ಯಾರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುತ್ತಾನೋ, ಅವನು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವನಿಗೆ…

ಯಾರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುತ್ತಾನೋ, ಅವನು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವನಿಗೆ ಸ್ವರ್ಗದಲ್ಲಿ ಒಂದು ಔತಣವನ್ನು ಸಿದ್ಧಗೊಳಿಸುವನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುತ್ತಾನೋ, ಅವನು ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವನಿಗೆ ಸ್ವರ್ಗದಲ್ಲಿ ಒಂದು ಔತಣವನ್ನು ಸಿದ್ಧಗೊಳಿಸುವನು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಸಿಹಿಸುದ್ದಿ ತಿಳಿಸುವುದೇನೆಂದರೆ, ಯಾರು ಆರಾಧನೆ ಮಾಡಲು, ಜ್ಞಾನ ಸಂಪಾದಿಸಲು ಅಥವಾ ಇತರ ಉದ್ದೇಶಗಳಿಗಾಗಿ ಯಾವುದೇ ಸಮಯದಲ್ಲಿ, ಅದು ಬೆಳಗ್ಗೆ ಆಗಿರಲಿ ಅಥವಾ ಸಂಜೆಯಾಗಿರಲಿ, ಮಸೀದಿಗೆ ಹೋಗುತ್ತಾರೋ, ಅವರು ಹಗಲು ಮತ್ತು ರಾತ್ರಿ ಮಸೀದಿಗೆ ಹೋಗುವಾಗಲೆಲ್ಲಾ ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಒಂದು ವಸತಿ ಮತ್ತು ಔತಣವನ್ನು ಸಿದ್ಧಗೊಳಿಸುವನು.

فوائد الحديث

ಮಸೀದಿಗೆ ತೆರಳುವ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಮಸೀದಿಯಲ್ಲಿ ಸಾಮೂಹಿಕ (ಜಮಾಅತ್) ನಮಾಝ್ ನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ. ಅಲ್ಲಾಹು ತನ್ನ ಮನೆಯನ್ನು ಗುರಿಯಾಗಿಟ್ಟು ಬರುವವರಿಗೆ ಸಿದ್ಧಗೊಳಿಸಿದ ಅದೆಷ್ಟು ಒಳಿತು, ಶ್ರೇಷ್ಠತೆ, ಪ್ರತಿಫಲ ಮತ್ತು ಔತಣವನ್ನು ಮಸೀದಿಗೆ ಹೋಗದವರು ಕಳೆದುಕೊಳ್ಳುತ್ತಿದ್ದಾರೆ!

ಜನರು ತಮ್ಮ ಮನೆಗೆ ಬರುವವರನ್ನು ಆದರಿಸಿ ಸತ್ಕರಿಸುತ್ತಾರೆ. ಅವರಿಗೆ ಆಹಾರಗಳನ್ನು ನೀಡುತ್ತಾರೆ. ಸರ್ವಶಕ್ತನಾದ ಅಲ್ಲಾಹು ಅವನ ಸೃಷ್ಟಿಗಳಿಗಿಂತಲೂ ಹೆಚ್ಚು ಉದಾರಿಯಾಗಿದ್ದಾನೆ! ಅವನ ಮನೆಯನ್ನು ಉದ್ದೇಶವಾಗಿಟ್ಟು ಬರುವವರನ್ನು ಅವನು ಗೌರವಿಸುತ್ತಾನೆ ಮತ್ತು ಅವರಿಗೆ ಅತಿದೊಡ್ಡ ಔತಣವನ್ನು ಸಿದ್ಧಗೊಳಿಸುತ್ತಾನೆ.

ಮಸೀದಿಗೆ ತೆರಳಲು ಸಂತೋಷಪಡಬೇಕೆಂದು ತಿಳಿಸಲಾಗಿದೆ. ಏಕೆಂದರೆ, ಬೆಳಿಗ್ಗೆ ಮತ್ತು ಸಂಜೆ ಮಸೀದಿಗೆ ಹೋಗುವಾಗಲೆಲ್ಲಾ ಆ ಸಂಖ್ಯೆಗೆ ಅನುಗುಣವಾಗಿ ಔತಣವನ್ನು ಸಿದ್ಧಗೊಳಿಸಲಾಗುತ್ತದೆ.

التصنيفات

Virtue and Rulings of Congregational Prayer