ಖಂಡಿತವಾಗಿಯೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲದ್ದಿ ಅಥವಾ ಮೂಳೆಯಿಂದ 'ಇಸ್ತಿಂಜಾ' (ಶುದ್ಧೀಕರಣ)…

ಖಂಡಿತವಾಗಿಯೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲದ್ದಿ ಅಥವಾ ಮೂಳೆಯಿಂದ 'ಇಸ್ತಿಂಜಾ' (ಶುದ್ಧೀಕರಣ) ಮಾಡುವುದನ್ನು ನಿಷೇಧಿಸಿದರು,

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಖಂಡಿತವಾಗಿಯೂ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲದ್ದಿ ಅಥವಾ ಮೂಳೆಯಿಂದ 'ಇಸ್ತಿಂಜಾ' (ಶುದ್ಧೀಕರಣ) ಮಾಡುವುದನ್ನು ನಿಷೇಧಿಸಿದರು, ಮತ್ತು ಹೇಳಿದರು: 'ಖಂಡಿತವಾಗಿಯೂ ಅವೆರಡೂ ಶುದ್ಧೀಕರಿಸುವುದಿಲ್ಲ' ".

[صحيح] [رواه الدارقطني]

الشرح

ಮೂತ್ರ ಅಥವಾ ಮಲ ವಿಸರ್ಜಿಸಿ ತನ್ನ ಅಗತ್ಯವನ್ನು ಪೂರೈಸಿದವನು, ಪ್ರಾಣಿಯ ಮೂಳೆ ಅಥವಾ ಅದರ ಲದ್ದಿ ಮತ್ತು ಒಣ ಹಿಕ್ಕೆಗಳಿಂದ 'ಇಸ್ತಿಜ್ಮಾರ್' (ಕಲ್ಲು ಇತ್ಯಾದಿಗಳಿಂದ ಶುದ್ಧೀಕರಿಸುವುದು) ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದರು; ಮತ್ತು ಹೇಳಿದರು: ಅವುಗಳು 'ನಜಾಸತ್' (ಅಶುದ್ಧತೆ) ಯನ್ನು ನಿವಾರಿಸುವುದಿಲ್ಲ, ಮತ್ತು ಅದನ್ನು ಶುದ್ಧ ಮಾಡುವುದಿಲ್ಲ.

فوائد الحديث

ಶೌಚಾಲಯ ಮತ್ತು 'ಇಸ್ತಿಂಜಾ'ದ ಕೆಲವು ಶಿಷ್ಟಾಚಾರಗಳನ್ನು ವಿವರಿಸಲಾಗಿದೆ.

ಲದ್ದಿಯಿಂದ 'ಇಸ್ತಿಜ್ಮಾರ್' ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ: ಅದು ಒಂದೋ ಅಶುದ್ಧವಾಗಿದೆ (ನಜಿಸ್), ಅಥವಾ ಅದು ಜಿನ್ನ್‌ ಪ್ರಾಣಿಗಳ ಮೇವಾಗಿರುತ್ತದೆ.

ಮೂಳೆಯಿಂದ 'ಇಸ್ತಿಜ್ಮಾರ್' ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ: ಅದು ಒಂದೋ ಅಶುದ್ಧವಾಗಿದೆ (ನಜಿಸ್), ಅಥವಾ ಅದು ಜಿನ್ನ್‌ಗಳ ಆಹಾರವಾಗಿರುತ್ತದೆ.

التصنيفات

Toilet Manners