ಅವನ ಸಂಪತ್ತಿನಿಂದ ನ್ಯಾಯಯುತವಾದ ರೀತಿಯಲ್ಲಿ ನಿನಗೆ ಮತ್ತು ನಿನ್ನ ಮಕ್ಕಳಿಗೆ ಸಾಕಾಗುವಷ್ಟನ್ನು ತೆಗೆದುಕೋ

ಅವನ ಸಂಪತ್ತಿನಿಂದ ನ್ಯಾಯಯುತವಾದ ರೀತಿಯಲ್ಲಿ ನಿನಗೆ ಮತ್ತು ನಿನ್ನ ಮಕ್ಕಳಿಗೆ ಸಾಕಾಗುವಷ್ಟನ್ನು ತೆಗೆದುಕೋ

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಬೂ ಸುಫ್ಯಾನ್‌ರ ಪತ್ನಿ ಹಿಂದ್ ಬಿಂತ್ ಉತ್ಬಾ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಖಂಡಿತವಾಗಿಯೂ ಅಬೂ ಸುಫ್ಯಾನ್ ಒಬ್ಬ ಜಿಪುಣ. ಅವನು ನನಗೆ ಮತ್ತು ನನ್ನ ಮಕ್ಕಳಿಗೆ ಸಾಕಾಗುವಷ್ಟು ಖರ್ಚು ವೆಚ್ಚವನ್ನು ನೀಡುವುದಿಲ್ಲ. ಆದರೆ ನಾನು ಅವನಿಗೆ ತಿಳಿಯದಂತೆ ಅವನ ಸಂಪತ್ತಿನಿಂದ ತೆಗೆದುಕೊಳ್ಳುತ್ತೇನೆ. ಹಾಗೆ ಮಾಡುವುದರಲ್ಲಿ ನನ್ನ ಮೇಲೆ ಪಾಪವಿದೆಯೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನ ಸಂಪತ್ತಿನಿಂದ ನ್ಯಾಯಯುತವಾದ ರೀತಿಯಲ್ಲಿ ನಿನಗೆ ಮತ್ತು ನಿನ್ನ ಮಕ್ಕಳಿಗೆ ಸಾಕಾಗುವಷ್ಟನ್ನು ತೆಗೆದುಕೋ".

[صحيح] [متفق عليه]

الشرح

ಹಿಂದ್ ಬಿಂತ್ ಉತ್ಬಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತನ್ನ ಪತಿ ಅಬೂ ಸುಫ್ಯಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರ ಬಗ್ಗೆ ಫತ್ವಾ (ಧಾರ್ಮಿಕ ತೀರ್ಪು) ಕೇಳಿದರು. ಅವರು (ಅಬೂ ಸುಫ್ಯಾನ್) ಜಿಪುಣ ಮತ್ತು ತನ್ನ ಸಂಪತ್ತಿನ ಬಗ್ಗೆ ಅತಿಯಾದ ದುರಾಸೆ ಉಳ್ಳವರಾಗಿದ್ದಾರೆ. ಅವರು ತನಗೆ ಮತ್ತು ತನ್ನ ಮಕ್ಕಳಿಗೆ ಸಾಕಾಗುವಷ್ಟು ಖರ್ಚುವೆಚ್ಚವನ್ನು ನೀಡುವುದಿಲ್ಲ. ಆದರೆ ತಾನು ಅವರಿಗೆ ತಿಳಿಯದಂತೆ ರಹಸ್ಯವಾಗಿ ಅವರ ಸಂಪತ್ತಿನಿಂದ ತೆಗೆದುಕೊಂಡರೆ ಮಾತ್ರ ಸಾಕಾಗುತ್ತದೆ. ಹಾಗೆ ಮಾಡುವುದರಲ್ಲಿ ತನಗೆ ಪಾಪವಿದೆಯೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿನಗಾಗಿ ಮತ್ತು ನಿನ್ನ ಮಕ್ಕಳಿಗಾಗಿ ಅವನ ಸಂಪತ್ತಿನಿಂದ, ಸಾಮಾನ್ಯವಾಗಿ ಸಾಕು ಎಂದು ತಿಳಿಯಲಾದಷ್ಟು ಪ್ರಮಾಣವನ್ನು, ಅವನಿಗೆ ತಿಳಿಯದೆಯಾದರೂ ಸಹ, ತೆಗೆದುಕೋ.

