إعدادات العرض
ಓ ಆಯಿಷಾ, ಖಂಡಿತವಾಗಿಯೂ ಅಲ್ಲಾಹು 'ರಫೀಖ್' (ಮೃದು ಸ್ವಭಾವದವನು) ಮತ್ತು ಅವನು 'ರಿಫ್ಖ್' (ಮೃದುತ್ವ) ಅನ್ನು ಇಷ್ಟಪಡುತ್ತಾನೆ. ಅವನು…
ಓ ಆಯಿಷಾ, ಖಂಡಿತವಾಗಿಯೂ ಅಲ್ಲಾಹು 'ರಫೀಖ್' (ಮೃದು ಸ್ವಭಾವದವನು) ಮತ್ತು ಅವನು 'ರಿಫ್ಖ್' (ಮೃದುತ್ವ) ಅನ್ನು ಇಷ್ಟಪಡುತ್ತಾನೆ. ಅವನು ಮೃದುತ್ವಕ್ಕೆ ನೀಡುವುದನ್ನು ಕಠೋರತೆಗೆ ನೀಡುವುದಿಲ್ಲ, ಮತ್ತು ಅದರ ಹೊರತಾದ ಬೇರೆ ಯಾವುದೇ ವಿಷಯಕ್ಕೂ ನೀಡುವುದಿಲ್ಲ
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಆಯಿಷಾ, ಖಂಡಿತವಾಗಿಯೂ ಅಲ್ಲಾಹು 'ರಫೀಖ್' (ಮೃದು ಸ್ವಭಾವದವನು) ಮತ್ತು ಅವನು 'ರಿಫ್ಖ್' (ಮೃದುತ್ವ) ಅನ್ನು ಇಷ್ಟಪಡುತ್ತಾನೆ. ಅವನು ಮೃದುತ್ವಕ್ಕೆ ನೀಡುವುದನ್ನು ಕಠೋರತೆಗೆ ನೀಡುವುದಿಲ್ಲ, ಮತ್ತು ಅದರ ಹೊರತಾದ ಬೇರೆ ಯಾವುದೇ ವಿಷಯಕ್ಕೂ ನೀಡುವುದಿಲ್ಲ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt සිංහල Hausa Kurdî தமிழ் Magyar ქართული Kiswahili Română অসমীয়া ไทย Português मराठी دری አማርኛ ភាសាខ្មែរ Nederlands Македонски ગુજરાતી ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಮೃದುತ್ವವನ್ನು ಪಾಲಿಸಲು ಪ್ರೇರೇಪಿಸಿದರು ಮತ್ತು ಅಲ್ಲಾಹು 'ರಫೀಖ್' ಆಗಿದ್ದಾನೆಂದು ತಿಳಿಸಿದರು. ಅಂದರೆ, ತನ್ನ ದಾಸರೊಂದಿಗೆ ದಯೆ ತೋರುವವನು, ಅವರಿಗೆ ಸುಲಭವನ್ನು ಬಯಸುವವನು ಮತ್ತು ಅವರಿಗೆ ಕಷ್ಟವನ್ನು ಬಯಸದವನು. ಆದ್ದರಿಂದ ಅವನು ಅವರಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚು ಹೊರೆ ಹೊರಿಸುವುದಿಲ್ಲ. ತನ್ನ ದಾಸನು