ನಿಮಗಿಂತ ಹಿಂದಿನ (ಸಮುದಾಯದಲ್ಲಿ) ಒಬ್ಬ ವ್ಯಕ್ತಿಯಿದ್ದನು. ಅವನಿಗೆ ಗಾಯವಾಗಿತ್ತು. ಅವನು ತಾಳ್ಮೆ ಕಳೆದುಕೊಂಡು ಚಾಕುವಿನಿಂದ ತನ್ನ…

ನಿಮಗಿಂತ ಹಿಂದಿನ (ಸಮುದಾಯದಲ್ಲಿ) ಒಬ್ಬ ವ್ಯಕ್ತಿಯಿದ್ದನು. ಅವನಿಗೆ ಗಾಯವಾಗಿತ್ತು. ಅವನು ತಾಳ್ಮೆ ಕಳೆದುಕೊಂಡು ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡನು. ರಕ್ತ ಹರಿಯುವುದು ನಿಲ್ಲದೆ ನಂತರ ಅವನು ಸತ್ತನು. ಅಲ್ಲಾಹು ಹೇಳಿದನು: 'ನನ್ನ ದಾಸನು ತನ್ನ ಪ್ರಾಣದೊಂದಿಗೆ ಆತುರಪಟ್ಟಿದ್ದಾನೆ. ನಾನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದೇನೆ.'

ಹಸನ್ ರಿಂದ ವರದಿ. ಅವರು ಹೇಳಿದರು: ಜುಂದುಬ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಈ ಮಸೀದಿಯಲ್ಲಿ ನಮಗೆ ಒಂದು ಹದೀಸ್ ತಿಳಿಸಿದರು - ಅವರು ನಮಗೆ ತಿಳಿಸಿದಾಗಿನಿಂದ ನಾವು ಆ ಹದೀಸನ್ನು ಮರೆತಿಲ್ಲ ಮತ್ತು ಜುಂದುಬ್ ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸುಳ್ಳು ಹೇಳಿರಬಹುದೆಂದು ನಾವು ಭಯಪಡುವುದಿಲ್ಲ - ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗಿಂತ ಹಿಂದಿನ (ಸಮುದಾಯದಲ್ಲಿ) ಒಬ್ಬ ವ್ಯಕ್ತಿಯಿದ್ದನು. ಅವನಿಗೆ ಗಾಯವಾಗಿತ್ತು. ಅವನು ತಾಳ್ಮೆ ಕಳೆದುಕೊಂಡು ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡನು. ರಕ್ತ ಹರಿಯುವುದು ನಿಲ್ಲದೆ ನಂತರ ಅವನು ಸತ್ತನು. ಅಲ್ಲಾಹು ಹೇಳಿದನು: 'ನನ್ನ ದಾಸನು ತನ್ನ ಪ್ರಾಣದೊಂದಿಗೆ ಆತುರಪಟ್ಟಿದ್ದಾನೆ. ನಾನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದೇನೆ.'"

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಮ್ಮ ಹಿಂದಿನ ಸಮುದಾಯದಲ್ಲಿ ಒಬ್ಬ ವ್ಯಕ್ತಿಯಿದ್ದನು. ಅವನಿಗೆ ಗಾಯವಾಗಿತ್ತು. ಅವನು ತಾಳ್ಮೆ ಕಳೆದುಕೊಂಡು ನೋವನ್ನು ಸಹಿಸಲಾಗದೆ ಬೇಗನೆ ಸಾಯಲು ಚಾಕುವಿನಿಂದ ತನ್ನ ಕೈಯನ್ನು ಕತ್ತರಿಸಿಕೊಂಡನು. ರಕ್ತ ಹರಿಯುವುದು ನಿಲ್ಲದೆ ಅವನು ಸತ್ತುಹೋದನು. ಅಲ್ಲಾಹು ಹೇಳಿದನು: "ನನ್ನ ದಾಸನು ತನ್ನ ಪ್ರಾಣದೊಂದಿಗೆ ಆತುರಪಟ್ಟಿದ್ದಾನೆ. ನಾನು ಅವನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದ್ದೇನೆ."

فوائد الحديث

ತೊಂದರೆಗಳು ಬರುವಾಗ ತಾಳ್ಮೆ ವಹಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಹಾಗೆಯೇ ನೋವುಗಳಿಂದ ಬೇಸರಪಡಬಾರದೆಂದು ತಿಳಿಸಲಾಗಿದೆ. ಏಕೆಂದರೆ ಅದು ಅದಕ್ಕಿಂತಲೂ ಗಂಭೀರ ಸ್ಥಿತಿಗೆ ತಲುಪಿಸುವ ಸಾಧ್ಯತೆಯಿದೆ.

ಹಿಂದಿನ ಸಮುದಾಯಗಳ ಘಟನೆಗಳನ್ನು ತಿಳಿಸಿ ಎಚ್ಚರವಹಿಸಬೇಕೆಂದು ಹೇಳಲಾಗಿದೆ. ಏಕೆಂದರೆ ಆ ಘಟನೆಗಳಲ್ಲಿ ಒಳಿತು ಮತ್ತು ಉಪದೇಶಗಳಿವೆ.

ಇಬ್ನ್ ಹಜರ್ ಹೇಳುತ್ತಾರೆ: ಅಲ್ಲಾಹನ ಹಕ್ಕುಗಳು ಮತ್ತು ಅವನು ತನ್ನ ಸೃಷ್ಟಿಗಳಿಗೆ ತೋರುವ ಕರುಣೆಯನ್ನು ತಿಳಿಸಲಾಗಿದೆ. ಏಕೆಂದರೆ ಆತ್ಮಹತ್ಯೆ ಮಾಡುವುದನ್ನು ಅವನು ಅವರಿಗೆ ನಿಷಿದ್ಧಗೊಳಿಸಿದ್ದಾನೆ. ಏಕೆಂದರೆ ಆತ್ಮಗಳು ಅಲ್ಲಾಹನ ಒಡೆತನದಲ್ಲಿ ಸೇರಿವೆ.

ಆತ್ಮಹತ್ಯೆಗೆ ಕಾರಣವಾಗುವ ಮಾರ್ಗಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಮತ್ತು ಅದರ ಬಗ್ಗೆ ಉಗ್ರ ಎಚ್ಚರಿಕೆ ನೀಡಲಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: ಅವನು ತನ್ನ ಕೈಯನ್ನು ಕತ್ತರಿಸಿದ್ದು ಸಾಯುವ ಉದ್ದೇಶದಿಂದಾಗಿತ್ತು. ಅದನ್ನು ಗುಣಪಡಿಸುವ ಉದ್ದೇಶದಿಂದಲ್ಲ. ಗುಣಪಡಿಸುವ ಉದ್ದೇಶದಿಂದಾಗಿದ್ದರೆ ಅದರಿಂದ ಪ್ರಯೋಜನವಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು.

التصنيفات

Condemning Sins