ಒಂದು ವೇಳೆ ಒಬ್ಬ ವ್ಯಕ್ತಿಯು, ತಾನು 'ಅದನ್ ಅಬ್ಯನ್' (ಯಮನ್‌ನ ಒಂದು ದೂರದ ಸ್ಥಳ) ನಲ್ಲಿದ್ದರೂ ಸಹ, ಅದರಲ್ಲಿ (ಹರಮ್‌ನಲ್ಲಿ) ಅಧರ್ಮವನ್ನು…

ಒಂದು ವೇಳೆ ಒಬ್ಬ ವ್ಯಕ್ತಿಯು, ತಾನು 'ಅದನ್ ಅಬ್ಯನ್' (ಯಮನ್‌ನ ಒಂದು ದೂರದ ಸ್ಥಳ) ನಲ್ಲಿದ್ದರೂ ಸಹ, ಅದರಲ್ಲಿ (ಹರಮ್‌ನಲ್ಲಿ) ಅಧರ್ಮವನ್ನು (ಎಸಗಲು) ಉದ್ದೇಶಿಸಿದರೆ, ಅಲ್ಲಾಹು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವನು

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾಗಿ ಸೂಚಿಸುತ್ತಾ ಹೇಳಿದರು: ಸರ್ವಶಕ್ತನಾದ ಅಲ್ಲಾಹನ ಈ ವಚನದ ಬಗ್ಗೆ: “ಮತ್ತು ಯಾರೇ ಆಗಲಿ ಅದರಲ್ಲಿ (ಹರಮ್‌ನಲ್ಲಿ) ಅನ್ಯಾಯದ ಮೂಲಕ ಮಾರ್ಗಭ್ರಷ್ಟತೆಯನ್ನು (ಅಧರ್ಮವನ್ನು) ಉದ್ದೇಶಿಸುತ್ತಾನೋ, ನಾವು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವೆವು.” [ಸೂರಃ ಅಲ್-ಹಜ್ಜ್: 25] ಅವರು (ಪ್ರವಾದಿ) ಹೇಳಿದರು: "ಒಂದು ವೇಳೆ ಒಬ್ಬ ವ್ಯಕ್ತಿಯು, ತಾನು 'ಅದನ್ ಅಬ್ಯನ್' (ಯಮನ್‌ನ ಒಂದು ದೂರದ ಸ್ಥಳ) ನಲ್ಲಿದ್ದರೂ ಸಹ, ಅದರಲ್ಲಿ (ಹರಮ್‌ನಲ್ಲಿ) ಅಧರ್ಮವನ್ನು (ಎಸಗಲು) ಉದ್ದೇಶಿಸಿದರೆ, ಅಲ್ಲಾಹು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವನು".

[صحيح] [رواه أحمد والحاكم]

الشرح

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸರ್ವಶಕ್ತನಾದ ಅಲ್ಲಾಹನ ಈ ವಚನವನ್ನು ಉಲ್ಲೇಖಿಸಿದರು: “ಮತ್ತು ಯಾರೇ ಆಗಲಿ ಅದರಲ್ಲಿ ಅನ್ಯಾಯದ ಮೂಲಕ ಮಾರ್ಗಭ್ರಷ್ಟತೆಯನ್ನು (ಅಧರ್ಮವನ್ನು) ಉದ್ದೇಶಿಸುತ್ತಾನೋ, ನಾವು ಅವನಿಗೆ ಯಾತನಾಮಯ ಶಿಕ್ಷೆಯನ್ನು ಸವಿಯುವಂತೆ ಮಾಡುವೆವು.” ಅವರು ಹೇಳಿದರು: ಜನರಲ್ಲಿ ಯಾರಾದರೂ ಮಕ್ಕಾದ ಹರಮ್‌ನಲ್ಲಿ ಒಂದು ಕೆಟ್ಟ ಕೆಲಸವನ್ನು ಮಾಡಲು ಮನಸ್ಸು ಮಾಡಿ ದೃಢ ಸಂಕಲ್ಪ ಮಾಡಿದರೆ – ಅಂದರೆ, ಅದರಲ್ಲಿ ಅಲ್ಲಾಹು ನಿಷೇಧಿಸಿರುವುದನ್ನು, ಉದಾಹರಣೆಗೆ (ಕೆಟ್ಟ) ಮಾತು ಅಥವಾ ಉದ್ದೇಶಪೂರ್ವಕ ಹತ್ಯೆಯಂತಹ ಅನ್ಯಾಯವನ್ನು (ಮಾಡುವ ಮೂಲಕ ಹರಮ್‌ನ ಪಾವಿತ್ರ್ಯತೆಯನ್ನು) ಉಲ್ಲಂಘಿಸಲು ಬಯಸಿದರೆ – ಅವನು ಯಮನ್‌ನ ಅದನ್ ನಗರದಲ್ಲಿದ್ದರೂ ಸಹ, ಆ ಕಾರಣಕ್ಕಾಗಿ ಅಲ್ಲಾಹು ಅವನಿಗೆ ಯಾತನಾಮಯ ಶಿಕ್ಷೆಯನ್ನು ನೀಡುವುದು ಅವನಿಗೆ ಅರ್ಹವಾಗುತ್ತದೆ. ಅವನು ಅದನ್ನು (ವಾಸ್ತವದಲ್ಲಿ) ಮಾಡದಿದ್ದರೂ ಸಹ; ಆ ವಿಷಯದಲ್ಲಿ ಕೇವಲ ದೃಢ ಸಂಕಲ್ಪ ಮಾಡುವುದೇ (ಶಿಕ್ಷೆ ದೊರೆಯಲು) ಸಾಕಾಗುತ್ತದೆ.

فوائد الحديث

ಹರಮ್‌ನ (ಮಕ್ಕಾದ ಪವಿತ್ರ ಕ್ಷೇತ್ರ) ವಿಶೇಷತೆಯನ್ನು ಮತ್ತು ಅದರ ಗೌರವವನ್ನು ವಿವರಿಸಲಾಗಿದೆ.

ಸಅದಿ ಹೇಳುತ್ತಾರೆ: ಹರಮ್ ಅನ್ನು ಗೌರವಿಸುವುದು ಕಡ್ಡಾಯವಾಗಿದೆ, ಅದನ್ನು ಅತಿಯಾಗಿ ಗೌರವಿಸಬೇಕಾಗಿದೆ ಮತ್ತು ಅದರಲ್ಲಿ ಪಾಪಗಳನ್ನು ಮಾಡಲು ಉದ್ದೇಶಿಸುವುದು ಮತ್ತು ಪಾಪ ಮಾಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಈ ಪವಿತ್ರ ವಚನದಲ್ಲಿ ತಿಳಿಸಲಾಗಿದೆ.

ದಹ್ಹಾಕ್ ಹೇಳುತ್ತಾರೆ: ಖಂಡಿತವಾಗಿಯೂ ಒಬ್ಬ ವ್ಯಕ್ತಿಯು ಬೇರೆ ನಾಡಿನಲ್ಲಿದ್ದರೂ ಮಕ್ಕಾದಲ್ಲಿ ಪಾಪ ಮಾಡಲು ಉದ್ದೇಶಿಸಿದರೆ, ಅವನು ಅದನ್ನು ಮಾಡದಿದ್ದರೂ (ಕಾರ್ಯರೂಪಕ್ಕೆ ತರದಿದ್ದರೂ) ಸಹ ಅದು ಅವನ ವಿರುದ್ಧ ಲಿಖಿತಗೊಳಿಸಲಾಗುತ್ತದೆ.

التصنيفات

Occasions of Revelation