ಪುರುಷರ ಸಾಲುಗಳಲ್ಲಿ ಅತ್ಯುತ್ತಮವಾದುದು ಮೊದಲನೆಯ ಸಾಲು ಮತ್ತು ಅತಿಕೆಟ್ಟದು ಕೊನೆಯ ಸಾಲು. ಮಹಿಳೆಯರ ಸಾಲುಗಳಲ್ಲಿ…

ಪುರುಷರ ಸಾಲುಗಳಲ್ಲಿ ಅತ್ಯುತ್ತಮವಾದುದು ಮೊದಲನೆಯ ಸಾಲು ಮತ್ತು ಅತಿಕೆಟ್ಟದು ಕೊನೆಯ ಸಾಲು. ಮಹಿಳೆಯರ ಸಾಲುಗಳಲ್ಲಿ ಅತ್ಯುತ್ತಮವಾದುದು ಕೊನೆಯ ಸಾಲು ಮತ್ತು ಅತಿಕೆಟ್ಟದು ಮೊದಲನೆಯ ಸಾಲು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುರುಷರ ಸಾಲುಗಳಲ್ಲಿ ಅತ್ಯುತ್ತಮವಾದುದು ಮೊದಲನೆಯ ಸಾಲು ಮತ್ತು ಅತಿಕೆಟ್ಟದು ಕೊನೆಯ ಸಾಲು. ಮಹಿಳೆಯರ ಸಾಲುಗಳಲ್ಲಿ ಅತ್ಯುತ್ತಮವಾದುದು ಕೊನೆಯ ಸಾಲು ಮತ್ತು ಅತಿಕೆಟ್ಟದು ಮೊದಲನೆಯ ಸಾಲು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುರುಷರು ನಮಾಝಿಗಾಗಿ ನಿಲ್ಲುವ ಸಾಲುಗಳಲ್ಲಿ ಅತ್ಯುತ್ತಮವಾದುದು ಮತ್ತು ಅತಿಹೆಚ್ಚು ಪ್ರತಿಫಲವಿರುವುದು ಮೊದಲನೆಯ ಸಾಲು. ಏಕೆಂದರೆ, ಈ ಸಾಲಿನಲ್ಲಿರುವವರು ಇಮಾಮರಿಗೆ ಹತ್ತಿರವಾಗಿರುತ್ತಾರೆ, ಅವರ ಪಠಣವನ್ನು ಆಲಿಸುತ್ತಾರೆ ಮತ್ತು ಮಹಿಳೆಯರಿಂದ ದೂರವಿರುತ್ತಾರೆ. ಅವುಗಳಲ್ಲಿ ಅತಿಕೆಟ್ಟದು, ಅತ್ಯಂತ ಕಡಿಮೆ ಪ್ರತಿಫಲವಿರುವುದು ಮತ್ತು ಧರ್ಮದ ಬೇಡಿಕೆಯಿಂದ ಬಹುದೂರವಿರುವುದು ಕೊನೆಯ ಸಾಲು. ಅದೇ ರೀತಿ, ಮಹಿಳೆಯರ ಸಾಲುಗಳಲ್ಲಿ ಅತ್ಯುತ್ತಮವಾದುದು ಕೊನೆಯ ಸಾಲು. ಏಕೆಂದರೆ, ಅದು ಅವರನ್ನು ಸಂಪೂರ್ಣವಾಗಿ ಮರೆಮಾಚುತ್ತದೆ, ಪುರುಷರೊಡನೆ ಬೆರೆಯುವುದರಿಂದ, ಅವರನ್ನು ನೋಡುವುದರಿಂದ ಮತ್ತು ಅವರಿಂದ ಉಂಟಾಗುವ ಪರೀಕ್ಷೆಗಳಿಗೆ ಒಳಗಾಗುವುದರಿಂದ ಅವರು ಬಹಳ ದೂರವಿರುತ್ತಾರೆ. ಅವರಲ್ಲಿ ಮೊದಲನೆಯ ಸಾಲು ಅತಿಕೆಟ್ಟದಾಗಿದೆ. ಏಕೆಂದರೆ, ಅದು ಅವರನ್ನು ಪುರುಷರಿಗೆ ಹತ್ತಿರವಾಗಿಡುತ್ತದೆ ಮತ್ತು ಅವರನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ.

فوائد الحديث

ಸತ್ಕರ್ಮಗಳನ್ನು ನಿರ್ವಹಿಸಲು ಮತ್ತು ನಮಾಝ್‌ಗಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲಲು ಧಾವಂತದಿಂದ ಮುಂದೆ ಬರುವಂತೆ ಪುರುಷರನ್ನು ಪ್ರೋತ್ಸಾಹಿಸಲಾಗಿದೆ.

