ಖಂಡಿತವಾಗಿಯೂ ಅಲ್ಲಾಹನಿಗೆ ನಿಮ್ಮ ಹೆಸರುಗಳಲ್ಲಿ ಅತ್ಯಂತ ಪ್ರಿಯವಾದವು 'ಅಬ್ದುಲ್ಲಾಹ್' (ಅಲ್ಲಾಹನ ದಾಸ) ಮತ್ತು 'ಅಬ್ದುರ್ರಹ್ಮಾನ್'…

ಖಂಡಿತವಾಗಿಯೂ ಅಲ್ಲಾಹನಿಗೆ ನಿಮ್ಮ ಹೆಸರುಗಳಲ್ಲಿ ಅತ್ಯಂತ ಪ್ರಿಯವಾದವು 'ಅಬ್ದುಲ್ಲಾಹ್' (ಅಲ್ಲಾಹನ ದಾಸ) ಮತ್ತು 'ಅಬ್ದುರ್ರಹ್ಮಾನ್' (ಪರಮ ದಯಾಳುವಿನ ದಾಸ)

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹನಿಗೆ ನಿಮ್ಮ ಹೆಸರುಗಳಲ್ಲಿ ಅತ್ಯಂತ ಪ್ರಿಯವಾದವು 'ಅಬ್ದುಲ್ಲಾಹ್' (ಅಲ್ಲಾಹನ ದಾಸ) ಮತ್ತು 'ಅಬ್ದುರ್ರಹ್ಮಾನ್' (ಪರಮ ದಯಾಳುವಿನ ದಾಸ)".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಹೆಸರುಗಳು ಗಂಡು ಮಕ್ಕಳಿಗೆ 'ಅಬ್ದುಲ್ಲಾಹ್' ಅಥವಾ 'ಅಬ್ದುರ್ರಹ್ಮಾನ್' ಎಂದು ಹೆಸರಿಡುವುದಾಗಿದೆ.

فوائد الحديث

ಇಮಾಮ್ ಖುರ್ತುಬಿ ಹೇಳುತ್ತಾರೆ: "ಈ ಎರಡು ಹೆಸರುಗಳಿಗೆ ಇದರಂತೆಯೇ ಇರುವ ಅಬ್ದುರ್ರಹೀಮ್, ಅಬ್ದುಲ್ ಮಲಿಕ್, ಅಬ್ದುಸ್ಸಮದ್ ಮುಂತಾದ ಹೆಸರುಗಳೂ ಸೇರುತ್ತವೆ. ಇವು ಅಲ್ಲಾಹನಿಗೆ ಹೆಚ್ಚು ಪ್ರೀಯವಾಗಿರಲು ಕಾರಣವೆಂದರೆ, ಅವು ಅಲ್ಲಾಹನಿಗೆ ಕಡ್ಡಾಯವಾಗಿರುವ ಗುಣವಾಚಕವನ್ನು ಮತ್ತು ಮನುಷ್ಯನಿಗೆ ಕಡ್ಡಾಯವಾಗಿರುವ ಗುಣವಾಚಕವನ್ನು ಅಂದರೆ ದಾಸತ್ವವನ್ನು (ಉಬೂದಿಯ್ಯಃ) ಒಳಗೊಂಡಿವೆ. ನಂತರ ಅಬ್ದ್ (ದಾಸ) ಎಂಬ ಪದವನ್ನು ಪರಿಪಾಲಕನಿಗೆ (ಅಲ್ಲಾಹನಿಗೆ) ನಿಜವಾದ ಅರ್ಥದಲ್ಲಿ ಸೇರಿಸಲಾಗಿದೆ. ಹೀಗೆ ಈ ಹೆಸರುಗಳಲ್ಲಿರುವ ಪದಗಳು ಸತ್ಯವಾಗಿವೆ ಮತ್ತು ಈ ಸಂಯೋಜನೆಯಿಂದ ಅವು ಗೌರವವನ್ನು ಪಡೆದಿವೆ. ಹಾಗಾಗಿ ಅವುಗಳಿಗೆ ಈ ಶ್ರೇಷ್ಠತೆ ಲಭ್ಯವಾಗಿದೆ. ಇತರರು ಹೇಳುತ್ತಾರೆ: ಈ ಎರಡು ಹೆಸರುಗಳಿಗೆ ಮಾತ್ರ ಉಲ್ಲೇಖಿಸಿರುವುದರ ಹಿಂದಿನ ತರ್ಕವೇನೆಂದರೆ, ಕುರ್‌ಆನ್‌ನಲ್ಲಿ 'ಅಬ್ದ್' (ದಾಸ) ಪದವನ್ನು ಅಲ್ಲಾಹನ ಹೆಸರುಗಳೊಂದಿಗೆ ಈ ಎರಡು ಹೆಸರುಗಳನ್ನು ಹೊರತುಪಡಿಸಿ ಬೇರೆಲ್ಲೂ ಸೇರಿಸಲಾಗಿಲ್ಲ. ಅಲ್ಲಾಹು ಹೇಳುತ್ತಾನೆ: "ಮತ್ತು ಅಲ್ಲಾಹನ ದಾಸನು (ಅಬ್ದುಲ್ಲಾಹ್) ಅವನನ್ನು ಪ್ರಾರ್ಥಿಸಲು ಎದ್ದು ನಿಂತಾಗ..." ಮತ್ತು ಇನ್ನೊಂದು ವಚನದಲ್ಲಿ: "ಮತ್ತು ಪರಮ ದಯಾಳುವಿನ ದಾಸರು (ಇಬಾದುರ್ರಹ್ಮಾನ್)..." ಅಲ್ಲಾಹನ ಈ ವಚನವು ಇದನ್ನು ಬೆಂಬಲಿಸುತ್ತದೆ: "ಹೇಳಿರಿ, ಅಲ್ಲಾಹನನ್ನು ಪ್ರಾರ್ಥಿಸಿರಿ ಅಥವಾ ರಹ್ಮಾನನನ್ನು ಪ್ರಾರ್ಥಿಸಿರಿ...".

التصنيفات

Rulings of Newborns