إعدادات العرض
ನಿಮ್ಮಲ್ಲಿ ಯಾರೂ ಕೂಡ ಒಂದೇ ವಸ್ತ್ರದಲ್ಲಿ ತಮ್ಮ ಭುಜಗಳ ಮೇಲೆ ಏನೂ ಇಲ್ಲದೆ ನಮಾಝ್ ಮಾಡಬಾರದು
ನಿಮ್ಮಲ್ಲಿ ಯಾರೂ ಕೂಡ ಒಂದೇ ವಸ್ತ್ರದಲ್ಲಿ ತಮ್ಮ ಭುಜಗಳ ಮೇಲೆ ಏನೂ ಇಲ್ಲದೆ ನಮಾಝ್ ಮಾಡಬಾರದು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಯಾರೂ ಕೂಡ ಒಂದೇ ವಸ್ತ್ರದಲ್ಲಿ ತಮ್ಮ ಭುಜಗಳ ಮೇಲೆ ಏನೂ ಇಲ್ಲದೆ ನಮಾಝ್ ಮಾಡಬಾರದು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Hausa Kurdî Português Nederlands Tiếng Việt অসমীয়া ગુજરાતી Kiswahili پښتو සිංහල മലയാളം नेपाली Magyar ქართული తెలుగు Македонски Svenska Moore Română Українська ไทย मराठी ਪੰਜਾਬੀ دری አማርኛ Wolof ភាសាខ្មែរالشرح
ಒಂದೇ ವಸ್ತ್ರದಲ್ಲಿ ನಮಾಝ್ ಮಾಡುವವರು ತಮ್ಮ ಭುಜಗಳನ್ನು ತೆರೆದಿಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅಂದರೆ ಹೆಗಲು ಮತ್ತು ಕುತ್ತಿಗೆಯ ನಡುವಿನ ಭಾಗದ ಮೇಲೆ ಅವುಗಳನ್ನು ಮುಚ್ಚುವಂತಹ ಏನನ್ನೂ ಹಾಕದೆ ಇರುವುದನ್ನು. ಏಕೆಂದರೆ ಭುಜಗಳು ಔರತ್ (ಮುಚ್ಚಬೇಕಾದ ಖಾಸಗಿ ಭಾಗ) ಅಲ್ಲದಿದ್ದರೂ, ಅವುಗಳನ್ನು ಮುಚ್ಚುವುದು ಔರತ್ ಅನ್ನು ಮುಚ್ಚುವಲ್ಲಿ ಹೆಚ್ಚು ಪರಿಪೂರ್ಣವಾಗಿದೆ. ಇದು ನಮಾಝ್‌ನಲ್ಲಿ ಅಲ್ಲಾಹನ ಮುಂದೆ ನಿಲ್ಲುವಾಗ ಅವನನ್ನು ಮಹಿಮೆಪಡಿಸಲು ಮತ್ತು ಅವನಿಗೆ ಗೌರವವನ್ನು ಸಲ್ಲಿಸಲು ಹೆಚ್ಚು ಹತ್ತಿರವಾಗಿದೆ.فوائد الحديث
ಒಬ್ಬನು ಮುಚ್ಚಬೇಕಾದ್ದನ್ನು ಮುಚ್ಚಿ ಒಂದೇ ವಸ್ತ್ರದಲ್ಲಿ ನಮಾಝ್ ಮಾಡುವುದನ್ನು ಅನುಮತಿಸಲಾಗಿದೆ.
ಎರಡು ವಸ್ತ್ರಗಳಲ್ಲಿ ನಮಾಝ್ ಮಾಡುವುದನ್ನು ಕೂಡ ಅನುಮತಿಸಲಾಗಿದೆ. ಅಂದರೆ, ಒಂದು ದೇಹದ ಮೇಲ್ಭಾಗವನ್ನು ಮುಚ್ಚುವಂತದ್ದು, ಮತ್ತು ಇನ್ನೊಂದು ಕೆಳಭಾಗವನ್ನು ಮುಚ್ಚುವಂತದ್ದು.
ನಮಾಝ್ ಮಾಡುವವರು ಸುಂದರವಾಗಿ ಕಾಣುವುದು ಅಪೇಕ್ಷಣೀಯವಾಗಿದೆ.
