ಕಾಲು ದೀನಾರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಕದ್ದರೆ ಕೈಯನ್ನು ಕತ್ತರಿಸಲಾಗುವುದು

ಕಾಲು ದೀನಾರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಕದ್ದರೆ ಕೈಯನ್ನು ಕತ್ತರಿಸಲಾಗುವುದು

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಾಲು ದೀನಾರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಕದ್ದರೆ ಕೈಯನ್ನು ಕತ್ತರಿಸಲಾಗುವುದು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಕಳ್ಳನು ಕಾಲು ದೀನಾರ್ ಚಿನ್ನ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುವನ್ನು ಕದ್ದರೆ ಅವನ ಕೈಯನ್ನು ಕತ್ತರಿಸಲಾಗುವುದು. ಇದು 1.06 ಗ್ರಾಂ ಚಿನ್ನದ ಮೌಲ್ಯಕ್ಕೆ ಸಮಾನವಾಗಿದೆ.

فوائد الحديث

ಕಳ್ಳತನವು ಮಹಾಪಾಪಗಳಲ್ಲಿ ಒಂದಾಗಿದೆ.

ಅಲ್ಲಾಹು ಕಳ್ಳನಿಗೆ ಶಿಕ್ಷೆಯನ್ನು ನಿಗದಿಪಡಿಸಿದ್ದಾನೆ. ಅದು ಅವನ ಕೈಯನ್ನು ಕತ್ತರಿಸುವುದಾಗಿದೆ. ಅಲ್ಲಾಹು ಹೇಳುತ್ತಾನೆ: "ಕದಿಯುವವನು ಮತ್ತು ಕದಿಯುವವಳು - ಅವರಿಬ್ಬರ ಕೈಗಳನ್ನು ಕತ್ತರಿಸಿರಿ." [ಅಲ್-ಮಾಯಿದಾ: 38]. ಈ ಕತ್ತರಿಸುವಿಕೆಯ ಷರತ್ತುಗಳನ್ನು ಸುನ್ನತ್‌ನಲ್ಲಿ ವಿವರಿಸಲಾಗಿದೆ.

ಈ ಹದೀಸ್‌ನಲ್ಲಿ "ಕೈ" ಎಂದು ಹೇಳಿರುವುದರ ಉದ್ದೇಶವು ಮುಂಗೈಯಾಗಿದ್ದು, ತೋಳು ಮತ್ತು ಅಂಗೈಯನ್ನು ಜೋಡಣೆಯಾಗುವ ಸ್ಥಳದಿಂದ ಕತ್ತರಿಸುವುದಾಗಿದೆ.

ಕಳ್ಳನ ಕೈಯನ್ನು ಕತ್ತರಿಸುವುದರ ಹಿಂದಿನ ವಿವೇಕವು ಜನರ ಆಸ್ತಿಯನ್ನು ರಕ್ಷಿಸುವುದು ಮತ್ತು ಇತರ ದುಷ್ಕರ್ಮಿಗಳನ್ನು ಅಂತಹ ಕೃತ್ಯಗಳಿಂದ ತಡೆಯುವುದು.

ಒಂದು ದೀನಾರ್ ಎಂದರೆ ಒಂದು ಮಿಸ್ಕಾಲ್ ಚಿನ್ನ. ಅಂದರೆ (4.25 ಗ್ರಾಂ) 24 ಕ್ಯಾರೆಟ್ ಚಿನ್ನಕ್ಕೆ ಸಮಾನವಾಗಿದೆ. ಆದ್ದರಿಂದ ಕಾಲು ದೀನಾರ್ 1.06 ಗ್ರಾಂ ಗೆ ಸಮಾನವಾಗಿದೆ.

التصنيفات

Prescribed Punishment for Theft