ನೀವು ಬಯಸಿದಷ್ಟು ಆಹಾರ ಮತ್ತು ಪಾನೀಯ (ಅದನ್ನು ಹೊಂದುವ ಸ್ಥಿತಿಯಲ್ಲಿ) ಇಲ್ಲವೇ? ಖಂಡಿತವಾಗಿಯೂ ನಾನು ನಿಮ್ಮ ಪ್ರವಾದಿಯವರನ್ನು (ಅವರ…

ನೀವು ಬಯಸಿದಷ್ಟು ಆಹಾರ ಮತ್ತು ಪಾನೀಯ (ಅದನ್ನು ಹೊಂದುವ ಸ್ಥಿತಿಯಲ್ಲಿ) ಇಲ್ಲವೇ? ಖಂಡಿತವಾಗಿಯೂ ನಾನು ನಿಮ್ಮ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ. ಅವರಿಗೆ ತಮ್ಮ ಹೊಟ್ಟೆಯನ್ನು ತುಂಬಿಸಲು ಕಳಪೆ ದರ್ಜೆಯ ಖರ್ಜೂರ ಕೂಡ ದೊರೆಯುತ್ತಿರಲಿಲ್ಲ

ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು (ಜನರನ್ನು ಸಂಬೋಧಿಸಿ) ಹೇಳಿದರು: "ನೀವು ಬಯಸಿದಷ್ಟು ಆಹಾರ ಮತ್ತು ಪಾನೀಯ (ಅದನ್ನು ಹೊಂದುವ ಸ್ಥಿತಿಯಲ್ಲಿ) ಇಲ್ಲವೇ? ಖಂಡಿತವಾಗಿಯೂ ನಾನು ನಿಮ್ಮ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೋಡಿದ್ದೇನೆ. ಅವರಿಗೆ ತಮ್ಮ ಹೊಟ್ಟೆಯನ್ನು ತುಂಬಿಸಲು ಕಳಪೆ ದರ್ಜೆಯ ಖರ್ಜೂರ ಕೂಡ ದೊರೆಯುತ್ತಿರಲಿಲ್ಲ".

[صحيح] [رواه مسلم]

الشرح

ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ಜನರಿಗೆ, ಅವರಿಗೆ ನೀಡಲಾಗಿರುವ ಅನುಗ್ರಹದ ಸ್ಥಿತಿಯನ್ನು ನೆನಪಿಸುತ್ತಾ ಹೇಳುವುದೇನೆಂದರೆ, ಅವರು ಬಯಸಿದಷ್ಟು ಪ್ರಮಾಣದಲ್ಲಿ ಆಹಾರ ಮತ್ತು ಪಾನೀಯದಲ್ಲಿ (ಅದನ್ನು ಹೊಂದುವ ಸ್ಥಿತಿಯಲ್ಲಿ) ಅವರು ಇದ್ದಾರೆ. ನಂತರ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಿತಿಯ ಬಗ್ಗೆ ತಿಳಿಸುತ್ತಾ, ಪ್ರವಾದಿಯವರಿಗೆ ಹಸಿವಿನಿಂದ ತಮ್ಮ ಹೊಟ್ಟೆಯನ್ನು ತುಂಬಿಸಲು ಕಳಪೆ ದರ್ಜೆಯ ಖರ್ಜೂರ ಕೂಡ ದೊರೆಯುತ್ತಿರಲಿಲ್ಲ ಎಂದು ಹೇಳುತ್ತಾರೆ.

فوائد الحديث

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಷ್ಟರ ಮಟ್ಟಿಗೆ (ಇಹಲೋಕದ ಬಗ್ಗೆ) 'ಝುಹ್ದ್' (ವೈರಾಗ್ಯ) ಹೊಂದಿದ್ದರು ಎಂಬುದನ್ನು ವಿವರಿಸಲಾಗಿದೆ.

ಇಹಲೋಕದ ವಿಷಯದಲ್ಲಿ 'ಝುಹ್ದ್' ಅನ್ನು ಅಳವಡಿಸಿಕೊಳ್ಳಲು, ಇಹಲೋಕದಿಂದ ಕಡಿಮೆ ತೆಗೆದುಕೊಳ್ಳಲು, ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸಲು ಪ್ರೋತ್ಸಾಹಿಸಲಾಗಿದೆ.

ತಾವು ಇರುವ ಅನುಗ್ರಹಗಳನ್ನು ಜನರಿಗೆ ನೆನಪಿಸಬೇಕು ಮತ್ತು ಅವುಗಳಿಗಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಲು ಅವರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಲಾಗಿದೆ.

التصنيفات

Condemning Love of the World