إعدادات العرض
ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ…
ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ): ಬೆಳಗಾಗುವಾಗ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ." ಸಂಜೆಯಾಗುವಾಗ ಅವರು ಹೀಗೆ ಹೇಳುತ್ತಿದ್ದರು: "ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ." ಇನ್ನೊಂದು ಬಾರಿ ಅವರು ಹೀಗೆ ಹೇಳಿದರು: "ಮರಳುವಿಕೆಯು ನಿನ್ನ ಬಳಿಗೇ ಆಗಿದೆ."
الترجمة
العربية বাংলা Bosanski English Español فارسی Français Bahasa Indonesia Русский Türkçe اردو 中文 हिन्दी Tagalog Hausa Kurdî Português සිංහල Nederlands অসমীয়া Tiếng Việt Kiswahili ગુજરાતી پښتو ไทย Oromoo Română മലയാളം Deutsch नेपाली ქართული Кыргызча Moore Magyar తెలుగు Svenskaالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ, ಅಂದರೆ ಮುಂಜಾನೆಯ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು." ಅಂದರೆ, ನಿನ್ನ ಸಂರಕ್ಷಣೆಯನ್ನು ಅನುಭವಿಸುತ್ತಾ, ನಿನ್ನ ಅನುಗ್ರಹಗಳಲ್ಲಿ ಮುಳುಗಿರುತ್ತಾ, ನಿನ್ನ ಸ್ಮರಣೆಯಲ್ಲಿ ಮಗ್ನರಾಗಿರುತ್ತಾ, ನಿನ್ನ ಹೆಸರಿನೊಂದಿಗೆ ಸಹಾಯ ಯಾಚಿಸುತ್ತಾ, ನಿನ್ನ ಮಾರ್ಗದರ್ಶನದಲ್ಲಿ ಒಳಗೊಂಡಿರುತ್ತಾ, ನಿನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಮುಂದುವರಿಯುತ್ತಾ ನಾವು ಬೆಳಗನ್ನು ಪ್ರವೇಶಿಸಿದೆವು. "ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ." ಮೇಲೆ ಹೇಳಿದಂತೆ ಬೆಳಗನ್ನು ಹೇಗೆ ಪ್ರವೇಶಿಸಿದೆಯೋ ಅದೇ ಸ್ಥಿತಿಯಲ್ಲಿ ನಾವು ಸಂಜೆಯನ್ನೂ ಪ್ರವೇಶಿಸಿದೆವು. ಅಂದರೆ, ಓ ಅಲ್ಲಾಹ್! ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು, ಜೀವ ನೀಡುವವನಾದ ನಿನ್ನ ಹೆಸರಿನಲ್ಲಿ ನಾವು ಜೀವಿಸುತ್ತೇವೆ ಮತ್ತು ಸಾವು ನೀಡುವವನಾದ ನಿನ್ನ ಹೆಸರಿನಲ್ಲಿ ನಾವು ಸಾಯುತ್ತೇವೆ. "ಪುನರುತ್ಥಾನವು ನಿನ್ನ ಕಡೆಗೇ ಆಗಿದೆ." ಪುನರುತ್ಥಾನ ಎಂದರೆ ಮರಣಾನಂತರ ಜೀವಂತವಾಗುವುದು. ಒಟ್ಟುಗೂಡಿದ ನಂತರ ಬೇರ್ಪಡುವುದು. ನಮ್ಮ ಜೀವನವು ಎಲ್ಲಾ ಸಮಯದಲ್ಲೂ, ಎಲ್ಲಾ ಸ್ಥಿತಿಗಳಲ್ಲೂ ಹೀಗೆಯೇ ಮುಂದುವರಿಯುತ್ತದೆ. ನಾವು ಇದರಿಂದ ಬೇರ್ಪಡುವುದಿಲ್ಲ ಮತ್ತು ಇದನ್ನು ಬಿಟ್ಟು ದೂರವಾಗುವುದೂ ಇಲ್ಲ. ಅಸರ್ ಬಳಿಕ ಸಂಜೆಯಾಗುವಾಗ ಅವರು ಹೀಗೆ ಹೇಳುತ್ತಿದ್ದರು: "ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಮರಳುವಿಕೆಯು ನಿನ್ನ ಕಡೆಗೇ ಆಗಿದೆ." ಅಂದರೆ ಇಹಲೋಕದ ಮರಳುವಿಕೆ ಮತ್ತು ಪರಲೋಕದ ಮರಳುವಿಕೆ. ಏಕೆಂದರೆ, ನೀನೇ ನನಗೆ ಜೀವ ನೀಡುವವನು ಮತ್ತು ನೀನೇ ನನಗೆ ಸಾವು ನೀಡುವವನು.فوائد الحديث
ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಿ ಈ ಪ್ರಾರ್ಥನೆಯನ್ನು ಬೆಳಗ್ಗೆ ಮತ್ತು ಸಂಜೆ ಹೇಳುವುದು ಅಪೇಕ್ಷಣೀಯವಾಗಿದೆ.
