إعدادات العرض
ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ
ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗದಲ್ಲಿ ಒಂದು ಮಾರುಕಟ್ಟೆ ಇದೆ. ಅವರು (ಸ್ವರ್ಗವಾಸಿಗಳು) ಪ್ರತಿ ಶುಕ್ರವಾರ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸಿ, ಅವರ ಮುಖ ಮತ್ತು ವಸ್ತ್ರಗಳ ಮೇಲೆ (ಸುವಾಸನೆಯನ್ನು) ಬೀರುತ್ತದೆ. ಆಗ ಅವರ ಸೌಂದರ್ಯ ಮತ್ತು ಅಂದವು ಹೆಚ್ಚಾಗುತ್ತದೆ. ನಂತರ ಅವರು ಆ ಹೆಚ್ಚಾದ ಸೌಂದರ್ಯ ಮತ್ತು ಅಂದದೊಂದಿಗೆ, ತಮ್ಮ ಕುಟುಂಬದವರ ಬಳಿಗೆ ಹಿಂತಿರುಗಿದಾಗ, ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ (ನ್ನು ಬಿಟ್ಟುಹೋದ) ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, (ನಾವು ಬಿಟ್ಟುಹೋದ) ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'".
الترجمة
العربية বাংলা Bosanski English Español فارسی Indonesia Русский Tagalog Türkçe اردو 中文 हिन्दी Tiếng Việt සිංහල Kurdî Nederlands Kiswahili অসমীয়া ગુજરાતી Magyar ქართული Hausa Română ไทย Português मराठी ភាសាខ្មែរ دری አማርኛ Македонски తెలుగు Українська ਪੰਜਾਬੀ മലയാളം Moore پښتو тоҷикӣ မြန်မာالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸ್ವರ್ಗದಲ್ಲಿ ಒಂದು ಸ್ಥಳವಿದ್ದು, ಅಲ್ಲಿ ಅವರು (ಸ್ವರ್ಗವಾಸಿಗಳು) ಒಟ್ಟುಗೂಡುತ್ತಾರೆ. ಅಲ್ಲಿ ಯಾವುದೇ ಖರೀದಿ ಅಥವಾ ಮಾರಾಟವಿರುವುದಿಲ್ಲ. ಅಲ್ಲಿ ಅವರು ತಮಗೆ ಬೇಕಾದುದನ್ನು ತೆಗೆದುಕೊಳ್ಳುತ್ತಾರೆ. ಅವರು ಅಥವಾ ಪ್ರತಿ ವಾರಕ್ಕೊಮ್ಮೆ ಅಲ್ಲಿಗೆ ಬರುತ್ತಾರೆ. ಆಗ ಉತ್ತರದಿಂದ ಗಾಳಿ ಬೀಸುತ್ತದೆ. ಅದು ಅವರ ಮುಖ ಮತ್ತು ವಸ್ತ್ರಗಳನ್ನು ಅಲುಗಾಡಿಸುತ್ತದೆ. ಆಗ ಅವರು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಂತರ ಅವರು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡ ಸ್ಥಿತಿಯಲ್ಲಿ ತಮ್ಮ ಕುಟುಂಬದವರ ಬಳಿಗೆ ಹಿಂತಿರುಗುತ್ತಾರೆ. ಆಗ ಅವರ ಕುಟುಂಬದವರು ಹೇಳುತ್ತಾರೆ: 'ಅಲ್ಲಾಹನಾಣೆ, ನಮ್ಮ ನಂತರ ನೀವು ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'. ಆಗ ಅವರು ಹೇಳುತ್ತಾರೆ: 'ಮತ್ತು ನೀವೂ ಸಹ, ಅಲ್ಲಾಹನಾಣೆ, ನಮ್ಮ ನಂತರ ಸೌಂದರ್ಯ ಮತ್ತು ಅಂದವನ್ನು ಹೆಚ್ಚಿಸಿಕೊಂಡಿದ್ದೀರಿ'.فوائد الحديث
ಸ್ವರ್ಗವಾಸಿಗಳ ಸೌಂದರ್ಯ ಮತ್ತು ಅಂದವು ನಿರಂತರ ಹೆಚ್ಚುತ್ತಿರುತ್ತದೆ ಎಂದು ವಿವರಿಸಲಾಗಿದೆ.
ಈ ಹದೀಸ್‌ಗಳು (ಮತ್ತು ಇಂತಹುದೇ ಹದೀಸ್‌ಗಳು) ಮನುಷ್ಯನಿಗೆ ಆ ನಿವಾಸವನ್ನು (ಸ್ವರ್ಗವನ್ನು) ತಲುಪಿಸುವ ಸತ್ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸುತ್ತವೆ.
ವಿಶೇಷವಾಗಿ ಉತ್ತರದಿಂದ ಬೀಸುವ ಗಾಳಿಯನ್ನು ತಿಳಿಸಲಾಗಿದೆ. ಏಕೆಂದರೆ ಅದು ಅರಬ್ಬರ ದೃಷ್ಟಿಯಲ್ಲಿ ಅತ್ಯುತ್ತಮ ಗಾಳಿಯಾಗಿತ್ತು. ಅದು ಒಳಿತು ಮತ್ತು ಮಳೆಯನ್ನು ತರುತ್ತಿತ್ತು.
ಸ್ವರ್ಗ ಮತ್ತು ಅದರ ಅನುಗ್ರಹಗಳ ಬಗ್ಗೆ ಉತ್ತೇಜನ ನೀಡುವುದರ ಮೂಲಕ ಅಲ್ಲಾಹನ ಕಡೆಗೆ ಆಹ್ವಾನಿಸಲು ಪ್ರೋತ್ಸಾಹಿಸಲಾಗಿದೆ.
التصنيفات
ಸ್ವರ್ಗ ಮತ್ತು ನರಕದ ಗುಣಲಕ್ಷಣಗಳು