إعدادات العرض
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಅನ್ನು 'ತಕ್ಬೀರ್' (ಅಲ್ಲಾಹು ಅಕ್ಬರ್ ಎಂದು ಹೇಳುವ)…
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಅನ್ನು 'ತಕ್ಬೀರ್' (ಅಲ್ಲಾಹು ಅಕ್ಬರ್ ಎಂದು ಹೇಳುವ) ಮೂಲಕ ಮತ್ತು ಕುರ್‌ಆನ್ ಪಾರಾಯಣವನ್ನು 'ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್' (ಸೂರ ಅಲ್-ಫಾತಿಹಾ) ಮೂಲಕ ಆರಂಭಿಸುತ್ತಿದ್ದರು
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಅನ್ನು 'ತಕ್ಬೀರ್' (ಅಲ್ಲಾಹು ಅಕ್ಬರ್ ಎಂದು ಹೇಳುವ) ಮೂಲಕ ಮತ್ತು ಕುರ್‌ಆನ್ ಪಾರಾಯಣವನ್ನು 'ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್' (ಸೂರ ಅಲ್-ಫಾತಿಹಾ) ಮೂಲಕ ಆರಂಭಿಸುತ್ತಿದ್ದರು. ಅವರು 'ರುಕೂ' ಮಾಡಿದಾಗ, ತಮ್ಮ ತಲೆಯನ್ನು (ತುಂಬಾ) ಮೇಲಕ್ಕೆ ಎತ್ತುತ್ತಿರಲಿಲ್ಲ ಮತ್ತು (ತುಂಬಾ) ತಗ್ಗಿಸುತ್ತಿರಲಿಲ್ಲ, ಬದಲಿಗೆ (ಅವೆರಡರ) ನಡುವೆ (ಸಮವಾಗಿ) ಇರಿಸುತ್ತಿದ್ದರು. ಅವರು ರುಕೂವಿನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ನಿಲ್ಲುವವರೆಗೆ ಸುಜೂದ್ ಮಾಡುತ್ತಿರಲಿಲ್ಲ. ಅವರು (ಮೊದಲ) ಸುಜೂದ್‌ನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ಕುಳಿತುಕೊಳ್ಳುವವರೆಗೆ (ಎರಡನೇ) ಸುಜೂದ್ ಮಾಡುತ್ತಿರಲಿಲ್ಲ. ಅವರು ಪ್ರತಿ ಎರಡು ರಕಅತ್‌ಗಳಲ್ಲಿ (ಕುಳಿತಾಗ) 'ಅತ್ತಹಿಯ್ಯಾತ್' ಹೇಳುತ್ತಿದ್ದರು. ಅವರು ತಮ್ಮ ಎಡಗಾಲನ್ನು ಹಾಸಿ (ಅದರ ಮೇಲೆ ಕುಳಿತು), ತಮ್ಮ ಬಲಗಾಲನ್ನು ನೆಟ್ಟಗೆ ಇಡುತ್ತಿದ್ದರು. ಅವರು 'ಉಖ್ಬತು ಶ್ಶೈತಾನ್' (ಶೈತಾನನ ಕೂರುವಿಕೆ) ಅನ್ನು ನಿಷೇಧಿಸುತ್ತಿದ್ದರು. ಒಬ್ಬ ವ್ಯಕ್ತಿಯು ತನ್ನ ತೋಳುಗಳನ್ನು, ಕಾಡುಪ್ರಾಣಿಯು ಹಾಸುವಂತೆ (ನೆಲದ ಮೇಲೆ) ಹಾಸುವುದನ್ನು ನಿಷೇಧಿಸುತ್ತಿದ್ದರು. ಅವರು ನಮಾಝ್ ಅನ್ನು 'ತಸ್ಲೀಮ್' (ಸಲಾಮ್ ಹೇಳುವ) ಮೂಲಕ ಮುಗಿಸುತ್ತಿದ್ದರು".