ಎಲ್ಲಾ ಸ್ಥಿತಿಗಳಲ್ಲೂ ಸಮಯಗಳಲ್ಲೂ ಮನುಷ್ಯನು ಅಲ್ಲಾಹನ ಮೇಲೆ ಆಶ್ರಿತನಾಗಿದ್ದಾನೆಂದು ತಿಳಿಸಲಾಗಿದೆ.
ದಿಕ್ರ್ ಹೇಳಬೇಕಾದ ಶ್ರೇಷ್ಠ ಸಮಯ: ಬೆಳಗ್ಗೆ ಮುಂಜಾನೆಯ ಉದಯದಿಂದ ತೊಡಗಿ ಸೂರ್ಯೋದಯದ ತನಕ ಮತ್ತು ಅಸರ್ ನಮಾಝಿನ ನಂತರ ಸೂರ್ಯಾಸ್ತದ ತನಕ. ಅದರ ನಂತರ ಹೇಳಿದರೆ, ಅಂದರೆ ಪೂರ್ವಾಹ್ನದ ಸಮಯದಲ್ಲಿ ಹೇಳಿದರೂ ಸಾಕಾಗುತ್ತದೆ. ಅದೇ ರೀತಿ, ಮಧ್ಯಾಹ್ನದ ನಂತರ ಹೇಳಿದರೂ ಸಾಕಾಗುತ್ತದೆ. ಮಗ್ರಿಬ್ ನಮಾಝಿನ ನಂತರ ಹೇಳಿದರೂ ಸಾಕಾಗುತ್ತದೆ. ಇದು ದಿಕ್ರ್ ಹೇಳುವ ಸಮಯವಾಗಿದೆ.
ಬೆಳಗ್ಗಿನ ಸಮಯವು ಮರಣಾನಂತರ ಜನರು ಪುನರುತ್ಥಾನ ದಿನದಂದು ಜೀವಂತವಾಗುವ ಸ್ಥಿತಿಯನ್ನು ನೆನಪಿಸುವುದರಿಂದ "ಪುನರುತ್ಥಾನವು ನಿನ್ನ ಕಡೆಗೇ ಆಗಿದೆ" ಎಂಬ ಮಾತು ಅದಕ್ಕೆ ಹೊಂದಿಕೆಯಾಗುತ್ತದೆ. ಏಕೆಂದರೆ, ಇದು ಹೊಸ ಪುನರುತ್ಥಾನವಾಗಿದೆ. ಇದೊಂದು ಹೊಸ ದಿನವಾಗಿದ್ದು ಆತ್ಮಗಳನ್ನು ದೇಹಕ್ಕೆ ಮರಳಿಸಲಾಗುತ್ತದೆ. ಜನರು ತಮ್ಮ ಜೀವನೋಪಾಯಕ್ಕಾಗಿ ಹಂಚಿ ಹೋಗುತ್ತಾರೆ. ಮನುಷ್ಯರ ಮೇಲೆ ಸಾಕ್ಷಿಯಾಗಲು ಮತ್ತು ಅದರ ಸಮಯವು ನಮ್ಮ ಕರ್ಮಗಳ ಸಂಗ್ರಹಣೆಯಾಗಲು ಅಲ್ಲಾಹು ಸೃಷ್ಟಿಸಿದ ಈ ಹೊಸ ಬೆಳಗು ಉಸಿರಾಡುತ್ತದೆ.
ಅದೇ ರೀತಿ, ಸಂಜೆಯ ಬಗ್ಗೆ "ಮತ್ತು ಮರಳುವಿಕೆಯು ನಿನ್ನ ಬಳಿಗೇ ಆಗಿದೆ" ಎಂದು ಹೇಳಲಾಗಿದೆ. ಸಂಜೆ ಎಂದರೆ ಜನರು ತಮ್ಮ ಉದ್ಯೋಗಗಳಿಂದ ಮತ್ತು ತಮ್ಮ ಜೀವನೋಪಾಯಕ್ಕಾಗಿ ಹಂಚಿ ಹೋಗಿರುವುದರಿಂದ ಮರಳಿ ಬರುವ ಸಮಯವಾಗಿದೆ. ಹರಿದು ಹಂಚಾಗಿ ಹೋದ ನಂತರ ಅವರು ವಿಶ್ರಾಂತಿಗಾಗಿ ತಮ್ಮ ಮನೆಗಳಿಗೆ ಮರಳುತ್ತಾರೆ. ಇದು ಅಲ್ಲಾಹನ ಬಳಿಗೆ ಮರಳಿ ಹೋಗುವುದನ್ನು ನೆನಪಿಸುತ್ತದೆ.
التصنيفات
Morning and Evening Dhikr