ಮುಸ್ಲಿಮನ ಕೆಳಭಾಗದ ಉಡುಪು (ಲುಂಗಿ, ಪ್ಯಾಂಟು) ಕಣಕಾಲಿನ ಅರ್ಧದವರೆಗೆ ಇರಬೇಕು. ಅದು (ಕಣಕಾಲಿನ) ಮಧ್ಯದಿಂದ ಹರಡುಗಂಟುಗಳವರೆಗೆ ಇದ್ದರೆ…

ಮುಸ್ಲಿಮನ ಕೆಳಭಾಗದ ಉಡುಪು (ಲುಂಗಿ, ಪ್ಯಾಂಟು) ಕಣಕಾಲಿನ ಅರ್ಧದವರೆಗೆ ಇರಬೇಕು. ಅದು (ಕಣಕಾಲಿನ) ಮಧ್ಯದಿಂದ ಹರಡುಗಂಟುಗಳವರೆಗೆ ಇದ್ದರೆ ಯಾವುದೇ ತೊಂದರೆಯಿಲ್ಲ - ಅಥವಾ ಯಾವುದೇ ದೋಷವಿಲ್ಲ. ಆದರೆ ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕದಲ್ಲಿರುತ್ತದೆ. ಯಾರು ತಮ್ಮ ಕೆಳಭಾಗದ ಉಡುಪನ್ನು ಅಹಂಕಾರದಿಂದ ಎಳೆದೊಯ್ಯುತ್ತಾರೋ ಅವರನ್ನು ಅಲ್ಲಾಹು ಕಣ್ಣೆತ್ತಿ ನೋಡಲಾರನು

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಸ್ಲಿಮನ ಕೆಳಭಾಗದ ಉಡುಪು (ಲುಂಗಿ, ಪ್ಯಾಂಟು) ಕಣಕಾಲಿನ ಅರ್ಧದವರೆಗೆ ಇರಬೇಕು. ಅದು (ಕಣಕಾಲಿನ) ಮಧ್ಯದಿಂದ ಹರಡುಗಂಟುಗಳವರೆಗೆ ಇದ್ದರೆ ಯಾವುದೇ ತೊಂದರೆಯಿಲ್ಲ - ಅಥವಾ ಯಾವುದೇ ದೋಷವಿಲ್ಲ. ಆದರೆ ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕದಲ್ಲಿರುತ್ತದೆ. ಯಾರು ತಮ್ಮ ಕೆಳಭಾಗದ ಉಡುಪನ್ನು ಅಹಂಕಾರದಿಂದ ಎಳೆದೊಯ್ಯುತ್ತಾರೋ ಅವರನ್ನು ಅಲ್ಲಾಹು ಕಣ್ಣೆತ್ತಿ ನೋಡಲಾರನು."

[صحيح] [رواه أبو داود وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮುಸ್ಲಿಂ ಪುರುಷರ ಕೆಳಭಾಗದ ಉಡುಪಿಗೆ, (ಪುರುಷರ ಕೆಳಭಾಗವನ್ನು ಮುಚ್ಚುವ ಎಲ್ಲವೂ ಇದರಲ್ಲಿ ಒಳಪಡುತ್ತದೆ) ಮೂರು ಸ್ಥಿತಿಗಳನ್ನು ವಿವರಿಸಿದ್ದಾರೆ: ಮೊದಲನೆಯದು: ಅಪೇಕ್ಷಣೀಯ ಸ್ಥಿತಿ. ಅದು ಕಣಕಾಲಿನ ಅರ್ಧದವರೆಗೆ ಇರುವುದು. ಎರಡನೆಯದು: ಯಾವುದೇ ಅಸಹ್ಯತೆ (ಕರಾಹತ್) ಇಲ್ಲದೆ ಅನುಮತಿಸಲಾದ ಸ್ಥಿತಿ. ಅದು ಕಣಕಾಲುಗಳ ಮಧ್ಯದಿಂದ ಹರಡುಗಂಟುಗಳವೆರೆಗೆ ಇರುವುದು. ಹರಡುಗಂಟುಗಳು ಎಂದರೆ ಕಣಕಾಲು ಮತ್ತು ಪಾದವನ್ನು ಜೋಡಿಸುವ ಎರಡು ಉಬ್ಬಿದ ಮೂಳೆಗಳು. ಮೂರನೆಯದು: ನಿಷಿದ್ಧವಾದ ಸ್ಥಿತಿ. ಅದು ಹರಡುಗಂಟುಗಳಿಗಿಂತ ಕೆಳಗಿರುವುದು. ಇವರು ನರಕಾಗ್ನಿಗೆ ಆಹುತಿಯಾಗಬಹುದಾದ ಭಯವಿದೆ. ಅದು ಅಹಂಕಾರ, ಜಂಭ ಮತ್ತು ಅತಿರೇಕದ ಕಾರಣದಿಂದಾಗಿದ್ದರೆ, ಅಲ್ಲಾಹು ಅವರನ್ನು ಕಣ್ಣೆತ್ತಿಯೂ ನೋಡಲಾರ.

فوائد الحديث

ಈ ವಿಧಾನ ಮತ್ತು ಎಚ್ಚರಿಕೆ ಪುರುಷರಿಗೆ ಮಾತ್ರ ಸೀಮಿತವಾಗಿದೆ. ಇದರಿಂದ ಮಹಿಳೆಯರನ್ನು ಹೊರತುಪಡಿಸಲಾಗಿದೆ. ಏಕೆಂದರೆ ಅವರು ತಮ್ಮ ದೇಹದ ಎಲ್ಲಾ ಭಾಗಗಳನ್ನು ಮುಚ್ಚಬೇಕೆಂದು ಅವರಿಗೆ ಆದೇಶಿಸಲಾಗಿದೆ.

ಪುರುಷರ ದೇಹದ ಕೆಳಗಿನ ಅರ್ಧ ಭಾಗವನ್ನು ಮುಚ್ಚುವ ಎಲ್ಲಾ ಉಡುಪುಗಳನ್ನು ಇಝಾರ್ (ಕೆಳಭಾಗದ ಉಡುಪು) ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಪ್ಯಾಂಟು, ಜುಬ್ಬಾ ಇತ್ಯಾದಿ. ಇವೆಲ್ಲವೂ ಈ ಹದೀಸ್‌ನಲ್ಲಿ ಉಲ್ಲೇಖಿಸಲಾದ ಶರಿಯಾ ಕಾನೂನುಗಳಲ್ಲಿ ಒಳಪಡುತ್ತವೆ.

التصنيفات

Manners of Dressing