إعدادات العرض
ನಿಮ್ಮ ಕನಸುಗಳೆಲ್ಲವೂ ಕೊನೆಯ ಏಳರಲ್ಲಿ ಒಗ್ಗೂಡುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್…
ನಿಮ್ಮ ಕನಸುಗಳೆಲ್ಲವೂ ಕೊನೆಯ ಏಳರಲ್ಲಿ ಒಗ್ಗೂಡುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್ ಅನ್ನು ಹುಡುಕುತ್ತಿದ್ದರೆ, ಅವರು ಅದನ್ನು ಕೊನೆಯ ಏಳರಲ್ಲಿ ಹುಡುಕಲಿ
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಲ್ಲಿ ಕೆಲವರಿಗೆ ಲೈಲತುಲ್ ಖದ್ರ್ ಕೊನೆಯ ಏಳು ರಾತ್ರಿಗಳಲ್ಲಿ ಎಂದು ಕನಸಿನಲ್ಲಿ ತೋರಿಸಲಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಕನಸುಗಳೆಲ್ಲವೂ ಕೊನೆಯ ಏಳರಲ್ಲಿ ಒಗ್ಗೂಡುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್ ಅನ್ನು ಹುಡುಕುತ್ತಿದ್ದರೆ, ಅವರು ಅದನ್ನು ಕೊನೆಯ ಏಳರಲ್ಲಿ ಹುಡುಕಲಿ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Português Kurdî සිංහල Kiswahili Tiếng Việt অসমীয়া ગુજરાતી Hausa Nederlands മലയാളം Română Magyar ქართული Mooreالشرح
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಕೆಲವರು ಲೈಲತುಲ್ ಖದ್ರ್ ರಮದಾನ್ ತಿಂಗಳ ಕೊನೆಯ ಏಳು ರಾತ್ರಿಗಳಲ್ಲಿ ಬರುತ್ತದೆ ಎಂದು ಕನಸು ಕಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿಮ್ಮ ಕನಸುಗಳು ರಮದಾನ್ ತಿಂಗಳ ಕೊನೆಯ ಏಳು ರಾತ್ರಿಗಳಲ್ಲಿ ಒಂದುಗೂಡುತ್ತಿವೆ. ಆದ್ದರಿಂದ ಯಾರಾದರೂ ಲೈಲತುಲ್ ಖದ್ರ್ ಅನ್ನು ಹುಡುಕುತ್ತಿದ್ದರೆ, ಅದನ್ನು ಪಡೆಯಲು ಅವರು ಸತ್ಕರ್ಮಗಳು ಹೆಚ್ಚಿಸುತ್ತಾ ಪ್ರಯತ್ನಿಸಲಿ. ಅದು ಕೊನೆಯ ಏಳು ರಾತ್ರಿಗಳಲ್ಲಿ ಬರಬಹುದೆಂಬ ನಿರೀಕ್ಷೆಯಿದೆ. ಆ ವರ್ಷದ ರಮದಾನ್ ತಿಂಗಳು ಮೂವತ್ತು ದಿನಗಳಾಗಿದ್ದರೆ, ಅದನ್ನು ಇಪ್ಪತ್ತನಾಲ್ಕನೇ ರಾತ್ರಿಯಿಂದ ಹುಡುಕಲು ಪ್ರಾರಂಭಿಸಬೇಕು. ಆದರೆ, ಅದು ಇಪ್ಪತ್ತೊಂಬತ್ತು ದಿನಗಳಿದ್ದರೆ, ಇಪ್ಪತ್ತಮೂರನೇ ರಾತ್ರಿಯಿಂದ ಹುಡುಕಲು ಪ್ರಾರಂಭಿಸಬೇಕು.فوائد الحديث
ಲೈಲತುಲ್ ಖದ್ರ್‌ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಮತ್ತು ಅದನ್ನು ಹುಡುಕಲು ಪ್ರೋತ್ಸಾಹಿಸಲಾಗಿದೆ.
ಅಲ್ಲಾಹು ಈ ರಾತ್ರಿಯನ್ನು ರಹಸ್ಯವಾಗಿಟ್ಟಿದ್ದು ಅವನ ವಿವೇಕ ಮತ್ತು ದಯೆಯನ್ನು ವ್ಯಕ್ತಪಡಿಸುತ್ತದೆ. ಇದರಿಂದ ಜನರು ಅದನ್ನು ಪಡೆಯಲು ಆರಾಧನೆಯಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಇದರಿಂದ ಅವರ ಪ್ರತಿಫಲಗಳು ಹೆಚ್ಚಾಗುತ್ತವೆ.
