ಇಝಾರ್‌ನಲ್ಲಿ (ಲುಂಗಿ, ಧೋತಿ, ಪ್ಯಾಂಟು) ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕಾಗ್ನಿಯಲ್ಲಿರುವುದು

ಇಝಾರ್‌ನಲ್ಲಿ (ಲುಂಗಿ, ಧೋತಿ, ಪ್ಯಾಂಟು) ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕಾಗ್ನಿಯಲ್ಲಿರುವುದು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಝಾರ್‌ನಲ್ಲಿ (ಲುಂಗಿ, ಧೋತಿ, ಪ್ಯಾಂಟು) ಹರಡುಗಂಟುಗಳಿಗಿಂತ ಕೆಳಗಿರುವ ಭಾಗವು ನರಕಾಗ್ನಿಯಲ್ಲಿರುವುದು."

[صحيح] [رواه البخاري]

الشرح

ತಮ್ಮ ದೇಹದ ಕೆಳಗಿನ ಭಾಗವನ್ನು ಮುಚ್ಚುವ ಲುಂಗಿ, ಪ್ಯಾಂಟು ಅಥವಾ ಇನ್ನಾವುದೇ ವಸ್ತುವನ್ನು ಪಾದದ ಹರಡುಗಂಟುಗಳಿಗಿಂತ ಕೆಳಗೆ ಇಳಿಬಿಡುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಪುರುಷರನ್ನು ಎಚ್ಚರಿಸಿದ್ದಾರೆ. ಇಝಾರ್ ಅನ್ನು ಇಳಿಬಿಡುವವನ ಪಾದದ ಹರಡುಗಂಟುಗಳ ಕೆಳಗಿನ ಭಾಗವು ನರಕಾಗ್ನಿಯಲ್ಲಿರುತ್ತದೆ. ಇದು ಅವನು ಮಾಡಿದ ಕೃತ್ಯಕ್ಕೆ ಶಿಕ್ಷೆಯಾಗಿದೆ.

فوائد الحديث

ಹರಡುಗಂಟುಗಳಿಗಿಂತ ಕೆಳಗೆ ಬಟ್ಟೆಯನ್ನು ಇಳಿಸಿ ಧರಿಸುವುದನ್ನು ಪುರುಷರಿಗೆ ನಿಷೇಧಿಸಲಾಗಿದೆ ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: ಇಝಾರ್ ಅನ್ನು ಇಳಿಬಿಡಬಾರದು ಎಂಬ ನಿಷೇಧಕ್ಕೆ ಒಂದು ವಿನಾಯಿತಿ ಇದೆ. ಅದೇನೆಂದರೆ, ಅಗತ್ಯಕ್ಕಾಗಿ ಇಳಿಬಿಡುವುದು. ಉದಾಹರಣೆಗೆ, ಒಬ್ಬರು ತಮ್ಮ ಹರಡುಗಂಟಿನಲ್ಲಿ ಗಾಯವನ್ನು ಹೊಂದಿದ್ದು, ಅದನ್ನು ಮುಚ್ಚದಿದ್ದರೆ ನೊಣಗಳು ಕಿರಿಕಿರಿ ಉಂಟುಮಾಡುತ್ತವೆ ಮತ್ತು ಅದನ್ನು ಮುಚ್ಚಲು ಇಝಾರ್ ಹೊರತು ಬೇರೆ ಏನೂ ಲಭ್ಯವಿಲ್ಲದಿದ್ದರೆ ಇಝಾರ್ ನಿಂದ ಮುಚ್ಚಬಹುದು.

ಈ ನಿಯಮವು ಪುರುಷರಿಗೆ ಮಾತ್ರ ಸೀಮಿತವಾಗಿದೆ. ಏಕೆಂದರೆ ಮಹಿಳೆಯರು ತಮ್ಮ ಉಡುಪುಗಳನ್ನು ಹರಡುಗಂಟುಗಳಿಗಿಂತ ಕೆಳಗೆ ಒಂದು ಮೊಳದಷ್ಟು ಇಳಿಬಿಡಬೇಕೆಂದು ಆದೇಶಿಸಲಾಗಿದೆ.

التصنيفات

Clothing and Adornment