ಅಲ್ಲಾಹುಮ್ಮ ಖಿನೀ ಅಝಾಬಕ ಯೌಮ ತಜ್ಮಉ (ಅಥವಾ ತಬ್'ಅಸು) ಇಬಾದಕ್". (ಅರ್ಥ: ಓ ಅಲ್ಲಾಹನೇ, ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ - ಅಥವಾ…

ಅಲ್ಲಾಹುಮ್ಮ ಖಿನೀ ಅಝಾಬಕ ಯೌಮ ತಜ್ಮಉ (ಅಥವಾ ತಬ್'ಅಸು) ಇಬಾದಕ್". (ಅರ್ಥ: ಓ ಅಲ್ಲಾಹನೇ, ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ - ಅಥವಾ ಎಬ್ಬಿಸುವ - ದಿನದಂದು ನಿನ್ನ ಶಿಕ್ಷೆಯಿಂದ ನನ್ನನ್ನು ಕಾಪಾಡು)

ಹುದೈಫಾ ಇಬ್ನುಲ್-ಯಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿದ್ರಿಸಲು ಬಯಸಿದಾಗ, ತಮ್ಮ ಕೈಯನ್ನು ತಮ್ಮ ತಲೆಯ ಕೆಳಗೆ ಇಡುತ್ತಿದ್ದರು, ನಂತರ ಹೇಳುತ್ತಿದ್ದರು: "ಅಲ್ಲಾಹುಮ್ಮ ಖಿನೀ ಅಝಾಬಕ ಯೌಮ ತಜ್ಮಉ (ಅಥವಾ ತಬ್'ಅಸು) ಇಬಾದಕ್". (ಅರ್ಥ: ಓ ಅಲ್ಲಾಹನೇ, ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ - ಅಥವಾ ಎಬ್ಬಿಸುವ - ದಿನದಂದು ನಿನ್ನ ಶಿಕ್ಷೆಯಿಂದ ನನ್ನನ್ನು ಕಾಪಾಡು).

[صحيح] [رواه الترمذي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿದ್ರಿಸಲು ತಮ್ಮ ಮಲಗುವ ಸ್ಥಳಕ್ಕೆ ಹೋದಾಗ, ಅವರು ತಮ್ಮ ಬಲಗೈಯನ್ನು ತಲೆದಿಂಬಾಗಿ ಬಳಸುತ್ತಿದ್ದರು ಮತ್ತು ಅದರ ಮೇಲೆ ತಮ್ಮ ಬಲ ಕೆನ್ನೆಯನ್ನು ಇಡುತ್ತಿದ್ದರು, ಮತ್ತು ಹೇಳುತ್ತಿದ್ದರು: «اللَّهُمَّ» ಓ ನನ್ನ ಪರಿಪಾಲಕನೇ, «قِنِي» ನನ್ನನ್ನು ಕಾಪಾಡು ಮತ್ತು ರಕ್ಷಿಸು «عَذَابَكَ» ನಿನ್ನ ಶಿಕ್ಷೆ ಮತ್ತು ದಂಡನೆಯಿಂದ «يَوْمَ تَجْمَعُ أَوْ تَبْعَثُ عِبَادَكَ» ವಿಚಾರಣೆಯ ದಿನಕ್ಕಾಗಿ, ಪುನರುತ್ಥಾನ ದಿನದಂದು ನಿನ್ನ ದಾಸರನ್ನು ನೀನು ಒಟ್ಟುಗೂಡಿಸುವ ಅಥವಾ ಎಬ್ಬಿಸುವ ದಿನದಂದು.

فوائد الحديث

ಈ ಅನುಗ್ರಹೀತ ಪ್ರಾರ್ಥನೆಯ (ದುಆ) ಶ್ರೇಷ್ಠತೆಯನ್ನು ತಿಳಿಸಲಾಗಿದೆ, ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸಿ ಅದನ್ನು ನಿಯತವಾಗಿ ಪಾಲಿಸುವುದು ಆಪೇಕ್ಷಣೀಯವೆಂದು ಹೇಳಲಾಗಿದೆ.

ಬಲ ಪಾರ್ಶ್ವದ ಮೇಲೆ ಮಲಗುವುದು ಅಪೇಕ್ಷಣೀಯವಾಗಿದೆ.

ಅಸ್ಸಿಂದಿ ಹೇಳುತ್ತಾರೆ: "ಓ ಅಲ್ಲಾಹನೇ, ನಿನ್ನ ಶಿಕ್ಷೆಯಿಂದ ನನ್ನನ್ನು ಕಾಪಾಡು" ಎಂಬ ಮಾತಿನಲ್ಲಿ, ಬುದ್ಧಿವಂತನು ನಿದ್ರೆಯನ್ನು ಮರಣ ಮತ್ತು ಅದರ ನಂತರ ಬರುವ ಪುನರುತ್ಥಾನವನ್ನು ನೆನಪಿಸಿಕೊಳ್ಳಲು ಒಂದು ಸಾಧನವನ್ನಾಗಿ ಮಾಡಿಕೊಳ್ಳಬೇಕು ಎಂಬ ಸೂಚನೆಯಿದೆ."