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी ئۇيغۇرچە Hausa Português Kurdî دری Македонски Tiếng Việt Magyar ქართული ไทย অসমীয়া Nederlands ਪੰਜਾਬੀ Kiswahili ગુજરાતી ភាសាខ្មែរ සිංහල मराठी മലയാളംالشرح
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನ ಬಗ್ಗೆ ತಿಳಿಸುತ್ತಿದ್ದಾರೆ. ಅವರು (ಪ್ರವಾದಿ) ತಮ್ಮ ನಮಾಝ್ ಅನ್ನು 'ತಕ್ಬೀರತುಲ್ ಇಹ್ರಾಮ್' ಮೂಲಕ ಪ್ರಾರಂಭಿಸುತ್ತಿದ್ದರು, ಅಂದರೆ: “ಅಲ್ಲಾಹು ಅಕ್ಬರ್” ಎಂದು ಹೇಳುತ್ತಿದ್ದರು. ನಂತರ ಪಾರಾಯಣವನ್ನು ಸೂರ ಅಲ್-ಫಾತಿಹಾ ಮೂಲಕ ಆರಂಭಿಸುತ್ತಿದ್ದರು: “ಅಲ್ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್…” ನಿಂತುಕೊಂಡ ನಂತರ ಅವರು ರುಕೂ ಮಾಡಿದಾಗ, ರುಕೂವಿನ ಸಮಯದಲ್ಲಿ ತಮ್ಮ ತಲೆಯನ್ನು ಮೇಲಕ್ಕೆ ಎತ್ತುತ್ತಿರಲಿಲ್ಲ ಅಥವಾ ತಗ್ಗಿಸುತ್ತಿರಲಿಲ್ಲ, ಬದಲಿಗೆ ಅದನ್ನು ಸಮವಾಗಿ ಮತ್ತು ನೇರವಾಗಿ ಇಡುತ್ತಿದ್ದರು. ಅವರು ರುಕೂವಿನಿಂದ ತಮ್ಮ ತಲೆಯನ್ನು ಎತ್ತಿದಾಗ, ಸುಜೂದ್ ಮಾಡುವ ಮೊದಲು ನೇರವಾಗಿ ನಿಲ್ಲುತ್ತಿದ್ದರು. ಅವರು ಮೊದಲ ಸುಜೂದ್‌ನಿಂದ ತಮ್ಮ ತಲೆಯನ್ನು ಎತ್ತಿದಾಗ, ನೇರವಾಗಿ ಕುಳಿತುಕೊಳ್ಳುವವರೆಗೆ ಎರಡನೇ ಸುಜೂದ್ ಮಾಡುತ್ತಿರಲಿಲ್ಲ. ಅವರು ಪ್ರತಿ ಎರಡು ರಕಅತ್‌ಗಳ ನಂತರ 'ತಶಹ್ಹುದ್'ಗಾಗಿ ಕುಳಿತುಕೊಳ್ಳುತ್ತಿದ್ದರು ಮತ್ತು: “ಅತ್ತಹಿಯ್ಯಾತು ಲಿಲ್ಲಾಹಿ ವಸ್ಸಲವಾತು ವತ್ತಯ್ಯಿಬಾತ್…” ಎಂದು ಹೇಳುತ್ತಿದ್ದರು. ಅವರು ಎರಡು ಸುಜೂದ್‌ಗಳ ನಡುವೆ ಅಥವಾ (ಮೊದಲ) ತಶಹ್ಹುದ್‌ಗಾಗಿ ಕುಳಿತಾಗ, ತಮ್ಮ ಎಡ ಪಾದವನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದರು ಮತ್ತು ತಮ್ಮ ಬಲ ಪಾದವನ್ನು ನೆಟ್ಟಗೆ ಇಡುತ್ತಿದ್ದರು. ನಮಾಝ್ ಮಾಡುವವನು ತನ್ನ ನಮಾಝ್‌ನಲ್ಲಿ ಶೈತಾನನು