ತಮಗೆ ನಮಾಝ್‌ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು…

ತಮಗೆ ನಮಾಝ್‌ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನೀವು ಅದಕ್ಕೆ ಉತ್ತರ ನೀಡಬೇಕು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಒಬ್ಬ ಅಂಧ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಮಸೀದಿಗೆ ಬರಲು ದಾರಿ ತೋರಿಸುವವರು ಯಾರೂ ಇಲ್ಲ." ನಂತರ ಮನೆಯಲ್ಲೇ ನಮಾಝ್ ನಿರ್ವಹಿಸಲು ರಿಯಾಯಿತಿ ನೀಡಬೇಕೆಂದು ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಂತಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ರಿಯಾಯಿತಿ ನೀಡಿದರು. ಆ ವ್ಯಕ್ತಿ ಹೊರಡುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಕರೆದು ಕೇಳಿದರು: "ತಮಗೆ ನಮಾಝ್‌ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನೀವು ಅದಕ್ಕೆ ಉತ್ತರ ನೀಡಬೇಕು."

[صحيح] [رواه مسلم]

الشرح

ಒಮ್ಮೆ ಒಬ್ಬ ಅಂಧ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಐದು ವೇಳೆಯ ನಮಾಝ್‌ಗಳಿಗೆ ನನ್ನ ಕೈ ಹಿಡಿದು ಮಸೀದಿಗೆ ಕರೆತರಲು ನನಗೆ ಯಾವುದೇ ಸಹಾಯಕರಿಲ್ಲ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಮೂಹಿಕ ನಮಾಝ್ (ಜಮಾಅತ್) ಗೆ ಹಾಜರಾಗದಿರಲು ತನಗೆ ರಿಯಾಯಿತಿ ನೀಡಬೇಕೆಂದು ಅವರು ಬಯಸಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ರಿಯಾಯಿತಿ ನೀಡಿದರು. ಆದರೆ ಆ ವ್ಯಕ್ತಿ ಅಲ್ಲಿಂದ ಹೊರಡುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಕರೆದು ಕೇಳಿದರು: "ತಮಗೆ ನಮಾಝ್‌ಗೆ ಕರೆಯುವ ಅಝಾನ್ ಕೇಳುತ್ತದೆಯೇ?" ಆ ವ್ಯಕ್ತಿ ಹೌದು ಎಂದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನೀವು ನಮಾಝ್‌ಗೆ ಕರೆ ನೀಡುವವನಿಗೆ ಉತ್ತರ ನೀಡಬೇಕು."

فوائد الحديث

ಸಾಮೂಹಿಕವಾಗಿ ನಮಾಝ್ ನಿರ್ವಹಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಕಡ್ಡಾಯ ಮತ್ತು ಅನಿವಾರ್ಯವಾಗಿರುವ ಕಾರ್ಯಕ್ಕೆ ಮಾತ್ರ ರಿಯಾಯಿತಿ ನೀಡಲಾಗುತ್ತದೆ.

ಅಝಾನ್ ಕೇಳುವವನು ಅದಕ್ಕೆ ಉತ್ತರ ನೀಡಬೇಕೆಂದು ಆಜ್ಞಾಪಿಸಿದ್ದು ನಮಾಝನ್ನು ಸಾಮೂಹಿಕವಾಗಿ (ಜಮಾಅತ್ ಆಗಿ) ನಿರ್ವಹಿಸುವುದು ಕಡ್ಡಾಯವೆಂದು ಸೂಚಿಸುತ್ತದೆ. ಏಕೆಂದರೆ, ಮೂಲನಿಯಮದ ಪ್ರಕಾರ ಆಜ್ಞಾಪಿಸಲಾದ ವಿಷಯಗಳೆಲ್ಲವೂ ಕಡ್ಡಾಯವಾಗಿವೆ.

التصنيفات

Virtue and Rulings of Congregational Prayer