ಅಲ್ಲಾಹನ ಅನುಗ್ರಹ ಮತ್ತು ಕರುಣೆಯಿಂದ, ದಾಸನಿಗೆ ಸತ್ಕಾರ್ಯ ಮಾಡಲು ಅವನು ಅನುಗ್ರಹಿಸುವುದರಿಂದ ಮತ್ತು ದಾಸನ ಪಾಪಗಳನ್ನು ಅಲ್ಲಾಹು ಕ್ಷಮಿಸುವುದರಿಂದ ಪುನರುತ್ಥಾನ ದಿನದಂದು ಅಲ್ಲಾಹನ ಶಿಕ್ಷೆಯಿಂದ ರಕ್ಷಣೆಯು ದೊರೆಯುತ್ತದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಪರಿಪಾಲಕ ಮತ್ತು ಒಡೆಯನಾದ ಅಲ್ಲಾಹನ ಮುಂದೆ ತೋರುತ್ತಿದ್ದ ವಿನಮ್ರತೆಯನ್ನು ತಿಳಿಸಲಾಗಿದೆ.

'ಹಶ್ರ್' (ಒಟ್ಟುಗೂಡಿಸುವಿಕೆ) ಮತ್ತು 'ಮಆದ್' (ಮರಳುವುದು) ವನ್ನು ಮತ್ತು ಜನರು ತಮ್ಮ ಕರ್ಮಗಳ ಬಗ್ಗೆ ವಿಚಾರಣೆಗೆ ತಮ್ಮ ಪರಿಪಾಲಕನ ಕಡೆಗೆ ಮರಳುತ್ತಾರೆ ಎಂಬುದನ್ನು ದೃಢೀಕರಿಸಲಾಗಿದೆ. ಯಾರು ಒಳಿತನ್ನು ಕಂಡುಕೊಳ್ಳುತ್ತಾರೋ, ಅವರು ಅಲ್ಲಾಹನನ್ನು ಸ್ತುತಿಸಲಿ, ಮತ್ತು ಯಾರು ಅದಲ್ಲದನ್ನು ಕಂಡುಕೊಳ್ಳುತ್ತಾರೋ, ಅವರು ತಮ್ಮನ್ನು ಹೊರತುಪಡಿಸಿ ಬೇರೆ ಯಾರನ್ನೂ ದೂಷಿಸದಿರಲಿ. ಇದು ಕೇವಲ ದಾಸರ ಕರ್ಮಗಳಾಗಿವೆ. ಅಲ್ಲಾಹು ಅವುಗಳನ್ನು ಅವರಿಗಾಗಿ ಎಣಿಸಿಡುತ್ತಾನೆ.

ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿದ್ರೆಯ ಸ್ಥಿತಿಗಳನ್ನು ಸಹ ವಿವರಿಸಲು ಆಸಕ್ತಿ ತೋರುತ್ತಿದ್ದರು.

"ತಮ್ಮ ಬಲಗೈಯನ್ನು ತಮ್ಮ ಕೆನ್ನೆಯ ಕೆಳಗೆ ಇಟ್ಟರು" - ಪ್ರತಿಯೊಂದು ವಿಷಯದಲ್ಲೂ ಬಲಭಾಗಕ್ಕೆ ಆದ್ಯತೆ ನೀಡುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಭ್ಯಾಸವಾಗಿತ್ತು, ಅದಕ್ಕೆ ವಿರುದ್ಧವಾಗಿ ಪುರಾವೆ ಬಂದಿರುವ ವಿಷಯಗಳನ್ನು ಹೊರತುಪಡಿಸಿ.

ಬಲ ಪಾರ್ಶ್ವದ ಮೇಲೆ ಮಲಗುವುದು ಬೇಗನೆ ಎಚ್ಚರಗೊಳ್ಳಲು ಸಹಾಯಕವಾಗಿದೆ. ಏಕೆಂದರೆ ಆ ಸ್ಥಿತಿಯಲ್ಲಿ ಹೃದಯವು ಸ್ಥಿರವಾಗಿರುವುದಿಲ್ಲ. ಮತ್ತು ಇದು ಹೃದಯಕ್ಕೆ ಹೆಚ್ಚು ಆರೋಗ್ಯಕರವಾಗಿದೆ. ಏಕೆಂದರೆ ಅದು ಎಡಭಾಗದಲ್ಲಿದೆ. ಆದ್ದರಿಂದ ದಾಸನು ಎಡ ಪಾರ್ಶ್ವದ ಮೇಲೆ ಮಲಗಿದರೆ, ಇತರ ಅಂಗಗಳು ಅದರ ಮೇಲೆ ವಾಲುವುದರಿಂದ ಹೃದಯಕ್ಕೆ ಹಾನಿಯಾಗುತ್ತದೆ.

التصنيفات

Manners of Sleeping and Waking Up