದೂ (ಅಂಗಸ್ನಾನ) ಅಸಿಂಧುವಾಗದಿರುವ ತನಕ."