ನಿಮ್ಮ ವಸ್ತ್ರಗಳಲ್ಲಿ ಬಿಳಿ ಬಣ್ಣವಿರುವವುಗಳನ್ನು ಧರಿಸಿರಿ. ಖಂಡಿತವಾಗಿಯೂ ಅವು ನಿಮ್ಮ ವಸ್ತ್ರಗಳಲ್ಲಿ ಅತ್ಯುತ್ತಮವಾದವುಗಳು.…

ನಿಮ್ಮ ವಸ್ತ್ರಗಳಲ್ಲಿ ಬಿಳಿ ಬಣ್ಣವಿರುವವುಗಳನ್ನು ಧರಿಸಿರಿ. ಖಂಡಿತವಾಗಿಯೂ ಅವು ನಿಮ್ಮ ವಸ್ತ್ರಗಳಲ್ಲಿ ಅತ್ಯುತ್ತಮವಾದವುಗಳು. ನಿಮ್ಮ ಮೃತರನ್ನು ಅವುಗಳಲ್ಲಿ (ಬಿಳಿ ವಸ್ತ್ರಗಳಲ್ಲಿ) ಕಫನ್ ಮಾಡಿರಿ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ವಸ್ತ್ರಗಳಲ್ಲಿ ಬಿಳಿ ಬಣ್ಣವಿರುವವುಗಳನ್ನು ಧರಿಸಿರಿ. ಖಂಡಿತವಾಗಿಯೂ ಅವು ನಿಮ್ಮ ವಸ್ತ್ರಗಳಲ್ಲಿ ಅತ್ಯುತ್ತಮವಾದವುಗಳು. ನಿಮ್ಮ ಮೃತರನ್ನು ಅವುಗಳಲ್ಲಿ (ಬಿಳಿ ವಸ್ತ್ರಗಳಲ್ಲಿ) ಕಫನ್ ಮಾಡಿರಿ".

[صحيح] [رواه أبو داود والترمذي وابن ماجه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುರುಷರಿಗೆ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಲು ಹಾಗೂ ಮೃತರನ್ನು ಅವುಗಳಲ್ಲಿ ಕಫನ್ (ಹೊದಿಯಲು) ಮಾಡಲು ನಿರ್ದೇಶಿಸುತ್ತಿದ್ದಾರೆ, ಏಕೆಂದರೆ ಅವು ಅತ್ಯುತ್ತಮ ವಸ್ತ್ರಗಳಾಗಿವೆ.

فوائد الحديث

ಬಿಳಿ ವಸ್ತ್ರವನ್ನು ಧರಿಸುವುದು ಅಪೇಕ್ಷಿತವಾಗಿದೆ. ಆದರೂ ಇತರ ಬಣ್ಣಗಳನ್ನು ಧರಿಸುವುದು ಅನುಮತಿಸಲಾಗಿದೆ.

ಮೃತರನ್ನು ಬಿಳಿ ವಸ್ತ್ರದಲ್ಲಿ ಕಫನ್ ಮಾಡುವುದು ಅಪೇಕ್ಷಿತವಾಗಿದೆ.

ಇಮಾಮ್ ಶೌಕಾನಿ ಹೇಳುತ್ತಾರೆ: ಈ ಹದೀಸ್ ಬಿಳಿ ಬಣ್ಣದ ವಸ್ತ್ರವನ್ನು ಧರಿಸುವುದು ಮತ್ತು ಮೃತರನ್ನು ಅದರಲ್ಲಿ ಕಫನ್ ಮಾಡುವುದು ನಿಯಮಗೊಳಿಸಲಾಗಿದೆ ಎಂದು ಸೂಚಿಸುತ್ತದೆ; ಏಕೆಂದರೆ ಅದು ಇತರ ಬಣ್ಣಗಳಿಗಿಂತ ಹೆಚ್ಚು ಶುದ್ಧ ಮತ್ತು ಉತ್ತಮವಾಗಿದೆ. ಅದು ಉತ್ತಮವಾಗಿರುವುದು ಸ್ಪಷ್ಟವಾಗಿ ಗೊತ್ತಿರುವುದೇ. ಇನ್ನು ಅದು ಹೆಚ್ಚು ಶುದ್ಧವಾಗಿರಲು ಕಾರಣವೇನೆಂದರೆ, ಅದರ ಮೇಲೆ ಅತ್ಯಲ್ಪ ಕಲ್ಮಶ ಬಿದ್ದರೂ ಅದು ಎದ್ದು ಕಾಣುವುದರಿಂದ, ಅದನ್ನು ತೊಳೆಯಲಾಗುತ್ತದೆ (ಹೀಗೆ ಅದು ಶುದ್ಧವಾಗಿರುತ್ತದೆ).

التصنيفات

Manners of Dressing