إعدادات العرض
ಖಂಡಿತವಾಗಿಯೂ ಅನೇಕ ಮಹಿಳೆಯರು, ತಮ್ಮ ಪತಿಯರ ಬಗ್ಗೆ ದೂರು ಹೇಳುತ್ತಾ ಮುಹಮ್ಮದ್ ರವರ ಕುಟುಂಬದವರ ಬಳಿಗೆ ಬಂದಿದ್ದಾರೆ. ಅಂಥವರು (ತಮ್ಮ…
ಖಂಡಿತವಾಗಿಯೂ ಅನೇಕ ಮಹಿಳೆಯರು, ತಮ್ಮ ಪತಿಯರ ಬಗ್ಗೆ ದೂರು ಹೇಳುತ್ತಾ ಮುಹಮ್ಮದ್ ರವರ ಕುಟುಂಬದವರ ಬಳಿಗೆ ಬಂದಿದ್ದಾರೆ. ಅಂಥವರು (ತಮ್ಮ ಹೆಂಡತಿಯರನ್ನು ಹೊಡೆಯುವವರು) ನಿಮ್ಮಲ್ಲಿ ಉತ್ತಮರಲ್ಲ
ಇಯಾಸ್ ಇಬ್ನ್ ಅಬ್ದುಲ್ಲಾ ಇಬ್ನ್ ಅಬೀ ದುಬಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ದಾಸಿಯರನ್ನು (ಮಹಿಳೆಯರನ್ನು) ಹೊಡೆಯಬೇಡಿ". ಆಗ ಉಮರ್ (ಇಬ್ನುಲ್-ಖತ್ತಾಬ್) ರವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಹೇಳಿದರು: "(ಈ ಆದೇಶದಿಂದ) ಮಹಿಳೆಯರು ತಮ್ಮ ಪತಿಯರ ವಿರುದ್ಧ ಧೈರ್ಯಶಾಲಿಗಳಾಗಿದ್ದಾರೆ." ಆಗ ಅವರು (ಪ್ರವಾದಿ) ಅವರನ್ನು ಹೊಡೆಯಲು ರಿಯಾಯಿತಿ ನೀಡಿದರು. (ಅದರ ನಂತರ) ಅನೇಕ ಮಹಿಳೆಯರು, ತಮ್ಮ ಪತಿಯರ ಬಗ್ಗೆ ದೂರು ಹೇಳುತ್ತಾ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಟುಂಬದವರ ಬಳಿಗೆ ಬಂದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅನೇಕ ಮಹಿಳೆಯರು, ತಮ್ಮ ಪತಿಯರ ಬಗ್ಗೆ ದೂರು ಹೇಳುತ್ತಾ ಮುಹಮ್ಮದ್ ರವರ ಕುಟುಂಬದವರ ಬಳಿಗೆ ಬಂದಿದ್ದಾರೆ. ಅಂಥವರು (ತಮ್ಮ ಹೆಂಡತಿಯರನ್ನು ಹೊಡೆಯುವವರು) ನಿಮ್ಮಲ್ಲಿ ಉತ್ತಮರಲ್ಲ."
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Kurdî Tiếng Việt Magyar ქართული Kiswahili සිංහල Română অসমীয়া ไทย Hausa Português मराठी دری አማርኛ ភាសាខ្មែរ Nederlands Македонски ગુજરાતી ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯರನ್ನು ಹೊಡೆಯುವುದನ್ನು ನಿಷೇಧಿಸಿದರು. ಆಗ ಸತ್ಯವಿಶ್ವಾಸಿಗಳ ನಾಯಕ (ಅಮೀರುಲ್-ಮುಅ್‌ಮಿನೀನ್) ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಬಂದು ಹೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಮಹಿಳೆಯರು ತಮ್ಮ ಪತಿಯರ ವಿರುದ್ಧ ಧೈರ್ಯಶಾಲಿಗಳಾಗಿದ್ದಾರೆ ಮತ್ತು ಅವರ ನಡತೆ ಕೆಟ್ಟದಾಗಿದೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಕಾರಣವಿದ್ದರೆ ಅವರನ್ನು (ಮಹಿಳೆಯರನ್ನು) ತೀವ್ರವಲ್ಲದ ರೀತಿಯಲ್ಲಿ ಹೊಡೆಯಲು ರಿಯಾಯಿತಿ ನೀಡಿದರು. ಉದಾಹರಣೆಗೆ ಅವರು ಪತಿಯ ಹಕ್ಕನ್ನು ಪೂರೈಸಲು ನಿರಾಕರಿಸಿದಾಗ ಮತ್ತು ಪತಿಗೆ ಅವಿಧೇಯರಾದಾಗ ಮುಂತಾದ ಸಂದರ್ಭಗಳಲ್ಲಿ. ಅದರ ನಂತರ ಮಹಿಳೆಯರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯರ ಬಳಿ ಬಂದು, ತಮ್ಮ ಪತಿಯರು ತಮಗೆ ತೀವ್ರವಾಗಿ ಹೊಡೆಯುವುದರ ಬಗ್ಗೆ ಮತ್ತು ಈ ರಿಯಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವುದರ ಬಗ್ಗೆ ದೂರು ನೀಡಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಯಾವ ಪುರುಷರು ತಮ್ಮ ಮಹಿಳೆಯರನ್ನು ತೀವ್ರವಾಗಿ ಹೊಡೆಯುತ್ತಾರೋ, ಅವರು ನಿಮ್ಮಲ್ಲಿ ಉತ್ತಮರಲ್ಲ.فوائد الحديث
ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ, ಮತ್ತು ಅವರ ವಿಷಯದಲ್ಲಿ ತಾಳ್ಮೆ ವಹಿಸುವುದು ಹಾಗೂ ಅವರ ತಪ್ಪುಗಳನ್ನು ಕಡೆಗಣಿಸುವುದು ಅವರನ್ನು ಹೊಡೆಯುವುದಕ್ಕಿಂತ ಉತ್ತಮವೆಂದು ತಿಳಿಸಲಾಗಿದೆ.
