ಯಾರು ಅಹಂಕಾರದಿಂದ ತನ್ನ ಉಡುಪನ್ನು (ನೆಲದಲ್ಲಿ) ಎಳೆಯುತ್ತಾನೋ ಅವನ ಕಡೆಗೆ ಅಲ್ಲಾಹು ನೋಡುವುದಿಲ್ಲ

ಯಾರು ಅಹಂಕಾರದಿಂದ ತನ್ನ ಉಡುಪನ್ನು (ನೆಲದಲ್ಲಿ) ಎಳೆಯುತ್ತಾನೋ ಅವನ ಕಡೆಗೆ ಅಲ್ಲಾಹು ನೋಡುವುದಿಲ್ಲ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಹಂಕಾರದಿಂದ ತನ್ನ ಉಡುಪನ್ನು (ನೆಲದಲ್ಲಿ) ಎಳೆಯುತ್ತಾನೋ ಅವನ ಕಡೆಗೆ ಅಲ್ಲಾಹು ನೋಡುವುದಿಲ್ಲ."

[صحيح] [متفق عليه]

الشرح

ದರ್ಪದಿಂದ ಮತ್ತು ಅಹಂಕಾರದಿಂದ ತಮ್ಮ ಉಡುಪನ್ನು ಅಥವಾ ಧೋತಿಯನ್ನು ಹರಡುಗಂಟುಗಳ ಕೆಳಗೆ ಇಳಿಬಿಡುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಹಾಗೆ ಮಾಡಿದವನು ಪುನರುತ್ಥಾನ ದಿನದಂದು ಅಲ್ಲಾಹು ಕರುಣೆಯ ನೋಟದಿಂದ ಆತನನ್ನು ನೋಡುವುದಿಲ್ಲ ಎಂಬ ಉಗ್ರ ಎಚ್ಚರಿಕೆಗೆ ಅರ್ಹನಾಗುತ್ತಾನೆ.

فوائد الحديث

ಉಡುಪು ಎಂದರೆ ಪ್ಯಾಂಟ್, ಜುಬ್ಬಾ, ಧೋತಿ (ಲುಂಗಿ) ಮತ್ತು ದೇಹದ ಕೆಳಭಾಗವನ್ನು ಮುಚ್ಚುವ ಎಲ್ಲವೂ ಒಳಪಡುತ್ತದೆ.

ಉಡುಪನ್ನು ಕೆಳಗೆ ಇಳಿಬಿಡಬಾರದೆಂದು ನಿಷೇಧಿಸಿರುವುದು ಪುರುಷರಿಗೆ ಮಾತ್ರ. ಇಮಾಮ್ ನವವಿ ಹೇಳುತ್ತಾರೆ: "ಮಹಿಳೆಯರಿಗೆ ಉಡುಪನ್ನು ಇಳಿಬಿಡುವುದು ಅನುಮತಿಸಲಾಗಿದೆ ಎಂದು ವಿದ್ವಾಂಸರು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ. ತಮ್ಮ ಉಡುಪಿನ ಕೆಳಭಾಗವನ್ನು ಒಂದು ಮೊಳದಷ್ಟು ಇಳಿಬಿಡಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಅನುಮತಿ ನೀಡಿದ್ದಾರೆಂದು ಅಧಿಕೃತವಾಗಿ ವರದಿಯಾಗಿದೆ."

ಇಬ್ನ್ ಬಾಝ್ ಹೇಳುತ್ತಾರೆ: "ಹದೀಸ್‌ಗಳ ಸಾಮಾನ್ಯ ಅರ್ಥದ ಪ್ರಕಾರ ಉಡುಪನ್ನು ಇಳಿಬಿಡುವುದು ನಿಷಿದ್ಧ ಮತ್ತು ಹರಾಮ್ ಆಗಿದೆ. ಆದರೆ ಶಿಕ್ಷೆಯಲ್ಲಿ ವ್ಯತ್ಯಾಸವಿದೆ. ಶಿಕ್ಷೆಯು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಅಹಂಕಾರದಿಂದ ಇಳಿಬಿಡುವವನಿಗೆ ಮತ್ತು ಅಹಂಕಾರವಿಲ್ಲದೆ ಇಳಿಬಿಡುವವನಿಗೆ ಶಿಕ್ಷೆ ಒಂದೇ ಆಗಿರುವುದಿಲ್ಲ."

