ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು…

ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)

ಖುತ್ಬಾ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಮುನ್ಕರಾತಿಲ್ ಅಖ್ಲಾಖಿ ವಲ್-ಅಅ್‌ಮಾಲಿ ವಲ್-ಅಹ್ವಾಅ್" (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿಂದನೀಯ ಸ್ವಭಾವದಿಂದ, (ಕೆಟ್ಟ) ಕಾರ್ಯಗಳಿಂದ ಮತ್ತು (ಕೆಟ್ಟ) ಇಚ್ಛೆಗಳಿಂದ ನಿನ್ನಲ್ಲಿ ಅಭಯ ಕೋರುತ್ತೇನೆ.)

[صحيح] [رواه الترمذي]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥನೆಗಳಲ್ಲಿ ಇದೂ ಒಂದಾಗಿತ್ತು: "ಅಲ್ಲಾಹುಮ್ಮ ಇನ್ನೀ ಅಊದು" ಓ ಅಲ್ಲಾಹನೇ, ನಾನು ಅಭಯ ಕೋರುತ್ತೇನೆ, ಮೊರೆ ಹೋಗುತ್ತೇನೆ ಮತ್ತು ರಕ್ಷಣೆ ಬೇಡುತ್ತೇನೆ "ಬಿಕ" ನಿನ್ನಲ್ಲಿ, ನಿನ್ನನ್ನು ಹೊರತುಪಡಿಸಿ ಬೇರೆ ಯಾರಲ್ಲೂ ಅಲ್ಲ, "ಮಿನ್ ಮುನ್ಕರಾತಿ" ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ ವಿಷಯಗಳಿಂದ, "ಅಲ್-ಅಖ್ಲಾಖ್" ದ್ವೇಷ/ಹಗೆತನ, ಅಸೂಯೆ, ಅಹಂಕಾರ ಮುಂತಾದ ಸ್ವಭಾವಗಳಿಂದ, "ವ" ಮತ್ತು ನಿಂದನೀಯ "ಅಲ್-ಅಅ್‌ಮಾಲ್" ಅಂದರೆ, ಬೈಯ್ಯುವುದು, ನಿಂದಿಸುವುದು ಮುಂತಾದ ಕಾರ್ಯಗಳಿಂದ, "ವ" ಮತ್ತು ಎಲ್ಲಾ "ಅಲ್-ಅಹ್ವಾಅ್" ಇಚ್ಛೆಗಳಿಂದ, ಅಂದರೆ, ಮನಸ್ಸು ಬಯಸುವ ಮತ್ತು ಶರೀಅತ್‌ಗೆ ವಿರುದ್ಧವಾಗಿರುವ ಇಚ್ಛೆಗಳಿಂದ (ಅಭಯ ಕೋರುತ್ತೇನೆ).

فوائد الحديث

ಈ ಪ್ರಾರ್ಥನೆಯ ಶ್ರೇಷ್ಠತೆಯನ್ನು ಮತ್ತು ಅದನ್ನು (ಹೇಳುವುದು) ಅಪೇಕ್ಷಣೀಯವಾಗಿದೆ ಎಂದು ತಿಳಿಸಲಾಗಿದೆ.

ಸತ್ಯವಿಶ್ವಾಸಿಯು ನಿಂದನೀಯ ಸ್ವಭಾವ ಮತ್ತು ಕೆಟ್ಟ ಕಾರ್ಯಗಳಿಂದ ದೂರವಿರಲು ಆಸಕ್ತಿ ವಹಿಸಬೇಕು, ಮತ್ತು ಮನದ ಇಚ್ಛೆಯನ್ನು ಅನುಸರಿಸುವುದು ಹಾಗೂ ಶಾರೀರಿಕ ಆಸೆಗಳಿಗೆ (ಶಹವಾತ್) ಬಲಿಯಾಗುವುದರ ಬಗ್ಗೆ ಎಚ್ಚರದಿಂದಿರಬೇಕು.

ಸ್ವಭಾವ, ಕರ್ಮ ಮತ್ತು ಇಚ್ಛೆಗಳನ್ನು 'ಮುನ್ಕರ್' (ಕೆಟ್ಟದ್ದು) ಮತ್ತು 'ಮಅ್‌ರೂಫ್' (ಒಳ್ಳೆಯದು) ಎಂದು ವಿಂಗಡಿಸಲಾಗಿದೆ.

التصنيفات

Reported Supplications