إعدادات العرض
ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ)…
ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ) ಕೂದಲನ್ನು ಬೋಳಿಸುವುದು – ಇವುಗಳಲ್ಲಿ ನಾವು ನಲವತ್ತು ರಾತ್ರಿಗಳಿಗಿಂತ ಹೆಚ್ಚು ಕಾಲ (ಅವುಗಳನ್ನು ಹಾಗೆಯೇ) ಬಿಡಬಾರದೆಂದು ನಮಗೆ ಸಮಯವನ್ನು ನಿಗದಿಪಡಿಸಲಾಗಿದೆ
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ) ಕೂದಲನ್ನು ಬೋಳಿಸುವುದು – ಇವುಗಳಲ್ಲಿ ನಾವು ನಲವತ್ತು ರಾತ್ರಿಗಳಿಗಿಂತ ಹೆಚ್ಚು ಕಾಲ (ಅವುಗಳನ್ನು ಹಾಗೆಯೇ) ಬಿಡಬಾರದೆಂದು ನಮಗೆ ಸಮಯವನ್ನು ನಿಗದಿಪಡಿಸಲಾಗಿದೆ."
الترجمة
العربية Tiếng Việt Indonesia Nederlands Kiswahili English অসমীয়া ગુજરાતી සිංහල Magyar ქართული Hausa Română ไทย Português తెలుగు मराठी ភាសាខ្មែរ دری አማርኛ বাংলা Kurdî Македонски Tagalog Українська ਪੰਜਾਬੀ മലയാളം Moore Türkçe پښتو Bosanskiالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುರುಷನ ಮೀಸೆಯನ್ನು ಕತ್ತರಿಸುವುದು, ಕೈ ಮತ್ತು ಕಾಲುಗಳ ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ ಕೂದಲನ್ನು ಬೋಳಿಸುವುದು – ಇವುಗಳನ್ನು ನಲವತ್ತು ದಿನಗಳಿಗಿಂತ ಹೆಚ್ಚು ಕಾಲ ಬಿಡಬಾರದೆಂದು ಸಮಯವನ್ನು ನಿಗದಿಪಡಿಸಿದರು.فوائد الحديث
ಇಮಾಮ್ ಶೌಕಾನಿ ಹೇಳುತ್ತಾರೆ: "ಸರಿಯಾದ ಅಭಿಪ್ರಾಯವೇನೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಗದಿಪಡಿಸಿದ ನಲವತ್ತು (ದಿನಗಳ) ಮಿತಿಯನ್ನು ಪಾಲಿಸಬೇಕು. ಅದನ್ನು ಮೀರುವುದು ಅನುಮತಿಸಲಾಗಿಲ್ಲ. ಆದರೆ, (ಕೂದಲು, ಉಗುರು) ಬೆಳೆದ ನಂತರ ಆ ಅಂತಿಮ ಸಮಯವು ಮುಗಿಯುವವರೆಗೆ ಕತ್ತರಿಸುವುದು ಇತ್ಯಾದಿಗಳನ್ನು ಬಿಟ್ಟವನು ಸುನ್ನತ್‌ಗೆ ವಿರುದ್ಧವಾಗಿ ಸಾಗಿದನೆಂದು ಪರಿಗಣಿಸಲಾಗುವುದಿಲ್ಲ."
ಇಬ್ನ್ ಹುಬೈರಾ ಹೇಳುತ್ತಾರೆ: "ಈ ಹದೀಸ್ ಆ ಕಾರ್ಯಗಳನ್ನು ವಿಳಂಬಿಸಲು ಇರುವ ಅಂತಿಮ ಮಿತಿಯಾಗಿದೆ. ಆದರೆ ಈ ಮಿತಿಗಿಂತ ಮುಂಚೆಯೇ ಆ ಕಾರ್ಯಗಳನ್ನು ಮಾಡುವುದು ಉತ್ತಮ."
ಇಸ್ಲಾಂ ಸ್ವಚ್ಛತೆ, ಶುದ್ಧೀಕರಣ ಮತ್ತು ಅಲಂಕಾರಕ್ಕೆ ನೀಡುವ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
ಮೀಸೆಯನ್ನು ಕತ್ತರಿಸುವುದು: ಮೇಲ್ತುಟಿಯ ಮೇಲೆ ಬೆಳೆಯುವ ಕೂದಲಿನ ಸ್ವಲ್ಪ ಭಾಗವನ್ನು ಕತ್ತರಿಸುವುದು.
ಕಂಕುಳಿನ ಕೂದಲನ್ನು ಕೀಳುವುದು: ಅಲ್ಲಿ ಬೆಳೆಯುವ ಕೂದಲನ್ನು ನಿವಾರಿಸುವುದು. ಇದು ತೋಳಿನ ಕೀಲು ಮತ್ತು ಭುಜದ ಕೆಳಗಿರುವ ಸ್ಥಳವಾಗಿದೆ.
ಗುಪ್ತಾಂಗದ ಕೂದಲನ್ನು ಬೋಳಿಸುವುದು: ಇದು ಪುರುಷ ಮತ್ತು ಮಹಿಳೆಯ ಜನನಾಂಗದ ಸುತ್ತಲೂ ಬೆಳೆಯುವ ಒರಟು ಕೂದಲಾಗಿದೆ.
التصنيفات
Natural Cleanliness Practices