ನನ್ನನ್ನು ನಿಶಾಯಾತ್ರೆ (ಇಸ್ರಾ) ಮಾಡಿಸಲಾದ ರಾತ್ರಿ ನಾನು ಇಬ್ರಾಹೀಮ್ ರನ್ನು ಭೇಟಿಯಾದೆ. ಅವರು ಹೇಳಿದರು: "ಓ ಮುಹಮ್ಮದ್! ನನ್ನಿಂದ…

ನನ್ನನ್ನು ನಿಶಾಯಾತ್ರೆ (ಇಸ್ರಾ) ಮಾಡಿಸಲಾದ ರಾತ್ರಿ ನಾನು ಇಬ್ರಾಹೀಮ್ ರನ್ನು ಭೇಟಿಯಾದೆ. ಅವರು ಹೇಳಿದರು: "ಓ ಮುಹಮ್ಮದ್! ನನ್ನಿಂದ ನಿಮ್ಮ ಸಮುದಾಯಕ್ಕೆ ಸಲಾಂ ತಿಳಿಸಿರಿ. ಸ್ವರ್ಗದ ಮಣ್ಣು ಅತ್ಯಂತ ಶುದ್ಧವಾಗಿದೆ ಮತ್ತು ಅದರ ನೀರು ಅತ್ಯಂತ ಸಿಹಿಯಾಗಿದೆ

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನನ್ನು ನಿಶಾಯಾತ್ರೆ (ಇಸ್ರಾ) ಮಾಡಿಸಲಾದ ರಾತ್ರಿ ನಾನು ಇಬ್ರಾಹೀಮ್ ರನ್ನು ಭೇಟಿಯಾದೆ. ಅವರು ಹೇಳಿದರು: "ಓ ಮುಹಮ್ಮದ್! ನನ್ನಿಂದ ನಿಮ್ಮ ಸಮುದಾಯಕ್ಕೆ ಸಲಾಂ ತಿಳಿಸಿರಿ. ಸ್ವರ್ಗದ ಮಣ್ಣು ಅತ್ಯಂತ ಶುದ್ಧವಾಗಿದೆ ಮತ್ತು ಅದರ ನೀರು ಅತ್ಯಂತ ಸಿಹಿಯಾಗಿದೆ, ಅದು ವಿಶಾಲ ಬಯಲು ಸೀಮೆಯಾಗಿದ್ದು ಅಲ್ಲಿನ ಸಸಿಗಳು ಸುಬ್‌ಹಾನಲ್ಲಾಹ್, ವಲ್-ಹಮ್ದುಲಿಲ್ಲಾಹ್, ವಲಾಇಲಾಹ ಇಲ್ಲಲ್ಲಾಹ್, ವಲ್ಲಾಹು ಅಕ್ಬರ್ ಆಗಿದೆಯೆಂದು ಅವರಿಗೆ ತಿಳಿಸಿರಿ."

[حسن بشواهده] [رواه الترمذي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಸ್ರಾ ಮತ್ತು ಮಿಅರಾಜ್‌ನ ರಾತ್ರಿ ಅವರು ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ರನ್ನು ಭೇಟಿಯಾದರು. ಆಗ ಅವರು ಹೇಳಿದರು: "ಓ ಮುಹಮ್ಮದ್! ನನ್ನ ಕಡೆಯಿಂದ ನಿಮ್ಮ ಸಮುದಾಯಕ್ಕೆ ಸಲಾಂ ತಲುಪಿಸಿರಿ. ಸ್ವರ್ಗದ ಮಣ್ಣು ಅತ್ಯಂತ ಶುದ್ಧವಾಗಿದೆ, ಅದರ ನೀರು ಅತ್ಯಂತ ಸಿಹಿಯಾಗಿದೆ, ಅದು ಸ್ವಲ್ಪವೂ ಉಪ್ಪನ್ನು ಹೊಂದಿಲ್ಲ, ಸ್ವರ್ಗವು ವಿಶಾಲ ಬಯಲು ಸೀಮೆಯಾಗಿದ್ದು ಯಾವುದೇ ಮರಗಳಿಲ್ಲದ ಸಮತಟ್ಟಾದ ಪ್ರದೇಶವಾಗಿದೆ, ಅಲ್ಲಿನ ಸಸಿಗಳು ಪರಿಶುದ್ಧವಾದ ವಚನಗಳಾಗಿವೆ, ಅಂದರೆ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ವಚನಗಳಾದ ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಆಗಿವೆ ಮತ್ತು ಮುಸಲ್ಮಾನನು ಇವುಗಳನ್ನು ಪುನರುಚ್ಛರಿಸುವಾಗಲೆಲ್ಲಾ ಸ್ವರ್ಗದಲ್ಲಿ ಒಂದು ಸಸಿಯನ್ನು ನೆಡುತ್ತಾನೆ ಎಂದು ಅವರಿಗೆ ತಿಳಿಸಿರಿ."

فوائد الحديث

ಸ್ವರ್ಗದ ಸಸಿಗಳನ್ನು ಹೆಚ್ಚಿಸಲು ಸದಾ ಅಲ್ಲಾಹನನ್ನು ಸ್ಮರಿಸಬೇಕೆಂದು ಪ್ರೋತ್ಸಾಹಿಸಲಾಗಿದೆ.

ಇಸ್ಲಾಂ ಸಮುದಾಯದ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ, ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ರವರು ಈ ಸಮುದಾಯಕ್ಕೆ ಸಲಾಂ ಹೇಳಿದ್ದಾರೆ.

ಅಲ್ಲಾಹನನ್ನು ಸ್ಮರಿಸುವುದನ್ನು ಹೆಚ್ಚಿಸಬೇಕೆಂದು ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ರವರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಸಮುದಾಯವನ್ನು ಪ್ರೋತ್ಸಾಹಿಸಿದ್ದಾರೆ.

ತೀಬಿ ಹೇಳಿದರು: "ಸ್ವರ್ಗವೆನ್ನುವುದು ವಿಶಾಲ ಬಯಲು ಪ್ರದೇಶ. ನಂತರ ಅಲ್ಲಾಹು ತನ್ನ ಉದಾರತೆಯಿಂದ ಮನುಷ್ಯರ ಕರ್ಮಗಳಿಗೆ ಅನುಗುಣವಾಗಿ ಅಲ್ಲಿ ಮರಗಳನ್ನು ಮತ್ತು ಅರಮನೆಗಳನ್ನು ಸೃಷ್ಟಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕರ್ಮದ ಕಾರಣದಿಂದ ಅವನಿಗಾಗಿ ವಿಶೇಷವಾಗಿ ಸಿದ್ಧಗೊಳಿಸಿರುವುದು ದೊರೆಯುತ್ತದೆ. ನಂತರ, ಯಾವ ಕರ್ಮಗಳನ್ನು ಮಾಡಲು ಅವನನ್ನು ಸೃಷ್ಟಿಸಲಾಗಿದೆಯೋ ಆ ಕರ್ಮಗಳನ್ನು ಮಾಡಿ ಅದರ ಮೂಲಕ ಅವನು ಆ ಪ್ರತಿಫಲವನ್ನು ಪಡೆಯುವುದನ್ನು ಅಲ್ಲಾಹು ಸುಲಭಗೊಳಿಸುವುದರಿಂದ ಅವನನ್ನು ಇಲ್ಲಿ ಸಸಿಗಳನ್ನು ನೆಡುವವನಿಗೆ ಹೋಲಿಸಲಾಗಿದೆ.

التصنيفات

Merits of Remembering Allah