ಮೃದು ಸ್ವಭಾವದವನಾಗಿರುವುದನ್ನು ಮತ್ತು ಸುಲಭವಾದ ಮಾರ್ಗವನ್ನು ಹಿಡಿಯುವುದನ್ನು ಅವನು ಇಷ್ಟಪಡುತ್ತಾನೆ. ಕಠೋರನಾಗಿರುವುದನ್ನು ಅಥವಾ ಒರಟನಾಗಿರುವುದನ್ನು (ಇಷ್ಟಪಡುವುದಿಲ್ಲ). ಅಲ್ಲಾಹು ಮೃದುತ್ವ ಮತ್ತು ಸೌಮ್ಯತೆಗೆ ಈ ಪ್ರಪಂಚದಲ್ಲಿ ಉತ್ತಮ ಹೊಗಳಿಕೆ, ಗುರಿಗಳ ಸಾಧನೆ ಮತ್ತು ಉದ್ದೇಶಗಳ ಸುಲಭೀಕರಣವನ್ನು ನೀಡುತ್ತಾನೆ, ಮತ್ತು ಪರಲೋಕದಲ್ಲಿ ಮಹಾನ್ ಪ್ರತಿಫಲವನ್ನು ನೀಡುತ್ತಾನೆ. ಇದು ಅವನು ಕಠೋರತೆ, ತೀವ್ರತೆ ಮತ್ತು ಒರಟುತನಕ್ಕೆ ನೀಡುವುದಕ್ಕಿಂತ ಹೆಚ್ಚಾಗಿದೆ. ಮೃದುತ್ವವು ಇತರ ಯಾವುದೇ ಗುಣದಿಂದ ದೊರೆಯದು (ಒಳಿತನ್ನು) ತರುತ್ತದೆ.فوائد الحديث
ಮೃದುತ್ವವನ್ನು ಪ್ರೋತ್ಸಾಹಿಸಲಾಗಿದೆ ಮತ್ತು ಕಠೋರತೆಯನ್ನು ನಿಷೇಧಿಸಲಾಗಿದೆ.
ಉತ್ತಮ ನೈತಿಕ ಗುಣಗಳಲ್ಲಿ ಮೃದುತ್ವದ ಉನ್ನತ ಸ್ಥಾನವನ್ನು ತಿಳಿಸಲಾಗಿದೆ.
ಮೃದು ಸ್ವಭಾವದವನು ಅಲ್ಲಾಹನಿಂದ ಉತ್ತಮ ಹೊಗಳಿಕೆಗೆ ಮತ್ತು ಮಹಾನ್ ಪ್ರತಿಫಲಕ್ಕೆ ಪಾತ್ರನಾಗುತ್ತಾನೆಂದು ತಿಳಿಸಲಾಗಿದೆ.
ಅಸ್ಸಿಂದಿ ಹೇಳುತ್ತಾರೆ: "ಕಠೋರತೆಯು ಮೃದುತ್ವದ ವಿರುದ್ಧ ಪದವಾಗಿದೆ. ಅಂದರೆ, ಒಂದು ಸನ್ನಿವೇಶವು ಎರಡೂ ವಿಧಾನಗಳನ್ನು (ಮೃದು ಮತ್ತು ಕಠೋರ) ಸ್ವೀಕರಿಸುವುದಾದರೆ, ಮೃದುತ್ವ ಮತ್ತು ದಯೆಯಿಂದ ಜನರನ್ನು ಮಾರ್ಗದರ್ಶನದ ಕಡೆಗೆ ಆಹ್ವಾನಿಸುವವನು, ಕಠೋರತೆ ಮತ್ತು ತೀವ್ರತೆಯಿಂದ ಆಹ್ವಾನಿಸುವವನಿಗಿಂತ ಉತ್ತಮನು. ಇಲ್ಲದಿದ್ದರೆ (ಅಂದರೆ, ಒಂದು ಸನ್ನಿವೇಶಕ್ಕೆ ನಿರ್ದಿಷ್ಟ ವಿಧಾನ ಮಾತ್ರ ಸೂಕ್ತವಾಗಿದ್ದರೆ), ಆ ಸನ್ನಿವೇಶವು ಸ್ವೀಕರಿಸುವ ವಿಧಾನವನ್ನೇ ಅನುಸರಿಸಬೇಕು. ನಿಜವಾದ ಸ್ಥಿತಿಯನ್ನು ಅಲ್ಲಾಹು ಚೆನ್ನಾಗಿ ಬಲ್ಲನು."
التصنيفات
Praiseworthy Morals