ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' (ಮಂತ್ರ) ಮಾಡುತ್ತೇನೆ, ನಿಮಗೆ ನೋವುಂಟುಮಾಡುವ ಪ್ರತಿಯೊಂದು ವಸ್ತುವಿನಿಂದ, ಪ್ರತಿಯೊಂದು…

ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' (ಮಂತ್ರ) ಮಾಡುತ್ತೇನೆ, ನಿಮಗೆ ನೋವುಂಟುಮಾಡುವ ಪ್ರತಿಯೊಂದು ವಸ್ತುವಿನಿಂದ, ಪ್ರತಿಯೊಂದು (ಕೆಟ್ಟ) ಆತ್ಮದ ಕೆಡುಕಿನಿಂದ ಅಥವಾ ಅಸೂಯೆಪಡುವವನ ಕಣ್ಣಿನಿಂದ (ದೃಷ್ಟಿಯಿಂದ). ಅಲ್ಲಾಹು ನಿಮ್ಮನ್ನು ಗುಣಪಡಿಸುತ್ತಾನೆ. ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ

ಅಬೂ ಸಈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: "ಓ ಮುಹಮ್ಮದ್, ನೀವು ಅಸ್ವಸ್ಥರಾಗಿದ್ದೀರಾ?" ಅವರು (ಪ್ರವಾದಿ) ಹೇಳಿದರು: "ಹೌದು". ಅವರು (ಜಿಬ್ರೀಲ್) ಹೇಳಿದರು: "ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' (ಮಂತ್ರ) ಮಾಡುತ್ತೇನೆ, ನಿಮಗೆ ನೋವುಂಟುಮಾಡುವ ಪ್ರತಿಯೊಂದು ವಸ್ತುವಿನಿಂದ, ಪ್ರತಿಯೊಂದು (ಕೆಟ್ಟ) ಆತ್ಮದ ಕೆಡುಕಿನಿಂದ ಅಥವಾ ಅಸೂಯೆಪಡುವವನ ಕಣ್ಣಿನಿಂದ (ದೃಷ್ಟಿಯಿಂದ). ಅಲ್ಲಾಹು ನಿಮ್ಮನ್ನು ಗುಣಪಡಿಸುತ್ತಾನೆ. ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ".

[صحيح] [رواه مسلم]

الشرح

ದೇವದೂತರಾದ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಅವರಲ್ಲಿ ಕೇಳಿದರು: ಓ ಮುಹಮ್ಮದ್, ನೀವು ಅನಾರೋಗ್ಯದಿಂದ ಬಳಲುತ್ತಿದ್ದೀರಾ? ಅವರು (ಪ್ರವಾದಿ) ಹೇಳಿದರು: ಹೌದು. ಆಗ ಜಿಬ್ರೀಲ್ ರವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಮಾತುಗಳಿಂದ 'ರುಕ್ಯಾ' (ಮಂತ್ರ) ಮಾಡಿದರು: "ಅಲ್ಲಾಹನ ಹೆಸರಿನಿಂದ" ಅವನಲ್ಲಿ ಸಹಾಯ ಕೋರುತ್ತಾ "ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ" ಮತ್ತು ನಿಮ್ಮನ್ನು ಅಲ್ಲಾಹನ ರಕ್ಷಣೆಯಲ್ಲಿಡುತ್ತೇನೆ, "ನಿಮಗೆ ನೋವುಂಟುಮಾಡುವ ಪ್ರತಿಯೊಂದು ವಸ್ತುವಿನಿಂದ" ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, "ಪ್ರತಿಯೊಂದು (ಕೆಟ್ಟ) ಆತ್ಮದ ಕೆಡುಕಿನಿಂದ", "ಅಥವಾ ಅಸೂಯೆಪಡುವವನ ಕಣ್ಣಿನಿಂದ" ಅದು ನಿಮಗೆ ತಗಲುವುದರಿಂದ. ಅಲ್ಲಾಹು "ನಿಮ್ಮನ್ನು ಗುಣಪಡಿಸುತ್ತಾನೆ" ಮತ್ತು ನಿಮ್ಮನ್ನು ರಕ್ಷಿಸುತ್ತಾನೆ ಹಾಗೂ ಎಲ್ಲಾ ರೋಗಗಳಿಂದ ಕಾಪಾಡುತ್ತಾನೆ. "ಅಲ್ಲಾಹನ ಹೆಸರಿನಿಂದ ನಾನು ನಿಮಗೆ 'ರುಕ್ಯಾ' ಮಾಡುತ್ತೇನೆ" ಎಂದು ಅವರು ಒತ್ತು ನೀಡುವುದಕ್ಕಾಗಿ ಪುನರಾವರ್ತಿಸಿದರು, ಮತ್ತು ಪರಿಶುದ್ಧನಾದ ಅವನನ್ನು (ಅಲ್ಲಾಹನನ್ನು) ಹೊರತುಪಡಿಸಿ ಬೇರೆ ಯಾರೂ ಪ್ರಯೋಜನಕಾರಿಯಲ್ಲ ಎಂದು ಸೂಚಿಸಲು ಅವರು ಅದರಿಂದಲೇ ಪ್ರಾರಂಭಿಸಿ ಅದರಿಂದಲೇ ಕೊನೆಗೊಳಿಸಿದರು.

