ತನಗಾಗಿ ಮಾತ್ರ ನಿಷ್ಕಳಂಕವಾಗಿ ನಿರ್ವಹಿಸಲಾದ ಮತ್ತು ತನ್ನ ಸಂಪ್ರೀತಿಯನ್ನು ಮಾತ್ರ ಬಯಸಲಾದ ಕರ್ಮಗಳ ಹೊರತು ಬೇರೆ ಯಾವುದನ್ನೂ…

ತನಗಾಗಿ ಮಾತ್ರ ನಿಷ್ಕಳಂಕವಾಗಿ ನಿರ್ವಹಿಸಲಾದ ಮತ್ತು ತನ್ನ ಸಂಪ್ರೀತಿಯನ್ನು ಮಾತ್ರ ಬಯಸಲಾದ ಕರ್ಮಗಳ ಹೊರತು ಬೇರೆ ಯಾವುದನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ

ಅಬೂ ಉಮಾಮ ಬಾಹಿಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಕೇಳಿದರು: "ಪ್ರತಿಫಲಕ್ಕಾಗಿ ಮತ್ತು ಕೀರ್ತಿಗಾಗಿ ಯುದ್ಧಮಾಡುವವನ ಬಗ್ಗೆ ತಮ್ಮ ಅಭಿಪ್ರಾಯವೇನು? ಅವನ ಸ್ಥಿತಿಯೇನಾಗಿರಬಹುದು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನಿಗೆ ಯಾವುದೇ ಪ್ರತಿಫಲವಿಲ್ಲ." ಆತ ಅದನ್ನು ಮೂರು ಬಾರಿ ಕೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಗೆ ಯಾವುದೇ ಪ್ರತಿಫಲವಿಲ್ಲ ಎಂದೇ ಉತ್ತರಿಸಿದರು. ನಂತರ ಅವರು ಹೇಳಿದರು: "ತನಗಾಗಿ ಮಾತ್ರ ನಿಷ್ಕಳಂಕವಾಗಿ ನಿರ್ವಹಿಸಲಾದ ಮತ್ತು ತನ್ನ ಸಂಪ್ರೀತಿಯನ್ನು ಮಾತ್ರ ಬಯಸಲಾದ ಕರ್ಮಗಳ ಹೊರತು ಬೇರೆ ಯಾವುದನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ."

[صحيح]

الشرح

ಅಲ್ಲಾಹನಿಂದ ಪ್ರತಿಫಲವನ್ನು ಬೇಡುತ್ತಾ ಮತ್ತು ಜನರ ನಡುವೆ ಪ್ರಶಂಸೆ ಮತ್ತು ಕೀರ್ತಿ ದೊರೆಯಬೇಕೆಂಬ ಆಸೆಯಿಂದ ಯುದ್ಧಕ್ಕೆ ಮತ್ತು ಜಿಹಾದ್‌ಗೆ ಹೊರಡುವ ವ್ಯಕ್ತಿಯ ಬಗ್ಗೆ, ಅವನಿಗೆ ಪ್ರತಿಫಲ ದೊರೆಯುತ್ತದೆಯೇ ಎಂದು ವಿಧಿ ಕೇಳಲು ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನಿಗೆ ಯಾವುದೇ ಪ್ರತಿಫಲವಿಲ್ಲ. ಏಕೆಂದರೆ ಅವನು ತನ್ನ ಉದ್ದೇಶದಲ್ಲಿ ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡಿದ್ದಾನೆ." ಆ ವ್ಯಕ್ತಿ ಆ ಪ್ರಶ್ನೆಯನ್ನು ಮೂರು ಬಾರಿ ಕೇಳಿದಾಗಲೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದೇ ಉತ್ತರವನ್ನು ಅಂದರೆ ಅವನಿಗೆ ಯಾವುದೇ ಪ್ರತಿಫಲವಿಲ್ಲವೆಂದು ಒತ್ತುಕೊಟ್ಟು ಹೇಳಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಬಳಿ ಕರ್ಮಗಳು ಸ್ವೀಕಾರವಾಗುವ ಪ್ರಮುಖ ಸಿದ್ಧಾಂತವನ್ನು ತಿಳಿಸಿಕೊಟ್ಟರು. ಅಂದರೆ, ಅಲ್ಲಾಹು ಯಾವುದೇ ಕರ್ಮವನ್ನು ಸ್ವೀಕರಿಸಬೇಕಾದರೆ, ಅದು ಸಂಪೂರ್ಣವಾಗಿ ಅವನಿಗಾಗಿರಬೇಕು ಮತ್ತು ಅವನ ಸಂಪ್ರೀತಿಗಾಗಿರಬೇಕು. ಅದರಲ್ಲಿ ಇತರ ಯಾರನ್ನೂ ಸಹಭಾಗಿಯಾಗಿ ಮಾಡಿರಬಾರದು.

فوائد الحديث

ಅಲ್ಲಾಹನ ಸಂಪ್ರೀತಿಗಾಗಿ ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿಸಿದ ಮಾರ್ಗದರ್ಶನಕ್ಕೆ ಅನುಗುಣವಾಗಿ ನಿರ್ವಹಿಸಿದ ಕರ್ಮವನ್ನಲ್ಲದೆ ಬೇರೆ ಯಾವ ಕರ್ಮವನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ.

ಮುಫ್ತಿ (ಧರ್ಮವಿಧಿ ನೀಡುವವನು) ನೀಡುವ ಅತ್ಯುತ್ತಮ ವಿಧಿ ಹೇಗಿರುತ್ತೆಯೆಂದರೆ, ಅದು ಕೇಳುಗನ ಪ್ರಶ್ನೆಗೆ ಉತ್ತರವನ್ನು ಹೊಂದಿರುವುದಲ್ಲದೆ ಸ್ವಲ್ಪ ಹೆಚ್ಚುವರಿಯನ್ನೂ ಹೊಂದಿರುತ್ತದೆ.

ಪ್ರಶ್ನೆಯನ್ನು ಪುನರಾವರ್ತಿಸುವ ಮೂಲಕ ವಿಷಯದ ಮಹತ್ವವನ್ನು ಹಿಗ್ಗಿಸಲಾಗಿದೆ.

ಯಾರು ನಿಷ್ಕಳಂಕ ಉದ್ದೇಶ ಮತ್ತು ಪರಲೋಕದಲ್ಲಿ ಪ್ರತಿಫಲ ದೊರೆಯಬೇಕೆಂಬ ಬಯಕೆಯಿಂದ ಅಲ್ಲಾಹನ ವಚನವು ಅತ್ಯುನ್ನತವಾಗಬೇಕೆಂದು ಹೋರಾಡುತ್ತಾರೋ ಅವರೇ ನಿಜವಾದ ಧರ್ಮಯೋಧರು. ಇಹಲೋಕಕ್ಕಾಗಿ ಹೋರಾಡುವವರು ಧರ್ಮಯೋಧರಲ್ಲ.

التصنيفات

Merits of Heart Acts