فوائد الحديث

ಪತ್ನಿ ಮತ್ತು ಮಕ್ಕಳ ಖರ್ಚುವೆಚ್ಚವನ್ನು ನೀಡುವುದು ಪತಿಯ ಮೇಲೆ ಕಡ್ಡಾಯವಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: ಅವರ ಮಾತು: "ಅವನ ಸಂಪತ್ತಿನಿಂದ ನ್ಯಾಯಯುತವಾದ ರೀತಿಯಲ್ಲಿ ನಿನಗೆ ಸಾಕಾಗುವಷ್ಟನ್ನು ತೆಗೆದುಕೋ". ಧಾರ್ಮಿಕವಾಗಿ ಮಿತಿಯನ್ನು ನಿರ್ಧರಿಸದ ವಿಷಯಗಳಲ್ಲಿ ಅವರು ರೂಢಿಯನ್ನು ಉಲ್ಲೇಖಿಸಿದ್ದನ್ನು ಈ ಹದೀಸಿನಲ್ಲಿ ಕಾಣಬಹುದು."

ಇಬ್ನ್ ಹಜರ್ ಹೇಳುತ್ತಾರೆ: " ಧಾರ್ಮಿಕ ವಿಧಿ ಕೇಳುವುದು, ದೂರು ನೀಡುವುದು ಮುಂತಾದ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಅವನಿಗೆ ಇಷ್ಟವಿಲ್ಲದ ವಿಷಯವನ್ನು ಹೇಳುವುದಕ್ಕೆ ಅನುಮತಿಯಿದೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ. ಇದು 'ಗೀಬತ್' (ಪರನಿಂದೆ) ಅನುಮತಿಸಲ್ಪಟ್ಟಿರುವ ಕೆಲವು ಸಂದರ್ಭಗಳಲ್ಲಿ ಒಂದಾಗಿದೆ."

ಇಮಾಮ್ ಖುರ್ತುಬಿ ಹೇಳುತ್ತಾರೆ: "ಅಬೂ ಸುಫ್ಯಾನ್‌ರನ್ನು ಎಲ್ಲಾ ಸಂದರ್ಭಗಳಲ್ಲೂ ಜಿಪುಣರೆಂದು ಹೇಳಲು ಹಿಂದ್ ಬಯಸಿರಲಿಲ್ಲ. ಬದಲಿಗೆ ತನ್ನೊಂದಿಗಿನ ಅವರ ಸಂದರ್ಭವನ್ನು ಮಾತ್ರ ಹೇಳಿದರು. ಅಂದರೆ ಅವರು ತನಗೆ ಮತ್ತು ತನ್ನ ಮಕ್ಕಳಿಗೆ (ಖರ್ಚು ನೀಡುವಲ್ಲಿ) ಜಿಪುಣತನ ತೋರುತ್ತಿದ್ದರು ಎಂದು. ಇದು ಸಂಪೂರ್ಣ ಜಿಪುಣತನವನ್ನು ಸೂಚಿಸುವುದಿಲ್ಲ. ಏಕೆಂದರೆ ಅನೇಕ ನಾಯಕರು ತಮ್ಮ ಕುಟುಂಬದೊಂದಿಗೆ ಹೀಗೆ ಮಾಡುತ್ತಾರೆ ಮತ್ತು ಇತರರನ್ನು ತಮ್ಮ ಕಡೆಗೆ ಸೆಳೆಯಲು ಹೊರಗಿನವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ."

التصنيفات

Expenses