إعدادات العرض
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಾಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸುವವಳು), 'ಮುಸ್ತೌಸಿಲಾ'…
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಾಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸುವವಳು), 'ಮುಸ್ತೌಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸಿಕೊಳ್ಳುವಂತೆ ಹೇಳುವವಳು), 'ವಾಶಿಮಾ' (ಹಚ್ಚೆ ಹಾಕುವವಳು), ಮತ್ತು 'ಮುಸ್ತೌಶಿಮಾ' (ಹಚ್ಚೆ ಹಾಕಿಸಿಕೊಳ್ಳುವವಳು) ಇವರನ್ನು ಶಪಿಸಿದರು
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಾಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸುವವಳು), 'ಮುಸ್ತೌಸಿಲಾ' (ಕೂದಲಿಗೆ ಬೇರೆ ಕೂದಲನ್ನು ಸೇರಿಸಿಕೊಳ್ಳುವಂತೆ ಹೇಳುವವಳು), 'ವಾಶಿಮಾ' (ಹಚ್ಚೆ ಹಾಕುವವಳು), ಮತ್ತು 'ಮುಸ್ತೌಶಿಮಾ' (ಹಚ್ಚೆ ಹಾಕಿಸಿಕೊಳ್ಳುವವಳು) ಇವರನ್ನು ಶಪಿಸಿದರು.
الترجمة
العربية Bosanski English فارسی Français Bahasa Indonesia Русский Türkçe اردو हिन्दी 中文 Kurdî Português Tiếng Việt Kiswahili Nederlands অসমীয়া ગુજરાતી සිංහල Magyar ქართული Hausa Română ไทย తెలుగు मराठी ភាសាខ្មែរ دری አማርኛ বাংলা Македонски Tagalog Українська ਪੰਜਾਬੀ മലയാളം Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲ್ಕು ವರ್ಗದವರ ಮೇಲೆ ಶಾಪವಿರಲಿ (ಅಲ್ಲಾಹನ ಕರುಣೆಯಿಂದ ದೂರವಾಗುವುದು) ಎಂದು ಪ್ರಾರ್ಥಿಸಿದರು: ಮೊದಲನೆಯವರು: 'ವಾಸಿಲಾ' - ತನ್ನ ಅಥವಾ ಇತರರ ಕೂದಲಿಗೆ ಬೇರೆ ಕೂದಲನ್ನು ಸೇರಿಸುವವಳು. ಎರಡನೆಯವರು: 'ಮುಸ್ತೌಸಿಲಾ' - ತನ್ನ ಕೂದಲಿಗೆ ಬೇರೆ ಕೂದಲನ್ನು ಸೇರಿಸುವಂತೆ ಇತರರನ್ನು ಕೇಳುವವಳು. ಮೂರನೆಯವರು: 'ವಾಶಿಮಾ' - ಸೌಂದರ್ಯ ಮತ್ತು ಅಲಂಕಾರಕ್ಕಾಗಿ ದೇಹದ ಯಾವುದೇ ಭಾಗದಲ್ಲಿ, ಉದಾಹರಣೆಗೆ ಮುಖ, ಕೈ ಅಥವಾ ಎದೆಯಲ್ಲಿ, ಸೂಜಿಯಿಂದ ಚುಚ್ಚಿ, ಅದರಲ್ಲಿ ಸುರ್ಮಾ ಅಥವಾ ಅಂತಹುದನ್ನು ಹಾಕಿ, ಅದರ ಗುರುತು ನೀಲಿ ಅಥವಾ ಹಸಿರಾಗುವಂತೆ ಮಾಡುವವಳು. ನಾಲ್ಕನೆಯವರು: 'ಮುಸ್ತೌಶಿಮಾ' - ತನಗೆ ಹಚ್ಚೆ ಹಾಕುವಂತೆ ಕೇಳುವವಳು. ಈ ಕಾರ್ಯಗಳು ಮಹಾಪಾಪಗಳಲ್ಲಿ (ಕಬಾಇರ್) ಸೇರಿವೆ.فوائد الحديث
ಇಬ್ನ್ ಹಜರ್ ಹೇಳುತ್ತಾರೆ: "ನಿಷೇಧಿಸಲ್ಪಟ್ಟಿರುವುದು ಕೂದಲನ್ನು ಕೂದಲಿನೊಂದಿಗೆ ಸೇರಿಸುವುದು. ಆದರೆ, ಒಬ್ಬಳು ತನ್ನ ಕೂದಲನ್ನು ಕೂದಲು ಅಲ್ಲದ ಬೇರೆ ವಸ್ತುಗಳಿಂದ, ಉದಾಹರಣೆಗೆ ಬಟ್ಟೆಯ ತುಂಡು ಇತ್ಯಾದಿಗಳಿಂದ ಸೇರಿಸಿದರೆ, ಅದು ನಿಷೇಧದಲ್ಲಿ ಒಳಪಡುವುದಿಲ್ಲ."
ಪಾಪ ಕಾರ್ಯದಲ್ಲಿ ಸಹಕರಿಸುವುದನ್ನು ನಿಷೇಧಿಸಲಾಗಿದೆ.
ಅಲ್ಲಾಹನ ಸೃಷ್ಟಿಯನ್ನು ಬದಲಾಯಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ವಂಚನೆ ಮತ್ತು ಮೋಸವಾಗಿದೆ.
