ನಿಮ್ಮಲ್ಲೊಬ್ಬನು ಆಹಾರ ಸೇವಿಸುವಾಗ ಬಲಗೈಯಿಂದ ಸೇವಿಸಲಿ ಮತ್ತು ಕುಡಿಯುವಾಗ ಬಲಗೈಯಿಂದ ಕುಡಿಯಲಿ. ಏಕೆಂದರೆ ಶೈತಾನನು ಎಡಗೈಯಿಂದ…

ನಿಮ್ಮಲ್ಲೊಬ್ಬನು ಆಹಾರ ಸೇವಿಸುವಾಗ ಬಲಗೈಯಿಂದ ಸೇವಿಸಲಿ ಮತ್ತು ಕುಡಿಯುವಾಗ ಬಲಗೈಯಿಂದ ಕುಡಿಯಲಿ. ಏಕೆಂದರೆ ಶೈತಾನನು ಎಡಗೈಯಿಂದ ಆಹಾರ ಸೇವಿಸುತ್ತಾನೆ ಮತ್ತು ಎಡಗೈಯಿಂದ ಕುಡಿಯುತ್ತಾನೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ಆಹಾರ ಸೇವಿಸುವಾಗ ಬಲಗೈಯಿಂದ ಸೇವಿಸಲಿ ಮತ್ತು ಕುಡಿಯುವಾಗ ಬಲಗೈಯಿಂದ ಕುಡಿಯಲಿ. ಏಕೆಂದರೆ ಶೈತಾನನು ಎಡಗೈಯಿಂದ ಆಹಾರ ಸೇವಿಸುತ್ತಾನೆ ಮತ್ತು ಎಡಗೈಯಿಂದ ಕುಡಿಯುತ್ತಾನೆ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಸ್ಲಿಮರಿಗೆ ಬಲಗೈಯಿಂದ ಆಹಾರ-ಪಾನೀಯಗಳನ್ನು ಸೇವಿಸಲು ಆದೇಶಿಸುತ್ತಿದ್ದಾರೆ ಮತ್ತು ಎಡಗೈಯಿಂದ ಆಹಾರ-ಪಾನೀಯ ಸೇವಿಸುವುದನ್ನು ವಿರೋಧಿಸುತ್ತಿದ್ದಾರೆ. ಅದೇಕೆಂದರೆ, ಶೈತಾನನು ಎಡಗೈಯಿಂದ ಆಹಾರ-ಪಾನೀಯಗಳನ್ನು ಸೇವಿಸುತ್ತಾನೆ.

فوائد الحديث

ಎಡಗೈಯಲ್ಲಿ ಆಹಾರ-ಪಾನೀಯ ಸೇವಿಸುವ ಮೂಲಕ ಶೈತಾನನನ್ನು ಅನುಕರಿಸುವುದನ್ನು ವಿರೋಧಿಸಲಾಗಿದೆ.

التصنيفات

Manners of Eating and Drinking