ಇಬ್ನ್ ಬಾಝ್ ಹೇಳುತ್ತಾರೆ: "ಮಹಿಳೆ ಔರತ್ ಆಗಿದ್ದಾಳೆ (ಅಂದರೆ ಅವಳ ದೇಹವು ಮುಚ್ಚಲ್ಪಡಬೇಕಾಗಿದೆ). ಆದ್ದರಿಂದ ಅವಳು ತನ್ನ ಉಡುಪನ್ನು ಒಂದು ಗೇಣಿನಷ್ಟು ಇಳಿಬಿಡುವುದರಲ್ಲಿ ತೊಂದರೆಯಿಲ್ಲ. ಅದು ಸಾಕಾಗದಿದ್ದರೆ, ತನ್ನ ಹರಡುಗಂಟಿನಿಂದ ಒಂದು ಮೊಳದಷ್ಟು ಇಳಿಬಿಡಬಹುದು."

ಖಾದಿ ಹೇಳುತ್ತಾರೆ: "ವಿದ್ವಾಂಸರು ಹೇಳುತ್ತಾರೆ: ಒಟ್ಟಾರೆಯಾಗಿ ಹೇಳುವುದಾದರೆ, ಉಡುಪಿನಲ್ಲಿ ಅಗತ್ಯ ಮತ್ತು ವಾಡಿಕೆಯ ಮಿತಿಯನ್ನು ಮೀರಿದ ಯಾವುದೇ ಉದ್ದ ಅಥವಾ ಅಗಲವು ಅಸಹ್ಯಕರ (ಕರಾಹತ್) ಆಗಿದೆ. ಹೆಚ್ಚು ಬಲ್ಲವನು ಅಲ್ಲಾಹು.

ಇಮಾಮ್ ನವವಿ ಹೇಳುತ್ತಾರೆ: "ಅಂಗಿ ಮತ್ತು ಧೋತಿಯ ತುದಿಯನ್ನು ಇಳಿಬಿಡಬೇಕಾದ ಅಪೇಕ್ಷಣೀಯ ಅಳತೆಯು ಮೊಣಕಾಲಿನ ಅರ್ಧಕ್ಕೆ ತಲುಪುವಷ್ಟು. ಆದರೆ ಅದರ ಮತ್ತು ಹರಡುಗಂಟುಗಳ ನಡುವಿನವರೆಗೆ ಇಳಿಬಿಟ್ಟರೆ ಯಾವುದೇ ತಪ್ಪಿಲ್ಲ. ಅದಕ್ಕಿಂತ ಕೆಳಗೆ ಇಳಿಬಿಡುವುದು ನರಕಕ್ಕೆ ಅರ್ಹವಾಗುತ್ತದೆ. ಆದ್ದರಿಂದ, ಮೊಣಕಾಲಿನ ಅರ್ಧಕ್ಕೆ ತಲುಪುವಷ್ಟು ಇಳಿಬಿಡುವುದು ಅಪೇಕ್ಷಣೀಯವಾಗಿದೆ, ಮತ್ತು ಹರಡುಗಂಟುಗಳವರೆಗೆ ಇಳಿಬಿಡುವುದು ಅನುಮತಿಸಲಾಗಿದೆ. ಅದರಲ್ಲಿ ಯಾವುದೇ ಅಸಹ್ಯತೆ (ಕರಾಹತ್) ಇಲ್ಲ. ಆದರೆ ಹರಡುಗಂಟುಗಳಿಗಿಂತ ಕೆಳಗೆ ಇಳಿಬಿಡುವುದು ನಿಷಿದ್ಧವಾಗಿದೆ."

ಇಬ್ನ್ ಉಸೈಮೀನ್ "ಅಲ್ಲಾಹನು ಅವನ ಕಡೆಗೆ ನೋಡುವುದಿಲ್ಲ" ಎಂಬ ಮಾತನ್ನು ವಿವರಿಸುತ್ತಾ ಹೇಳುತ್ತಾರೆ: "ಇದರರ್ಥ ಕರುಣೆ ಮತ್ತು ವಾತ್ಸಲ್ಯದ ನೋಟವಾಗಿದೆ. ಇದರ ಅರ್ಥ ಎಲ್ಲಾ ರೀತಿಯ ನೋಟಗಳಲ್ಲ. ಏಕೆಂದರೆ ಅಲ್ಲಾಹನಿಗೆ ಏನೂ ಮರೆಯಾಗಿಲ್ಲ ಮತ್ತು ಅವನ ದೃಷ್ಟಿಯಿಂದ ಯಾವುದೂ ತಪ್ಪಿಸಿಕೊಳ್ಳುವುದಿಲ್ಲ. ಬದಲಿಗೆ, ಇಲ್ಲಿ ಇದರ ಅರ್ಥ ಕರುಣೆ ಮತ್ತು ವಾತ್ಸಲ್ಯದ ನೋಟವಾಗಿದೆ."

التصنيفات

Manners of Dressing