ಕುಳಿತುಕೊಳ್ಳುವಂತೆ ಕುಳಿತುಕೊಳ್ಳುವುದನ್ನು ಅವರು ನಿಷೇಧಿಸುತ್ತಿದ್ದರು. ಅದು ಹೇಗೆಂದರೆ, ತನ್ನ ಎರಡೂ ಪಾದಗಳನ್ನು ನೆಲದ ಮೇಲೆ ಹಾಸಿ, ತನ್ನ ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳುವುದು, ಅಥವಾ ತನ್ನ ಪೃಷ್ಠವನ್ನು ನೆಲಕ್ಕೆ ತಾಗಿಸಿ, ಮೊಣಕಾಲುಗಳನ್ನು ಎತ್ತಿಟ್ಟು, ನಾಯಿಯು ಕುಳಿತುಕೊಳ್ಳುವಂತೆ ಕೈಗಳನ್ನು ನೆಲದ ಮೇಲೆ ಇಡುವುದು. ಅದೇ ರೀತಿ ನಮಾಝ್ ಮಾಡುವವನು ಸುಜೂದ್‌ನಲ್ಲಿ, ಕಾಡುಪ್ರಾಣಿಗಳು ಹಾಸುವಂತೆ ತನ್ನ ಎರಡೂ ತೋಳುಗಳನ್ನು ನೆಲದ ಮೇಲೆ ಹಾಸುವುದನ್ನು (ನಿಷೇಧಿಸುತ್ತಿದ್ದರು). ಅವರು ತಮ್ಮ ನಮಾಝ್ ಅನ್ನು ತಸ್ಲೀಮ್ ಮೂಲಕ ಮುಗಿಸುತ್ತಿದ್ದರು. ಅಂದರೆ, “ಅಸ್ಸಲಾಮು ಅಲೈಕುಮ್ ವ ರಹ್ಮತುಲ್ಲಾಹ್” ಎಂದು ಬಲಗಡೆಗೆ ಒಮ್ಮೆ ಮತ್ತು ಎಡಗಡೆಗೆ ಇನ್ನೊಮ್ಮೆ ಹೇಳುತ್ತಿದ್ದರು.فوائد الحديث
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನ ವಿಧಾನದ ಬಗ್ಗೆ ಕೆಲವು ವಿವರಣೆಗಳನ್ನು ನೀಡಲಾಗಿದೆ.
'ತಕ್ಬೀರತುಲ್ ಇಹ್ರಾಮ್' (ಆರಂಭದ ತಕ್ಬೀರ್) ಕಡ್ಡಾಯವಾಗಿದೆ. ಇದು ನಮಾಝ್‌ನಲ್ಲಿ ಹೇಳುವ ಮತ್ತು ಮಾಡುವ ಮಾತುಗಳು ಮತ್ತು ಕ್ರಿಯೆಗಳಿಗೆ ವಿರುದ್ಧವಾದ ಎಲ್ಲಾ ಮಾತು ಮತ್ತು ಕ್ರಿಯೆಗಳನ್ನು ನಿಷೇಧಿಸುತ್ತದೆ. ನಮಾಝ್ ಪ್ರವೇಶಿಸಲು ಈ ನಿರ್ದಿಷ್ಟ ಪದದ ಹೊರತು ಬೇರೆ ಯಾವುದೇ ಪದವು ಅದರ ಸ್ಥಾನವನ್ನು ತುಂಬುವುದಿಲ್ಲ.
ಸೂರ ಅಲ್-ಫಾತಿಹಾ ಪಠಿಸುವುದು ಕಡ್ಡಾಯವಾಗಿದೆ.
ರುಕೂ ಮಾಡುವುದು ಕಡ್ಡಾಯವಾಗಿದೆ. ಅದರಲ್ಲಿ (ಬೆನ್ನು ಮತ್ತು ತಲೆಯನ್ನು) ಎತ್ತರವೂ ಇಲ್ಲದೆ, ತಗ್ಗೂ ಇಲ್ಲದೆ ಸಮರೇಖೆಯಲ್ಲಿಡುವುದು ಶ್ರೇಷ್ಠವಾಗಿದೆ.
ರುಕೂವಿನಿಂದ ಏಳುವುದು ಕಡ್ಡಾಯವಾಗಿದೆ. ಅದರ ನಂತರ ನಿಲ್ಲುವಾಗ ನೇರವಾಗಿ ನಿಲ್ಲುವುದು ಕಡ್ಡಾಯವಾಗಿದೆ.
ಸುಜೂದ್ ಮಾಡುವುದು ಕಡ್ಡಾಯವಾಗಿದೆ. ಅದರಿಂದ ಏಳುವುದು ಮತ್ತು ಅದರ ನಂತರ ನೇರವಾಗಿ ಕುಳಿತುಕೊಳ್ಳುವುದು ಕಡ್ಡಾಯವಾಗಿದೆ.
