ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ

ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ

ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ: "ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ನಮಾಝ್‌ಗಾಗಿ ಕರೆಯುವ ಮುಅದ್ದಿನ್‌ಗಳು, ತಾವು ಮಾಡುವ ಆ ಕರ್ಮದ ಶ್ರೇಷ್ಠತೆಯಿಂದಾಗಿ, ಅವರ ಆ ಒಳಿತಿನ ಹೆಚ್ಚಳದಿಂದಾಗಿ, ಮತ್ತು ಅವರ ಮಹಾನ್ ಪ್ರತಿಫಲದಿಂದಾಗಿ, ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯನ್ನು ಹೊಂದಿರುತ್ತಾರೆ.

فوائد الحديث

ಅಝಾನ್‌ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಅದಕ್ಕಾಗಿ ಪ್ರೋತ್ಸಾಹಿಸಲಾಗಿದೆ.

ಮುಅದ್ದಿನ್‌ಗಳ ಗೌರವವನ್ನು, ಮತ್ತು ಪುನರುತ್ಥಾನ ದಿನದಂದು ಅವರ ಉನ್ನತ ಸ್ಥಾನಮಾನವನ್ನು ವಿವರಿಸಲಾಗಿದೆ.

التصنيفات

The Hereafter Life, The Azan and Iqaamah