إعدادات العرض
ಹರಕೆಯ ಪ್ರಾಯಶ್ಚಿತ್ತವು ಆಣೆಯ ಪ್ರಾಯಶ್ಚಿತ್ತವಾಗಿದೆ
ಹರಕೆಯ ಪ್ರಾಯಶ್ಚಿತ್ತವು ಆಣೆಯ ಪ್ರಾಯಶ್ಚಿತ್ತವಾಗಿದೆ
ಉಕ್ಬಾ ಬಿನ್ ಆಮಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹರಕೆಯ ಪ್ರಾಯಶ್ಚಿತ್ತವು ಆಣೆಯ ಪ್ರಾಯಶ್ಚಿತ್ತವಾಗಿದೆ".
الترجمة
العربية Bosanski English فارسی Français Русский हिन्दी 中文 Indonesia اردو Kurdî Português دری Македонски Tiếng Việt Magyar ქართული বাংলা ไทย অসমীয়া Hausa Nederlands ਪੰਜਾਬੀ Kiswahili ગુજરાતી Tagalog ភាសាខ្មែរ සිංහල मराठी മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ನಿರ್ದಿಷ್ಟವಲ್ಲದ ಅಥವಾ ಹೆಸರು ಹೇಳದ ಸಾಮಾನ್ಯ ಹರಕೆಯ ಪ್ರಾಯಶ್ಚಿತ್ತವು ಆಣೆಯ ಪ್ರಾಯಶ್ಚಿತ್ತವಾಗಿದೆ.فوائد الحديث
ನಝ್ರ್ (ಹರಕೆ): ಧಾರ್ಮಿಕ ಅರ್ಥದಲ್ಲಿ ಹರಕೆ ಎಂದರೆ ಬುದ್ಧಿಸ್ಥಿರತೆಯುಳ್ಳ ಮತ್ತು ಆಯ್ಕೆಯ ಸ್ವಾತಂತ್ರ್ಯವಿರುವ ಓರ್ವ ವ್ಯಕ್ತಿಯು (ಮುಕಲ್ಲಫ್), ಅಲ್ಲಾಹನಿಗಾಗಿ ಯಾವುದಾದರೊಂದು ಕಾರ್ಯವನ್ನು ತನ್ನ ಮೇಲೆ ಕಡ್ಡಾಯಗೊಳಿಸಿಕೊಳ್ಳುವುದಾಗಿದೆ.
ಕಫ್ಫಾರತುಲ್ ಯಮೀನ್ (ಆಣೆಯ ಪ್ರಾಯಶ್ಚಿತ್ತ): ಹತ್ತು ಬಡವರಿಗೆ ಊಟ ನೀಡುವುದು, ಅಥವಾ ಅವರಿಗೆ ಬಟ್ಟೆ ಒದಗಿಸುವುದು, ಅಥವಾ ಒಬ್ಬ ದಾಸನನ್ನು ಸ್ವತಂತ್ರಗೊಳಿಸುವುದು. ಇದಕ್ಕೆ ಸಾಧ್ಯವಾಗದಿದ್ದರೆ ಮೂರು ದಿನಗಳ ಕಾಲ ಉಪವಾಸ ಆಚರಿಸುವುದು.
ಮುಸ್ಲಿಮನೊಬ್ಬ ಹರಕೆಯನ್ನು ಗೌರವಿಸಬೇಕು, ಅದನ್ನು ಮುರಿಯಬಾರದು ಮತ್ತು ಅದು ಕೇವಲ ಅವನ ನಾಲಿಗೆಯ ಮಾತಾಗಿ ಉಳಿಯಬಾರದು ಎಂಬುದು ಪ್ರಾಯಶ್ಚಿತ್ತದ ಹಿಂದಿರುವ ವಿವೇಕವಾಗಿದೆ.
ನಝ್ರ್ (ಹರಕೆ) ವಿಧಗಳು: 1. ನಝ್ರ್ ಮುತ್ಲಕ್ (ಅನಿರ್ದಿಷ್ಟ ಹರಕೆ): ಉದಾಹರಣೆಗೆ: "ನಾನು ಗುಣಮುಖನಾದರೆ ಅಲ್ಲಾಹನಿಗಾಗಿ ಹರಕೆ ಹೊರುತ್ತೇನೆ" ಎಂದು ಹೇಳಿ ಸುಮ್ಮನಾಗುವುದು (ನಿರ್ದಿಷ್ಟವಾಗಿ ಏನನ್ನೂ ಉದ್ದೇಶಿಸದಿರುವುದು). ಗುಣಮುಖನಾದಾಗ ಅವನು ಆಣೆಯ ಪ್ರಾಯಶ್ಚಿತ್ತವನ್ನು ನೀಡಬೇಕು. 