ಜನರ ಭಯವು ನಿಮ್ಮಲ್ಲಿ ಯಾರನ್ನೂ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಮಾತನಾಡದಂತೆ ತಡೆಯಬಾರದು

ಜನರ ಭಯವು ನಿಮ್ಮಲ್ಲಿ ಯಾರನ್ನೂ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಮಾತನಾಡದಂತೆ ತಡೆಯಬಾರದು

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರ ಭಯವು ನಿಮ್ಮಲ್ಲಿ ಯಾರನ್ನೂ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಮಾತನಾಡದಂತೆ ತಡೆಯಬಾರದು".

[صحيح] [رواه الترمذي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳಿಗೆ ನೀಡಿದ ಪ್ರವಚನ ಮತ್ತು ಉಪದೇಶಗಳಲ್ಲಿ ಒಂದು ಏನೆಂದರೆ, ಜನರ ಭಯವಾಗಲಿ, ಜನರ ಬಗ್ಗೆ ಇರುವ ಭೀತಿ ಅಥವಾ ಅವರ ಶಕ್ತಿಯಾಗಲಿ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಹೇಳದಂತೆ ಅಥವಾ ಅದನ್ನು ಆದೇಶಿಸದಂತೆ ಮುಸ್ಲಿಮನನ್ನು ಎಂದೂ ತಡೆಯಬಾರದು.

فوائد الحديث

ಸತ್ಯವನ್ನು ತೆರೆದು ಹೇಳಲು ಮತ್ತು ಜನರ ಭಯದಿಂದ ಅದನ್ನು ಮುಚ್ಚಿಡದಿರಲು ಪ್ರೋತ್ಸಾಹಿಸಲಾಗಿದೆ.

ಸತ್ಯವನ್ನು ಹೇಳುವುದು ಎಂದರೆ, ಅದನ್ನು ಹೇಳುವ ವಿಧಾನದಲ್ಲಿ ಶಿಷ್ಟಾಚಾರ, ವಿವೇಕ ಮತ್ತು ಉತ್ತಮ ಉಪದೇಶಕ್ಕೆ ಬದ್ಧರಾಗಿರಬಾರದು ಎಂದಲ್ಲ (ಅಂದರೆ ಸತ್ಯ ಹೇಳುವಾಗಲೂ ವಿವೇಕ ಮತ್ತು ಸೌಮ್ಯತೆ ಇರಬೇಕು).

ಕೆಡುಕನ್ನು ಖಂಡಿಸುವುದು ಕಡ್ಡಾಯವಾಗಿದೆ. ಜನರ ಹಿತಾಸಕ್ತಿಗಳು ಅಲ್ಲಾಹನ ಹಕ್ಕಿಗೆ ವಿರುದ್ಧವಾಗಿದ್ದರೆ ಸರ್ವಶಕ್ತನಾದ ಅಲ್ಲಾಹನ ಹಕ್ಕಿಗೆ ಆದ್ಯತೆ ನೀಡಬೇಕು.

التصنيفات

Ruling of Enjoining Good and Forbidding Evil