ಜನರು ಮಸೀದಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವವರೆಗೆ ಘಳಿಗೆಯು (ಪುನರುತ್ಥಾನ) ಸಂಭವಿಸುವುದಿಲ್ಲ

ಜನರು ಮಸೀದಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವವರೆಗೆ ಘಳಿಗೆಯು (ಪುನರುತ್ಥಾನ) ಸಂಭವಿಸುವುದಿಲ್ಲ

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರು ಮಸೀದಿಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವವರೆಗೆ ಘಳಿಗೆಯು (ಪುನರುತ್ಥಾನ) ಸಂಭವಿಸುವುದಿಲ್ಲ".

[صحيح] [رواه أبو داود والنسائي وابن ماجه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಜನರು ತಮ್ಮ ಮಸೀದಿಗಳ ಅಲಂಕಾರದ ಬಗ್ಗೆ ಜಂಭಕೊಚ್ಚಿಕೊಳ್ಳುವುದು, ಅಥವಾ ಕೇವಲ ಅಲ್ಲಾಹನ ಸ್ಮರಣೆಗಾಗಿ ನಿರ್ಮಿಸಲಾದ ಮಸೀದಿಗಳೊಳಗೆ ತಮ್ಮ ಲೌಕಿಕ ವಿಷಯಗಳ ಬಗ್ಗೆ ಹೆಮ್ಮೆಪಡುವುದು ಪುನರುತ್ಥಾನ ದಿನ ಸಮೀಪಿಸುವುದರ ಮತ್ತು ಈ ಪ್ರಪಂಚವು ಅಂತ್ಯಗೊಳ್ಳುವುದರ ಸಂಕೇತಗಳಲ್ಲಿ ಒಂದಾಗಿದೆ.

فوائد الحديث

ಮಸೀದಿಗಳ ಬಗ್ಗೆ ಜಂಭಕೊಚ್ಚುವುದು ನಿಷಿದ್ಧವಾಗಿದೆ (ಹರಾಮ್), ಮತ್ತು ಅದು ಸ್ವೀಕಾರಾರ್ಹವಲ್ಲದ ಕಾರ್ಯವಾಗಿದೆ. ಏಕೆಂದರೆ ಅದು ಅಲ್ಲಾಹನಿಗಾಗಿ ಮಾಡುವ ಕಾರ್ಯವಲ್ಲ.

ಮಸೀದಿಗಳನ್ನು ಬಣ್ಣಗಳು, ಬಣ್ಣದ ಲೇಪನಗಳು, ಕೆತ್ತನೆಗಳು, ಮತ್ತು ಬರಹಗಳಿಂದ ಅಲಂಕರಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ, ಅವುಗಳಲ್ಲಿ ನಮಾಝ್ ಮಾಡುವವರ ಗಮನವನ್ನು ಬೇರೆಡೆಗೆ ಸೆಳೆಯುವ ಅಂಶಗಳಿವೆ.

ಅಸ್ಸಿಂದಿ ಹೇಳುತ್ತಾರೆ: "ಈ ಹದೀಸ್‌ನ ಸತ್ಯತೆಗೆ ವಾಸ್ತವ ಜಗತ್ತು ಸಾಕ್ಷಿಯಾಗಿದೆ. ಆದ್ದರಿಂದ ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಪಷ್ಟವಾದ ಪವಾಡಗಳಲ್ಲಿ ಒಂದಾಗಿದೆ."

التصنيفات

The rulings of mosques