ಲೈಲತುಲ್ ಖದ್ರ್ ರಮದಾನ್ ತಿಂಗಳ ಕೊನೆಯ ಹತ್ತರಲ್ಲಿ ಬರುತ್ತದೆ. ಅದರಲ್ಲಿ ಕೊನೆಯ ಏಳು ರಾತ್ರಿಗಳಲ್ಲಿ ಬರುವ ನಿರೀಕ್ಷೆ ಹೆಚ್ಚಿದೆ.
ಲೈಲತುಲ್ ಖದ್ರ್‌ನ ರಾತ್ರಿ ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಒಂದಾಗಿದೆ. ಅದು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪವಿತ್ರ ಕುರ್‌ಆನನ್ನು ಅವತೀರ್ಣಗೊಳಿಸಿದ ರಾತ್ರಿಯಾಗಿದೆ. ಅಲ್ಲಾಹು ಈ ರಾತ್ರಿಯನ್ನು ಅದರ ಸಮೃದ್ಧಿ ಮತ್ತು ಶ್ರೇಷ್ಠತೆಯಲ್ಲಿ ಮತ್ತು ಅದರಲ್ಲಿ ಮಾಡಲಾಗುವ ಕರ್ಮಗಳ ಪ್ರತಿಫಲದ ದೃಷ್ಟಿಯಿಂದ ಸಾವಿರ ತಿಂಗಳುಗಳಿಗಿಂತ ಶ್ರೇಷ್ಠಗೊಳಿಸಿದ್ದಾನೆ.
ಆ ರಾತ್ರಿಯನ್ನು ಲೈಲತುಲ್-ಖದ್ರ್ ಎಂದು ಕರೆಯಲಾಗುತ್ತದೆ. ಇದನ್ನು "ಗೌರವ" ಎಂಬ ಅರ್ಥವಿರುವ ಶರಫ್ ಎಂಬ ಪದದಿಂದ ತೆಗೆದುಕೊಂಡಿರುವ ಸಾಧ್ಯತೆಯಿದೆ. ಹೀಗೆ ಹೇಳಲಾಗುತ್ತದೆ: ಫುಲಾನ್ ಅಜೀಮುಲ್-ಖದ್ರ್ (ಅಂದರೆ: ಇಂತಿಂತಹ ವ್ಯಕ್ತಿ ದೊಡ್ಡ ಗೌರವವನ್ನು ಹೊಂದಿದ್ದಾನೆ). ಈ ಕಾರಣದಿಂದ ನೋಡುವಾಗ, ರಾತ್ರಿ ಎಂಬ ಪದದ ಸೇರ್ಪಡೆಯು ವಸ್ತುವನ್ನು ಅದರ ಗುಣಲಕ್ಷಣಕ್ಕೆ ಮಾಡುವ ಸೇರ್ಪಡೆಯಾಗುತ್ತದೆ. ಅಂದರೆ ಇದರ ಅರ್ಥ: ಶ್ರೇಷ್ಠ ರಾತ್ರಿ ಎಂದಾಗುತ್ತದೆ. ಅಂದರೆ, ಆ ರಾತ್ರಿ ಗೌರವ ಮತ್ತು ವೈಭವದ ವಿಷಯದಲ್ಲಿ ದೊಡ್ಡ ಸ್ಥಾನವನ್ನು ಹೊಂದಿದೆ. ಅಲ್ಲಾಹು ಹೇಳುತ್ತಾನೆ, "ಖಂಡಿತವಾಗಿಯೂ ನಾವು ಅದನ್ನು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ." (ದುಖಾನ್: 3). ಅಥವಾ ಅದು "ತೀರ್ಮಾನ" ಎಂಬ ಅರ್ಥವಿರುವ ತಖ್ದೀರ್ ಎಂಬ ಪದದಿಂದ ತೆಗೆದುಕೊಂಡಿರುವ ಸಾಧ್ಯತೆಯಿದೆ. ಈ ಕಾರಣದಿಂದ ನೋಡುವಾಗ, ರಾತ್ರಿ ಎಂಬ ಪದದ ಸೇರ್ಪಡೆಯು "ಖದ್ರ್" ಪದಕ್ಕೆ ಕಾಲಾವಧಿಯ ವಿವರಣೆಗೆ ಮಾಡುವ ಸೇರ್ಪಡೆಯಾಗುತ್ತದೆ. ಅಂದರೆ ಇದರ ಅರ್ಥ: ವರ್ಷದಲ್ಲಿ ನಡೆಯುವ ಎಲ್ಲವನ್ನೂ ತೀರ್ಮಾನಿಸುವ ರಾತ್ರಿ. ಅಲ್ಲಾಹು ಹೇಳುತ್ತಾನೆ, "ಆ ರಾತ್ರಿಯಲ್ಲಿ ಪ್ರತಿಯೊಂದು ವಿವೇಕಯುತ ವಿಷಯವನ್ನು ತೀರ್ಮಾನಿಸಲಾಗುವುದು." (ದುಖಾನ್: 4)
التصنيفات
Last Ten Days of Ramadaan