ಪತ್ನಿಯ ಅವಿಧೇಯತೆಗೆ ನೀಡುವ ಚಿಕಿತ್ಸೆಯ ಅಂತಿಮ ಹಂತವಾಗಿ ಅಲ್ಲಾಹು ಹೊಡೆಯುವುದನ್ನು ಇರಿಸಿದ್ದಾನೆ. ಅವನು ಹೇಳುತ್ತಾನೆ: "ಮತ್ತು ಯಾವ ಸ್ತ್ರೀಯರ ಅವಿಧೇಯತೆಯ ಬಗ್ಗೆ ನೀವು ಭಯಪಡುತ್ತೀರೋ, ಅವರಿಗೆ ಉಪದೇಶಿಸಿರಿ, ಮತ್ತು ಹಾಸಿಗೆಗಳಲ್ಲಿ ಅವರನ್ನು ತೊರೆಯಿರಿ, ಮತ್ತು (ಅದಕ್ಕೂ ಬಗ್ಗದಿದ್ದರೆ) ಅವರನ್ನು ಹೊಡೆಯಿರಿ. ನಂತರ ಅವರು ನಿಮಗೆ ವಿಧೇಯರಾದರೆ, ಅವರ ವಿರುದ್ಧ ಯಾವುದೇ ಮಾರ್ಗವನ್ನು ಹುಡುಕಬೇಡಿ. ಖಂಡಿತವಾಗಿಯೂ ಅಲ್ಲಾಹು ಅತ್ಯುನ್ನತನು ಹಾಗೂ ಮಹಾನನಾಗಿದ್ದಾನೆ." [ಸೂರಃ ಅನ್ನಿಸಾ: 34]. ಈ ಮೂರು ಕ್ರಮಗಳು ಅನುಕ್ರಮವಾಗಿವೆ. ಒಂದೇ ಸಮಯದಲ್ಲಿ ಎಲ್ಲವನ್ನೂ ಮಾಡಲು ಅನುಮತಿಯಿಲ್ಲ. ಉಪದೇಶ, ಬುದ್ಧಿವಾದ ಮತ್ತು ನೆನಪಿಸುವುದರೊಂದಿಗೆ ಪ್ರಾರಂಭಿಸಬೇಕು, ಅದು ಪ್ರಯೋಜನಕಾರಿಯಾದರೆ, ಅಲ್ಲಾಹನಿಗೆ ಸ್ತುತಿ. ಅದು ಪ್ರಯೋಜನವಾಗದಿದ್ದರೆ, ಅವಳನ್ನು ಹಾಸಿಗೆಯಲ್ಲಿ ತೊರೆಯಬೇಕು. ಅದೂ ಪ್ರಯೋಜನವಾಗದಿದ್ದರೆ, ಪ್ರತೀಕಾರದ ಹೊಡೆತವಲ್ಲ, ಬದಲಿಗೆ ಶಿಸ್ತಿನ ಹೊಡೆತದಿಂದ ಹೊಡೆಯಬೇಕು.
ಪುರುಷನು ತನ್ನ ಮನೆಯಲ್ಲಿ ಜವಾಬ್ದಾರಿಯುತ ಪಾಲಕನಾಗಿದ್ದು, ಅವನು ಅವರಿಗೆ ಬುದ್ಧಿವಂತಿಕೆ ಮತ್ತು ಉತ್ತಮ ಉಪದೇಶದ ಮೂಲಕ ಶಿಕ್ಷಣ ಮತ್ತು ಶಿಸ್ತನ್ನು ನೀಡಬೇಕೆಂದು ತಿಳಿಸಲಾಗಿದೆ.
ಒಬ್ಬ ವಿದ್ವಾಂಸನ ಫತ್ವಾದ (ಧಾರ್ಮಿಕ ತೀರ್ಪು) ಪರಿಣಾಮಗಳು ಮತ್ತು ಫಲಿತಾಂಶಗಳನ್ನು ತಿಳಿಯಲು ಅವನೊಂದಿಗೆ ಚರ್ಚಿಸಲು ಅನುಮತಿಯಿದೆ.
ದೂರು ನೀಡುವವನಿಗೆ ಹಾನಿಯುಂಟಾದರೆ ಅಮೀರನ (ನಾಯಕ) ಅಥವಾ ವಿದ್ವಾಂಸನ ಬಳಿ ದೂರು ನೀಡಲು ಅನುಮತಿಯಿದೆ.