ಮಹಿಳೆಯರು ಮಸೀದಿಗಳಲ್ಲಿ ಪುರುಷರೊಡನೆ ಬೇರೆಯೇ ಸಾಲುಗಳಲ್ಲಿ ನಿಂತು ನಮಾಝ್ ಮಾಡಬಹುದು. ಆದರೆ ಅವರು ಸಂಪೂರ್ಣ ಮುಚ್ಚಿಕೊಂಡಿರಬೇಕು ಮತ್ತು ಸಭ್ಯತೆಯನ್ನು ಪಾಲಿಸಬೇಕು.

ಮಹಿಳೆಯರು ನಮಾಝಿಗಾಗಿ ಮಸೀದಿಯಲ್ಲಿ ಒಟ್ಟುಗೂಡಿದರೆ ಪುರುಷರಂತೆ ಸಾಲುಗಟ್ಟಿ ನಿಲ್ಲಬೇಕು. ಬೇರೆ ಬೇರೆಯಾಗಿ ನಮಾಝ್ ನಿರ್ವಹಿಸಬಾರದು. ಬದಲಿಗೆ, ಪುರುಷರಂತೆ ಸಾಲನ್ನು ನೇರಗೊಳಿಸಿ ಒಬ್ಬರಿಗೊಬ್ಬರು ತಾಗಿಕೊಂಡು ನಡುವೆ ಎಡೆ ಬಿಡದೆ ನಿಲ್ಲಬೇಕು.

ಆರಾಧನೆಯ ಸಂದರ್ಭಗಳಲ್ಲೂ ಸಹ ಮಹಿಳೆಯರು ಪುರುಷರಿಂದ ದೂರವಿರುವುದನ್ನು ಪ್ರೋತ್ಸಾಹಿಸುವ ಮೂಲಕ ಈ ವಿಷಯದಲ್ಲಿ ಇಸ್ಲಾಂ ಧರ್ಮವು ತೋರುವ ತೀವ್ರ ಕಾಳಜಿಯನ್ನು ವಿವರಿಸಲಾಗಿದೆ.

ಕರ್ಮಗಳ ಆಧಾರದಲ್ಲಿ ಜನರಿಗಿರುವ ಶ್ರೇಷ್ಠತೆಯು ಹೆಚ್ಚು ಕಡಿಮೆಯಾಗುತ್ತದೆಯೆಂದು ತಿಳಿಸಲಾಗಿದೆ.

ನವವಿ ಹೇಳಿದರು: "ಪುರುಷರ ಸಾಲುಗಳ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ಅವರಲ್ಲಿ ಮೊದಲನೆಯ ಸಾಲು ಯಾವಾಗಲೂ ಅತ್ಯುತ್ತಮವಾದುದು ಮತ್ತು ಕೊನೆಯ ಸಾಲು ಯಾವಾಗಲೂ ಅತಿಕೆಟ್ಟದು. ಮಹಿಳೆಯರ ಸಾಲುಗಳ ಬಗ್ಗೆ ಹೇಳುವುದಾದರೆ, ಈ ಹದೀಸಿನಲ್ಲಿ ಹೇಳಿರುವುದು ಪುರುಷರೊಂದಿಗೆ ನಮಾಝ್ ಮಾಡುವ ಮಹಿಳೆಯರ ಬಗ್ಗೆ ಮಾತ್ರ. ಆದರೆ, ಮಹಿಳೆಯರು ಪುರುಷರಿಂದ ದೂರವಾಗಿ ಬೇರೆಯೇ ನಮಾಝ್ ಮಾಡುವಾಗ ಅವರಲ್ಲಿ ಮೊದಲನೆಯ ಸಾಲು ಅತ್ಯುತ್ತಮವಾದುದು ಮತ್ತು ಕೊನೆಯ ಸಾಲು ಅತಿಕೆಟ್ಟದು."

ನವವಿ ಹೇಳಿದರು: "ಯಾವ ಸಾಲಿನ ಬಗ್ಗೆ ಹದೀಸ್‌ಗಳಲ್ಲಿ ಶ್ರೇಷ್ಠತೆಗಳು ಮತ್ತು ಪ್ರೋತ್ಸಾಹಗಳು ವರದಿಯಾಗಿವೆಯೋ ಆ ಪ್ರಶಂಸಾರ್ಹ ಸಾಲು ಇಮಾಮರ ನಂತರದ ಸಾಲಾಗಿದೆ. ಆ ಸಾಲಿನಲ್ಲಿರುವ ಜನರು ಆರಂಭದಲ್ಲಿ (ನಮಾಝಿಗೆ) ಬಂದವರು ಅಥವಾ ಕೊನೆಯಲ್ಲಿ ಬಂದವರಾಗಿದ್ದರೂ ಸಹ. ಅದೇ ರೀತಿ ಗೋಡೆ ಮುಂತಾದವುಗಳು ಅದರ ಮಧ್ಯೆಯಿದ್ದರೂ ಸಹ."

التصنيفات

Virtue and Rulings of Congregational Prayer