ಅಲ್ಲಾಹು ಮತ್ತು ಅವನ ಸಂದೇಶವಾಹಕರು ಶಪಿಸಿರುವವರನ್ನು ಸಾರ್ವತ್ರಿಕವಾಗಿ ಶಪಿಸಲು ಅನುಮತಿಯಿದೆ.
ಈ ಕಾಲದಲ್ಲಿ ನಿಷಿದ್ಧವಾದ 'ವಸ್ಲ್' (ಕೂದಲು ಸೇರಿಸುವುದು) ನಲ್ಲಿ ವಿಗ್ (ಸಿದ್ಧ ಕೇಶ ರಾಶಿ) ಧರಿಸುವುದು ಸೇರಿದೆ. ಇದು ಸತ್ಯನಿಷೇಧಿಗಳನ್ನು ಅನುಕರಿಸುವುದು, ವಂಚನೆ ಮತ್ತು ಮೋಸವನ್ನು ಒಳಗೊಂಡಿರುವುದರಿಂದ ನಿಷಿದ್ಧವಾಗಿದೆ.
ಖತ್ತಾಬೀ ಹೇಳುತ್ತಾರೆ: "ಈ ವಿಷಯಗಳಲ್ಲಿ ತೀವ್ರವಾದ ಎಚ್ಚರಿಕೆಯು ಬಂದಿರುವುದಕ್ಕೆ ಕಾರಣ, ಅವುಗಳಲ್ಲಿರುವ ವಂಚನೆ ಮತ್ತು ಮೋಸವಾಗಿದೆ. ಒಂದು ವೇಳೆ ಅವುಗಳಲ್ಲಿ ಯಾವುದಕ್ಕಾದರೂ ಅನುಮತಿ ನೀಡಿದ್ದರೆ, ಅದು ಇತರ ರೀತಿಯ ವಂಚನೆಗಳನ್ನು ಅನುಮತಿಸಲು ದಾರಿಯಾಗುತ್ತಿತ್ತು. ಅದಲ್ಲದೆ, ಅವುಗಳಲ್ಲಿ ಸೃಷ್ಟಿಯನ್ನು ಬದಲಾಯಿಸುವುದೂ ಸೇರಿದೆ. ಇಬ್ನ್ ಮಸ್ಊದ್ ರವರ ಹದೀಸ್‌ನಲ್ಲಿ "ಅಲ್ಲಾಹನ ಸೃಷ್ಟಿಯನ್ನು ಬದಲಾಯಿಸುವವರು" ಎಂದು ಹೇಳಿರುವುದರಲ್ಲಿ ಇದರ ಕಡೆಗೇ ಸೂಚನೆಯಿದೆ. ಹೆಚ್ಚು ಬಲ್ಲವನು ಅಲ್ಲಾಹು.
ಇಮಾಮ್ ನವವಿ ಹೇಳುತ್ತಾರೆ: "ಇದು (ಹಚ್ಚೆ) ಹಾಕುವವಳಿಗೆ ಮತ್ತು ಹಾಕಿಸಿಕೊಳ್ಳುವವಳಿಗೆ ಹರಾಮ್ ಆಗಿದೆ. ಹಚ್ಚೆ ಹಾಕಿದ ಸ್ಥಳವು ಅಶುದ್ಧ (ನಜಿಸ್) ವಾಗುತ್ತದೆ. ಒಂದು ವೇಳೆ ಚಿಕಿತ್ಸೆಯಿಂದ ಅದನ್ನು ತೆಗೆದುಹಾಕಲು ಸಾಧ್ಯವಾದರೆ, ಹಾಗೆ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಗಾಯ ಮಾಡುವುದರಿಂದ ಮಾತ್ರ ಸಾಧ್ಯವಿದ್ದು, ಅದರಿಂದ ಪ್ರಾಣಕ್ಕೆ ಹಾನಿ, ಅಂಗ ಕಳೆದುಕೊಳ್ಳುವುದು, ಅದರ ಕಾರ್ಯಕ್ಷಮತೆ ನಷ್ಟವಾಗುವುದು ಅಥವಾ ಕಾಣುವ ಅಂಗದಲ್ಲಿ ಅತಿಯಾದ ವಿಕಾರ ಉಂಟಾಗುವ ಭಯವಿದ್ದರೆ, ಅದನ್ನು ತೆಗೆದುಹಾಕುವುದು ಕಡ್ಡಾಯವಲ್ಲ. ಒಬ್ಬಳು (ಹಚ್ಚೆ ಹಾಕಿಸಿಕೊಂಡ ನಂತರ) ಪಶ್ಚಾತ್ತಾಪಪಟ್ಟರೆ, (ಸುರಕ್ಷಿತವಾಗಿ ತೆಗೆಯಲು ಸಾಧ್ಯವಾಗದಿದ್ದಾಗ) ಅವಳ ಮೇಲೆ ಪಾಪವು ಉಳಿಯುವುದಿಲ್ಲ. ಒಂದು ವೇಳೆ ಅಂತಹ ಯಾವುದೇ ಭಯವಿಲ್ಲದಿದ್ದರೆ, ಅದನ್ನು ತೆಗೆದುಹಾಕುವುದು ಅವಳ ಮೇಲೆ ಕಡ್ಡಾಯವಾಗುತ್ತದೆ ಮತ್ತು ಅದನ್ನು ವಿಳಂಬ ಮಾಡುವುದರಿಂದ ಅವಳು ಪಾಪಿಯಾಗುತ್ತಾಳೆ."
التصنيفات
Clothing and Adornment