ಖಂಡಿತವಾಗಿಯೂ ಕುರ್‌ಆನ್‌ ಕಂಠಪಾಠ ಮಾಡಿದವನ ಉದಾಹರಣೆಯು, ಕಟ್ಟಿಹಾಕಲಾದ ಒಂಟೆಗಳ ಮಾಲೀಕನಂತಿದೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ…

ಖಂಡಿತವಾಗಿಯೂ ಕುರ್‌ಆನ್‌ ಕಂಠಪಾಠ ಮಾಡಿದವನ ಉದಾಹರಣೆಯು, ಕಟ್ಟಿಹಾಕಲಾದ ಒಂಟೆಗಳ ಮಾಲೀಕನಂತಿದೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ, ಅವನು ಅವುಗಳನ್ನು (ಕಟ್ಟು ಬಿಚ್ಚಿ) ಬಿಟ್ಟರೆ, ಅವು (ತಪ್ಪಿಸಿಕೊಂಡು) ಹೊರಟುಹೋಗುತ್ತವೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಕುರ್‌ಆನ್‌ ಕಂಠಪಾಠ ಮಾಡಿದವನ ಉದಾಹರಣೆಯು, ಕಟ್ಟಿಹಾಕಲಾದ ಒಂಟೆಗಳ ಮಾಲೀಕನಂತಿದೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ, ಅವನು ಅವುಗಳನ್ನು (ಕಟ್ಟು ಬಿಚ್ಚಿ) ಬಿಟ್ಟರೆ, ಅವು (ತಪ್ಪಿಸಿಕೊಂಡು) ಹೊರಟುಹೋಗುತ್ತವೆ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಅನ್ನು ಅಧ್ಯಯನ ಮಾಡಿದ ಮತ್ತು ಅದನ್ನು ಪಠಿಸಲು ಅಭ್ಯಾಸ ಮಾಡಿಕೊಂಡವನನ್ನು — ಅದು ಮುಸ್‌ಹಫ್ (ಗ್ರಂಥ) ದಿಂದ ನೇರವಾಗಿ ನೋಡಿಯಾಗಿರಲಿ ಅಥವಾ ಕಂಠಪಾಠದಿಂದಾಗಿರಲಿ - ಒಂಟೆಯ ಮಂಡಿಗೆ ಕಟ್ಟಲಾಗುವ ಹಗ್ಗದಿಂದ ಕಟ್ಟಿಹಾಕಲಾದ ಒಂಟೆಗಳ ಮಾಲೀಕನಿಗೆ ಹೋಲಿಸಿದ್ದಾರೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳ ಮೇಲೆ ಅವನ ಹತೋಟಿ ನಿರಂತರವಾಗಿರುತ್ತದೆ. ಆದರೆ, ಅವನು ಅವುಗಳ ಕಟ್ಟನ್ನು ಬಿಚ್ಚಿದರೆ, ಅವು ಹೊರಟುಹೋಗುತ್ತವೆ ಮತ್ತು ತಪ್ಪಿಸಿಕೊಳ್ಳುತ್ತವೆ. ಹಾಗೆಯೇ, ಕುರ್‌ಆನನ್ನು ಪಠಿಸುತ್ತಿದ್ದರೆ, ಅದು ಅವನಿಗೆ ನೆನಪಿರುತ್ತದೆ. ಆದರೆ, ಅವನು ಅದನ್ನು ಪಠಿಸುವುದನ್ನು ಬಿಟ್ಟುಬಿಟ್ಟರೆ, ಅವನು ಅದನ್ನು ಮರೆತುಬಿಡುತ್ತಾನೆ. ಆದ್ದರಿಂದ, ಎಲ್ಲಿಯವರೆಗೆ ಗಮನವು ಇರುತ್ತದೋ, ಅಲ್ಲಿಯವರೆಗೆ ಕಂಠಪಾಠವು ಇರುತ್ತದೆ.

فوائد الحديث

ಕುರ್‌ಆನ್‌ನ ಬಗ್ಗೆ ನಿರಂತರ ಗಮನ ಹರಿಸಲು ಮತ್ತು ಅದನ್ನು ಪಠಿಸಲು ಪ್ರೋತ್ಸಾಹಿಸಲಾಗಿದೆ. ಅದನ್ನು ಮರೆಯಲು ಕಾರಣವಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.

ಕುರ್‌ಆನ್ ಅನ್ನು ನಿರಂತರವಾಗಿ ಪಠಿಸುವುದರಿಂದ ನಾಲಿಗೆಯು ಅದಕ್ಕೆ ಒಪ್ಪಿಕೊಳ್ಳುತ್ತದೆ ಮತ್ತು ಅದನ್ನು ಪಠಿಸುವುದು ಸುಲಭವಾಗುತ್ತದೆ. ಒಂದು ವೇಳೆ ಅದನ್ನು ಪಠಿಸುವುದ್ನು ತ್ಯಜಿಸಿದರೆ, ಪಠಣವು ಭಾರವಾಗುತ್ತದೆ ಮತ್ತು ಕಷ್ಟಕರವಾಗುತ್ತದೆ.

ಖಾದಿ (ಇಯಾದ್) ಹೇಳುತ್ತಾರೆ: "ಕುರ್‌ಆನ್‌ನ ಸಂಗಾತಿ” ಎಂದರೆ, ಅದಕ್ಕೆ ಆಪ್ತನಾಗಿರುವವನು. “ಸಂಗಾತಿತ್ವ” ಎಂದರೆ ಸ್ನೇಹ ಬೆಳೆಸುವುದು. ಈ ಅರ್ಥದಿಂದಲೇ "ಇಂಥವನು ಇಂಥವನ ಸಂಗಾತಿ", "ಸ್ವರ್ಗದ ಸಂಗಾತಿಗಳು" ಮತ್ತು "ನರಕದ ಸಂಗಾತಿಗಳು" ಎಂಬ ಪದಗಳು ಬಂದಿವೆ.

ಉದಾಹರಣೆಗಳನ್ನು ನೀಡುವುದು ಧರ್ಮಪ್ರಚಾರದ ಶೈಲಿಗಳಲ್ಲಿ ಒಂದಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: ಇಲ್ಲಿ ಒಂಟೆಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದು ಏಕೆಂದರೆ, ಸಾಕುಪ್ರಾಣಿಗಳ ಪೈಕಿ ಅವು ಅತ್ಯಂತ ಹೆಚ್ಚು ತಪ್ಪಿಸಿಕೊಳ್ಳುವ ಸ್ವಭಾವವನ್ನು ಹೊಂದಿವೆ. ಅವೇನಾದರೂ ಒಮ್ಮೆ ತಪ್ಪಿಸಿಕೊಂಡರೆ ಅವುಗಳನ್ನು ಮರಳಿ ಪಡೆಯುವುದು ಕಷ್ಟಕರ.

التصنيفات

Manners of Reading and Memorizing the Qur'an, Manners of Reciting the Noble Qur'an