ನಮಾಝ್‌ನಲ್ಲಿ ಕುಳಿತುಕೊಳ್ಳುವಾಗ ಎಡಗಾಲನ್ನು ಹಾಸಿ ಬಲಗಾಲನ್ನು ನೆಟ್ಟಗೆ ಇಡುವುದು (ಇಫ್ತಿರಾಶ್) ನಿಯಮಗೊಳಿಸಲಾಗಿದೆ. ಆದರೆ ಮಗ್ರಿಬ್ ಮತ್ತು ಇಶಾದಂತಹ ಎರಡು ತಶಹ್ಹುದ್‌ಗಳಿರುವ ನಮಾಝ್‌ನ ಕೊನೆಯ ತಶಹ್ಹುದ್‌ನಲ್ಲಿ 'ತವರ್ರುಕ್' (ಪೃಷ್ಠವನ್ನು ನೆಲಕ್ಕೆ ತಾಗಿಸಿ ಎಡಗಾಲನ್ನು ಬಲಗಾಲಿನ ಕೆಳಗೆ ಚಾಚುವುದು) ಮಾಡುವುದು ನಿಯಮಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇತರೆ ಹದೀಸ್‌ಗಳು ವರದಿಯಾಗಿವೆ.
ಶೈತಾನನು ಕುಳಿತುಕೊಳ್ಳುವಂತೆ ಕುಳಿತುಕೊಳ್ಳುವುದನ್ನು ನಿಷೇಧಿಸಲಾಗಿದೆ. ಅದು ಹಿಮ್ಮಡಿಗಳ ಮೇಲೆ ಕುಳಿತು ಪಾದಗಳನ್ನು ನೆಲದ ಮೇಲೆ ಹಾಸುವುದು, ಅಥವಾ ಅವುಗಳನ್ನು ನೆಟ್ಟಗೆ ಇಟ್ಟು ಅವೆರಡರ ನಡುವೆ ನೆಲದ ಮೇಲೆ ಕುಳಿತುಕೊಳ್ಳುವುದು.
ಕಾಡುಪ್ರಾಣಿಯು ಹಾಸುವಂತೆ ಹಾಸುವುದನ್ನು ನಿಷೇಧಿಸಲಾಗಿದೆ. ಅದು ನಮಾಝ್ ಮಾಡುವವನು (ಸುಜೂದ್‌ನಲ್ಲಿ) ತನ್ನ ತೋಳುಗಳನ್ನು ನೆಲದ ಮೇಲೆ ಹಾಸುವುದು. ಇದು ಸೋಮಾರಿತನ ಮತ್ತು ದೌರ್ಬಲ್ಯದ ಸಂಕೇತವಾಗಿದೆ.
ಶೈತಾನ್ ಮತ್ತು ಪ್ರಾಣಿಗಳ ಕೃತ್ಯಗಳನ್ನು ಅನುಕರಿಸುವುದನ್ನು ನಿಷೇಧಿಸಲಾಗಿದೆ.
ನಮಾಝ್ ಅನ್ನು 'ತಸ್ಲೀಮ್' (ಸಲಾಮ್) ಮೂಲಕ ಮುಗಿಸುವುದು ಕಡ್ಡಾಯವಾಗಿದೆ. ಇದು ನಮಾಝ್ ಮಾಡುವವರಿಗೆ, ಉಪಸ್ಥಿತರಿರುವವರಿಗೆ ಮತ್ತು ಅನುಪಸ್ಥಿತರಾಗಿರುವ ಸಜ್ಜನರಿಗೆ ಎಲ್ಲಾ ಕೆಡುಕು ಮತ್ತು ದೋಷಗಳಿಂದ ಸುರಕ್ಷತೆಗಾಗಿ ಮಾಡುವ ಪ್ರಾರ್ಥನೆಯಾಗಿದೆ.
ನಮಾಝ್‌ನಲ್ಲಿ 'ತುಮಾನೀನ' (ತಟಸ್ಥತೆ) ಕಡ್ಡಾಯವಾಗಿದೆ.