فوائد الحديث

ಕೇವಲ ವಾಸ್ತವ ಸ್ಥಿತಿಯನ್ನು ವಿವರಿಸುವ ದೃಷ್ಟಿಯಿಂದ, ದೂರುವ ಅಥವಾ ಅಸಮಾಧಾನ ವ್ಯಕ್ತಿಪಡಿಸುವ ರೀತಿಯಲ್ಲಿ ಅಲ್ಲದೆ, ಅನಾರೋಗ್ಯದ ಬಗ್ಗೆ ತಿಳಿಸುವುದು ಅನುಮತಿಸಲಾಗಿದೆ.

ಈ ಕೆಳಗಿನ ಶರತ್ತುಗಳೊಂದಿಗೆ 'ರುಕ್ಯಾ' (ಮಂತ್ರ/ಆಧ್ಯಾತ್ಮಿಕ ಚಿಕಿತ್ಸೆ) ಮಾಡುವುದು ಅನುಮತಿಸಲಾಗಿದೆ: 1. ಅದು ಕುರ್‌ಆನ್‌ನಿಂದ ಅಥವಾ ಅಲ್ಲಾಹನ ಸ್ಮರಣೆಯಿಂದ ಮತ್ತು ಶರೀಅತ್ ಸಮ್ಮತ ಪ್ರಾರ್ಥನೆಗಳಿಂದ ಆಗಿರಬೇಕು. 2. ಅದು ಅರಬ್ಬೀ ಭಾಷೆಯಲ್ಲಿರಬೇಕು, ಅಥವಾ ಇತರ ಭಾಷೆಗಳಲ್ಲಿ ಅದರ ಅರ್ಥವು ತಿಳಿಯುವಂತಿದ್ದರೆ (ಆ ಭಾಷೆಗಳಲ್ಲೂ) ಆಗಿರಬಹುದು. 3. 'ರುಕ್ಯಾ' ತಾನಾಗಿಯೇ ಪರಿಣಾಮ ಬೀರುವುದಿಲ್ಲ, ಬದಲಿಗೆ ಅದು ಕೇವಲ ಒಂದು ಸಾಧನವಾಗಿದೆ, ಅಲ್ಲಾಹನ ಅನುಮತಿಯಿಲ್ಲದೆ ಅದಕ್ಕೆ ಯಾವುದೇ ಪರಿಣಾಮವಿಲ್ಲ ಎಂದು ವಿಶ್ವಾಸವಿಡಬೇಕು. 4. ಅದು 'ಶಿರ್ಕ್', 'ಹರಾಮ್', 'ಬಿದ್ಅತ್', ಅಥವಾ ಅದಕ್ಕೆ ದಾರಿ ಮಾಡಿಕೊಡುವ ಯಾವುದೇ ವಿಷಯದಿಂದ ಮುಕ್ತವಾಗಿರಬೇಕು.

'ಐನ್' (ಕೆಟ್ಟ ದೃಷ್ಟಿ) ಯ ಹಾನಿಯನ್ನು ದೃಢೀಕರಿಸಲಾಗಿದೆ ಮತ್ತು ಅದು ಸತ್ಯವೆಂದು ತಿಳಿಸಲಾಗಿದೆ. ಆದ್ದರಿಂದ ಅದರಿಂದ (ರಕ್ಷಣೆಗಾಗಿ) 'ರುಕ್ಯಾ' ಮಾಡಿಸಿಕೊಳ್ಳಬೇಕು.

ಹದೀಸ್‌ನಲ್ಲಿ ಬಂದಿರುವ (ವಚನಗಳಿಂದ) 'ರುಕ್ಯಾ' ಮಾಡುವುದು ಅಪೇಕ್ಷಣೀಯವಾಗಿದೆ.

ಇತರ ಮನುಷ್ಯರಂತೆಯೇ, ಇತರರಿಗೆ ಉಂಟಾಗುವ ಅನಾರೋಗ್ಯವು ಪ್ರವಾದಿಯವರಿಗೂ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಂಟಾಗುತ್ತದೆ.

ಅಲ್ಲಾಹು ತನ್ನ ಪ್ರವಾದಿಯ ಬಗ್ಗೆ ವಹಿಸಿದ ಕಾಳಜಿ, ಅವರ ರಕ್ಷಣೆ, ಮತ್ತು ಅದಕ್ಕಾಗಿ ತನ್ನ ದೇವದೂತರನ್ನು ನಿಯೋಜಿಸಿದ್ದನ್ನು ತಿಳಿಸಲಾಗಿದೆ.

التصنيفات

Ruqyah (Healing and Protective Supplications)