ಸುಖಗಳನ್ನು ನಾಶಮಾಡುವದನ್ನು ಹೆಚ್ಚಾಗಿ ಸ್ಮರಿಸಿರಿ" – ಅಂದರೆ ಮರಣವನ್ನು

ಸುಖಗಳನ್ನು ನಾಶಮಾಡುವದನ್ನು ಹೆಚ್ಚಾಗಿ ಸ್ಮರಿಸಿರಿ" – ಅಂದರೆ ಮರಣವನ್ನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಖಗಳನ್ನು ನಾಶಮಾಡುವದನ್ನು ಹೆಚ್ಚಾಗಿ ಸ್ಮರಿಸಿರಿ" – ಅಂದರೆ ಮರಣವನ್ನು.

[حسن] [رواه الترمذي والنسائي وابن ماجه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣವನ್ನು ಹೆಚ್ಚಾಗಿ ನೆನಪಿಸಿಕೊಳ್ಳಲು ಪ್ರೋತ್ಸಾಹಿಸಿದ್ದಾರೆ. ಅದನ್ನು ನೆನಪಿಸಿಕೊಳ್ಳುವುದರಿಂದ ಮನುಷ್ಯನು ಪರಲೋಕವನ್ನು ನೆನಪಿಸಿಕೊಳ್ಳುತ್ತಾನೆ, ಮತ್ತು ಅವನ ಹೃದಯದಲ್ಲಿರುವ ಇಹಲೋಕ ಸುಖಗಳ – ವಿಶೇಷವಾಗಿ ನಿಷಿದ್ಧವಾದವುಗಳ – ಪ್ರೀತಿಯು ನಾಶವಾಗುತ್ತದೆ.

فوائد الحديث

ಮರಣವು ಭೂಲೋಕದ ಸುಖಗಳನ್ನು ಕಡಿದುಹಾಕುತ್ತದೆ. ಆದರೆ ಸತ್ಯವಿಶ್ವಾಸಿಯ ವಿಷಯದಲ್ಲಿ, ಅದು ಅವನನ್ನು ಪರಲೋಕದ ಸುಖಗಳಿಗೆ ಮತ್ತು ಸ್ವರ್ಗದ ಆನಂದಗಳಿಗೆ ಹಾಗೂ ಅಲ್ಲಿ ದೊರಕುವ ಮಹಾನ್ ಒಳಿತುಗಳಿಗೆ ಸಾಗಿಸುತ್ತದೆ.

ಮರಣವನ್ನು ಮತ್ತು ಅದರ ನಂತರ ಬರುವುದನ್ನು ನೆನಪಿಸಿಕೊಳ್ಳುವುದು ತೌಬಾ ಮಾಡುವುದಕ್ಕೆ, (ಪಾಪಗಳಿಂದ) ದೂರವಿರುವುದಕ್ಕೆ ಮತ್ತು ಪರಲೋಕಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ.

التصنيفات

Condemning Love of the World