ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮರವಿದೆ, (ಓಟಕ್ಕಾಗಿ) ಸಿದ್ಧಪಡಿಸಲಾದ ವೇಗದ ಕುದುರೆಯ ಸವಾರನು ನೂರು ವರ್ಷಗಳ ಕಾಲ (ಅದರ…

ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮರವಿದೆ, (ಓಟಕ್ಕಾಗಿ) ಸಿದ್ಧಪಡಿಸಲಾದ ವೇಗದ ಕುದುರೆಯ ಸವಾರನು ನೂರು ವರ್ಷಗಳ ಕಾಲ (ಅದರ ನೆರಳಿನಲ್ಲಿ) ಪ್ರಯಾಣಿಸಿದರೂ ಅದನ್ನು ದಾಟಲು ಸಾಧ್ಯವಾಗುವುದಿಲ್ಲ

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮರವಿದೆ, (ಓಟಕ್ಕಾಗಿ) ಸಿದ್ಧಪಡಿಸಲಾದ ವೇಗದ ಕುದುರೆಯ ಸವಾರನು ನೂರು ವರ್ಷಗಳ ಕಾಲ (ಅದರ ನೆರಳಿನಲ್ಲಿ) ಪ್ರಯಾಣಿಸಿದರೂ ಅದನ್ನು ದಾಟಲು ಸಾಧ್ಯವಾಗುವುದಿಲ್ಲ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದಲ್ಲಿ ಒಂದು ಮರವಿದೆ, ಅದರ ಕೆಳಗೆ ಓಟಕ್ಕಾಗಿ ಸಿದ್ಧಪಡಿಸಲಾದ, ವೇಗವಾಗಿ ಓಡುವ ಕುದುರೆಯ ಸವಾರನು ನೂರು ವರ್ಷಗಳ ಕಾಲ ಪ್ರಯಾಣಿಸಿದರೂ, ಅದರ ಕೊಂಬೆಗಳು ವಾಲಿಕೊಂಡಿರುವ ಕೊನೆಯನ್ನು ಅವನು ತಲುಪುವುದಿಲ್ಲ.

فوائد الحديث

ಸ್ವರ್ಗದ ವಿಸ್ತಾರ, ಮತ್ತು ಅದರ ಮರಗಳ ಬೃಹತ್ ಗಾತ್ರ ವಿವರಿಸಲಾಗಿದೆ.

التصنيفات

Descriptions of Paradise and Hell