2. ನಝ್ರ್ ಲುಜಾಜ್ ಮತ್ತು ಗದಬ್ (ಕೋಪದ ಹರಕೆ): ಹರಕೆಯನ್ನು ಒಂದು ಷರತ್ತಿಗೆ ಜೋಡಿಸುವುದು. ಇದರ ಉದ್ದೇಶ ಒಂದು ಕೆಲಸ ಮಾಡದಂತೆ ತಡೆಯುವುದು ಅಥವಾ ಮಾಡುವಂತೆ ಒತ್ತಾಯಿಸುವುದಾಗಿರುತ್ತದೆ. ಉದಾಹರಣೆಗೆ: "(ಸಿಟ್ಟಿನಲ್ಲಿ) ನಾನು ನಿನ್ನೊಂದಿಗೆ ಮಾತನಾಡಿದರೆ, ಒಂದು ತಿಂಗಳು ಉಪವಾಸ ಆಚರಿಸುವುದು ನನ್ನ ಮೇಲೆ ಕಡ್ಡಾಯವಾಗಿದೆ". ಇದರ ವಿಧಿಯೇನೆಂದರೆ, ಅವನಿಗೆ ಆಯ್ಕೆಯಿರುತ್ತದೆ; ತಾನು ಹೇಳಿದ ಕಾರ್ಯವನ್ನು ಮಾಡಬಹುದು ಅಥವಾ (ಅದನ್ನು ಮಾಡದೆ) ಆಣೆಯ ಪ್ರಾಯಶ್ಚಿತ್ತವನ್ನು ನೀಡಬಹುದು. 3. ನಝ್ರ್ ಮುಬಾಹ್ (ಅನುಮತಿಸಲ್ಪಟ್ಟ ಹರಕೆ): ಉದಾಹರಣೆಗೆ: "ನನ್ನ (ನಿರ್ದಿಷ್ಟ) ಬಟ್ಟೆಯನ್ನು ಧರಿಸುವುದು ಅಲ್ಲಾಹನಿಗಾಗಿ ನನ್ನ ಮೇಲೆ ಕಡ್ಡಾಯವಾಗಿದೆ". ಇದರ ವಿಧಿಯೇನೆಂದರೆ, ಬಟ್ಟೆಯನ್ನು ಧರಿಸುವುದು ಅಥವಾ ಆಣೆಯ ಪ್ರಾಯಶ್ಚಿತ್ತವನ್ನು ನೀಡುವುದು - ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಬಹುದು. 4. ನಝ್ರ್ ಮಕ್ರೂಹ್ (ಅನಪೇಕ್ಷಿತ ಹರಕೆ): ಉದಾಹರಣೆಗೆ: "ನನ್ನ ಹೆಂಡತಿಗೆ ತಲಾಖ್ (ವಿಚ್ಛೇದನ) ನೀಡುವುದು ಅಲ್ಲಾಹನಿಗಾಗಿ ನನ್ನ ಮೇಲೆ ಕಡ್ಡಾಯವಾಗಿದೆ". ಇದರ ವಿಧಿಯೇನೆಂದರೆ, ಆಣೆಯ ಪ್ರಾಯಶ್ಚಿತ್ತವನ್ನು ನೀಡುವುದು ಸುನ್ನತ್ ಆಗಿದೆ ಮತ್ತು ಅವನು ಆ ಹರಕೆಯನ್ನು ಪೂರೈಸಬಾರದು. ಒಂದು ವೇಳೆ ಅವನು ಅದನ್ನು ಮಾಡಿದರೆ (ವಿಚ್ಛೇದನ ನೀಡಿದರೆ), ಅವನ ಮೇಲೆ ಪ್ರಾಯಶ್ಚಿತ್ತವಿಲ್ಲ. 5. ನಝ್ರ್ ಮಅಸಿಯತ್ (ಪಾಪದ ಹರಕೆ): ಉದಾಹರಣೆಗೆ: "ಕಳ್ಳತನ ಮಾಡುವುದು ಅಲ್ಲಾಹನಿಗಾಗಿ ನನ್ನ ಮೇಲೆ ಕಡ್ಡಾಯ". ಇದರ ವಿಧಿ: ಇದನ್ನು ಪೂರೈಸುವುದು ಹರಾಮ್ (ನಿಷಿದ್ಧ) ಮತ್ತು ಇದಕ್ಕಾಗಿ ಆಣೆಯ ಪರಿಹಾರವನ್ನು ನೀಡಬೇಕು. ಒಂದು ವೇಳೆ ಅವನು ಆ ಕೆಲಸವನ್ನು ಮಾಡಿದರೆ, ಅವನು ಪಾಪಿಯಾಗುತ್ತಾನೆ ಮತ್ತು ಅವನ ಮೇಲೆ ಪರಿಹಾರವಿರುವುದಿಲ್ಲ. 6. ನಝ್ರ್ ತಾಅತ್ (ವಿಧೇಯತೆಯ ಹರಕೆ): ಉದಾಹರಣೆಗೆ: ಅಲ್ಲಾಹನ ಸಾಮೀಪ್ಯ ಪಡೆಯುವ ಉದ್ದೇಶದಿಂದ "ಇಂತಹ ನಮಾಝನ್ನು ನಿರ್ವಹಿಸುವುದು ಅಲ್ಲಾಹನಿಗಾಗಿ ನನ್ನ ಮೇಲೆ ಕಡ್ಡಾಯವಾಗಿದೆ" ಎನ್ನುವುದು. ಇದನ್ನು ರೋಗ ಗುಣಮುಖವಾಗುವಂತಹ ಷರತ್ತಿಗೆ ಜೋಡಿಸಿದ್ದರೆ, ಆ ಷರತ್ತು ಪೂರ್ಣಗೊಂಡಾಗ ಹರಕೆಯನ್ನು ಪೂರೈಸುವುದು ಕಡ್ಡಾಯ. ಯಾವುದೇ ಷರತ್ತಿಲ್ಲದಿದ್ದರೆ, ಅದನ್ನು ಪೂರೈಸುವುದು ಯಾವಾಗಲೂ ಕಡ್ಡಾಯವಾಗಿರುತ್ತದೆ.
التصنيفات
Oaths and Vows