ನಮಾಝ್ ಮಾಡುವಾಗ ಭುಜಗಳನ್ನು ಅಥವಾ ಅವುಗಳಲ್ಲಿ ಒಂದನ್ನು ಮುಚ್ಚುವುದು ಕಡ್ಡಾಯವಾಗಿದೆ. ಸಾಧ್ಯವಾದರೆ ಮಾತ್ರ. ಕೆಲವು ವಿದ್ವಾಂಸರು ಹೇಳುವಂತೆ ನಿಷೇಧವಿರುವುದು ಕೇವಲ ಅಸಹ್ಯತೆಯನ್ನು ನಿವಾರಿಸುವುದಕ್ಕೆ ಮಾತ್ರ (ಕಟ್ಟುನಿಟ್ಟಾದ ನಿಷೇಧವಲ್ಲ).
ಸಹಾಬಾಗಳ (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಕೈಯಲ್ಲಿ ಕಡಿಮೆ ಹಣವಿತ್ತು, ಎಷ್ಟೆಂದರೆ ಅವರಲ್ಲಿ ಕೆಲವರು ಎರಡು ವಸ್ತ್ರಗಳನ್ನು ಹೊಂದಿರಲಿಲ್ಲ.
ಈ ಹದೀಸನ್ನು ವಿವರಿಸುತ್ತಾ ನವವಿ ಹೇಳಿದರು: "ಈ ನಿಷೇಧದಲ್ಲಿರುವ ವಿವೇಕವೇನೆಂದರೆ, ಒಬ್ಬ ವ್ಯಕ್ತಿಯು ವಸ್ತ್ರವನ್ನು ಸೊಂಟಕ್ಕೆ ಸುತ್ತಿಕೊಂಡರೆ ಮತ್ತು ಭುಜಗಳ ಮೇಲೆ ಅದರ ಒಂದು ಭಾಗವು ಇಲ್ಲದಿದ್ದರೆ, ಅವನ ಔರತ್ (ಮುಚ್ಚಬೇಕಾದ ಖಾಸಗಿ ಭಾಗಗಳು) ಬಹಿರಂಗಗೊಳ್ಳುವ ಅಪಾಯವಿದೆ. ಭುಜದ ಮೇಲೆ ಅದರ ಒಂದು ಭಾಗವನ್ನು ಹಾಕಿದರೆ ಆ ಅಪಾಯವಿರುವುದಿಲ್ಲ. ಮಾತ್ರವಲ್ಲ, ಅವನು ಅದನ್ನು ತನ್ನ ಕೈಯಿಂದ ಅಥವಾ ಕೈಗಳಿಂದ ಹಿಡಿದಿಟ್ಟುಕೊಳ್ಳಬೇಕಾಗಬಹುದು ಮತ್ತು ಅದರಲ್ಲಿ ನಿರತನಾಗಿಬಿಡಬಹುದು. ಇದರಿಂದ ಅವನಿಗೆ ತನ್ನ ಬಲಗೈಯನ್ನು ಎಡಗೈಯ ಮೇಲೆ ಎದೆಯ ಕೆಳಗೆ ಇಟ್ಟುಕೊಳ್ಳುವ ಸುನ್ನತ್, ಎಲ್ಲೆಲ್ಲಿ ಕೈ ಎತ್ತಬೇಕೋ ಅಲ್ಲಿ ಕೈ ಎತ್ತುವ ಸುನ್ನತ್ ಹಾಗೂ ಇತರ ಸುನ್ನತ್‌ಗಳು ನಷ್ಟವಾಗಬಹುದು. ಅಷ್ಟೇ ಅಲ್ಲದೆ, ಇದರಿಂದ ದೇಹದ ಮೇಲ್ಭಾಗ ಮತ್ತು ಅಲಂಕಾರದ ಸ್ಥಳವನ್ನು ಮುಚ್ಚದೆ ಬಿಡುವ ಸಂಭವವಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಪ್ರತಿ ಮಸೀದಿಗಳಲ್ಲಿಯೂ ನಿಮ್ಮ ಅಲಂಕಾರವನ್ನು ಸ್ವೀಕರಿಸಿಕೊಳ್ಳಿ." [ಅಅ್‌ರಾಫ್:31]
التصنيفات
Conditions of Prayer