ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳು ಬಂದಾಗ, ಅವರು ಆ ದಿನಗಳನ್ನು ಆರಾಧನೆ ಮತ್ತು ಅನುಸರಣೆಯಲ್ಲಿ ಕಳೆಯಲು ಪರಿಶ್ರಮಿಸುತ್ತಿದ್ದರು. ಅವರು ಇತರ ದಿನಗಳಲ್ಲಿ ಶ್ರಮವಹಿಸುವುದಕ್ಕಿಂತ ಹೆಚ್ಚಾಗಿ ಈ ದಿನಗಳಲ್ಲಿ ವಿವಿಧ ರೀತಿಯ ಸತ್ಕರ್ಮಗಳು, ದಾನಧರ್ಮಗಳು ಮತ್ತು ಆರಾಧನೆಗಳನ್ನು ನಿರ್ವಹಿಸಲು ಶ್ರಮವಹಿಸುತ್ತಿದ್ದರು. ಇದಕ್ಕೆ ಕಾರಣ ಆ ರಾತ್ರಿಗಳ ಶ್ರೇಷ್ಠತೆ ಮತ್ತು ಅನುಗ್ರಹಗಳಾಗಿದ್ದವು ಮತ್ತು ಲೈಲತುಲ್ ಕದ್ರ್‌ನ ರಾತ್ರಿಯನ್ನು ಪಡೆಯುವ ಬಯಕೆಯಾಗಿತ್ತು.

فوائد الحديث

ರಮಝಾನ್ ತಿಂಗಳಲ್ಲಿ ಸಾಮಾನ್ಯ ರೀತಿಯಲ್ಲಿ ಮತ್ತು ಅದರ ಕೊನೆಯ ಹತ್ತು ದಿನಗಳಲ್ಲಿ ವಿಶೇಷ ರೀತಿಯಲ್ಲಿ ಸತ್ಕರ್ಮಗಳು ಮತ್ತು ವಿಧೇಯತೆಯ ಕರ್ಮಗಳನ್ನು ಹೆಚ್ಚಿಸಲು ಪ್ರೋತ್ಸಾಹಿಸಲಾಗಿದೆ.

ರಮಝಾನಿನ ಕೊನೆಯ ಹತ್ತು ದಿನಗಳು ಇಪ್ಪತ್ತೊಂದನೇ ರಾತ್ರಿಯಿಂದ ಪ್ರಾರಂಭವಾಗಿ ತಿಂಗಳ ಅಂತ್ಯದವರೆಗೆ ಇರುತ್ತದೆ.

ಶ್ರೇಷ್ಠ ಸಮಯಗಳನ್ನು ಸತ್ಕರ್ಮಗಳ ಮೂಲಕ ಸದುಪಯೋಗಪಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ.

التصنيفات

Last Ten Days of Ramadaan