ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಆದಮನ ಮಗ (ಮನುಷ್ಯನು) ನನಗೆ ತೊಂದರೆ ಕೊಡುತ್ತಾನೆ. ಅವನು ಕಾಲವನ್ನು ದೂಷಿಸುತ್ತಾನೆ. ನಾನೇ…

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಆದಮನ ಮಗ (ಮನುಷ್ಯನು) ನನಗೆ ತೊಂದರೆ ಕೊಡುತ್ತಾನೆ. ಅವನು ಕಾಲವನ್ನು ದೂಷಿಸುತ್ತಾನೆ. ನಾನೇ 'ಅದ್ದಹ್ರ್' (ಕಾಲದ ಒಡೆಯ). ಕಾರ್ಯವು ನನ್ನ ಕೈಯಲ್ಲಿದೆ; ನಾನು ರಾತ್ರಿ ಮತ್ತು ಹಗಲನ್ನು ಬದಲಿಸುತ್ತೇನೆ'

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಆದಮನ ಮಗ (ಮನುಷ್ಯನು) ನನಗೆ ತೊಂದರೆ ಕೊಡುತ್ತಾನೆ. ಅವನು ಕಾಲವನ್ನು ದೂಷಿಸುತ್ತಾನೆ. ನಾನೇ 'ಅದ್ದಹ್ರ್' (ಕಾಲದ ಒಡೆಯ). ಕಾರ್ಯವು ನನ್ನ ಕೈಯಲ್ಲಿದೆ; ನಾನು ರಾತ್ರಿ ಮತ್ತು ಹಗಲನ್ನು ಬದಲಿಸುತ್ತೇನೆ' ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹದೀಸ್ ಕುದ್ಸಿಯಲ್ಲಿ ಹೇಳುತ್ತಾನೆ: ವಿಪತ್ತುಗಳು ಮತ್ತು ಕಷ್ಟಗಳು ಬಂದಾಗ ಕಾಲವನ್ನು ದೂಷಿಸುವ ಮತ್ತು ನಿಂದಿಸುವ ಮೂಲಕ ಮನುಷ್ಯನು ನನಗೆ ತೊಂದರೆ ಕೊಡುತ್ತಾನೆ ಮತ್ತು ನನ್ನನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತಾನೆ. ಏಕೆಂದರೆ ಸಂಭವಿಸುವ ಎಲ್ಲಾ ವಿದ್ಯಮಾನಗಳ ಏಕೈಕ ನಿಯಂತ್ರಕ ಮತ್ತು ನಿರ್ದೇಶಕ ಪರಿಶುದ್ಧನಾದ ಅಲ್ಲಾಹುವಾಗಿದ್ದಾನೆ. ಆದ್ದರಿಂದ, ಕಾಲವನ್ನು ದೂಷಿಸುವುದು ಸರ್ವಶಕ್ತನಾದ ಅಲ್ಲಾಹುವನ್ನು ದೂಷಿಸಿದಂತೆ. ಕಾಲವೆಂದರೆ ಕೇವಲ ಅಧೀನಗೊಳಿಸಲ್ಪಟ್ಟ ಒಂದು ಸೃಷ್ಟಿಯಾಗಿದೆ. ಅಲ್ಲಾಹುವಿನ ಆದೇಶದಂತೆ ಅದರಲ್ಲಿ ಘಟನೆಗಳು ಸಂಭವಿಸುತ್ತವೆ.

فوائد الحديث

ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹುವಿನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅರ್ಥವು ಅಲ್ಲಾಹುವಿನದ್ದೇ ಆಗಿವೆ. ಆದರೆ ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲು ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.

ಮಾತು ಮತ್ತು ವಿಶ್ವಾಸದಲ್ಲಿ ಪರಿಶುದ್ಧನಾದ ಅಲ್ಲಾಹುವಿನೊಂದಿಗೆ ಶಿಷ್ಟಾಚಾರವನ್ನು ಪಾಲಿಸಬೇಕೆಂದು ತಿಳಿಸಲಾಗಿದೆ.

ವಿಧಿಯಲ್ಲಿ ವಿಶ್ವಾಸವಿಡುವುದು ಮತ್ತು ಸಂಕಷ್ಟದ ಸಂದರ್ಭದಲ್ಲಿ ತಾಳ್ಮೆ ವಹಿಸುವುದು ಕಡ್ಡಾಯವಾಗಿದೆ.

ತೊಂದರೆ ಹಾನಿಗಿಂತ ಭಿನ್ನವಾಗಿದೆ. ಮನುಷ್ಯನು ಕೆಟ್ಟದ್ದನ್ನು ಕೇಳುವುದರಿಂದ ಅಥವಾ ನೋಡುವುದರಿಂದ ತೊಂದರೆಯನ್ನು ಅನುಭವಿಸಬಹುದು; ಆದರೆ ಅದರಿಂದ ಅವನಿಗೆ ಹಾನಿಯಾಗುವುದಿಲ್ಲ. ಹಾಗೆಯೇ, ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಕೆಟ್ಟ ವಾಸನೆಯಿಂದ ಅವನು ತೊಂದರೆಯನ್ನು ಅನುಭವಿಸಬಹುದು. ಆದರೆ ಅದರಿಂದ ಅವನಿಗೆ ಹಾನಿಯಾಗುವುದಿಲ್ಲ.

ಸರ್ವಶಕ್ತನಾದ ಅಲ್ಲಾಹು ತನ್ನ ದಾಸರ ಕೆಲವು ಕೆಟ್ಟ ಕಾರ್ಯಗಳಿಂದ ತೊಂದರೆಯನ್ನು ಅನುಭವಿಸುತ್ತಾನೆ. ಆದರೆ ಅದರಿಂದ ಅವನಿಗೆ ಹಾನಿಯಾಗುವುದಿಲ್ಲ. ಹದೀಸ್ ಕುದ್ಸಿಯಲ್ಲಿ ಅವನು ಹೇಳುತ್ತಾನೆ: "ಓ ನನ್ನ ದಾಸರೇ, ನೀವು ನನಗೆ ಹಾನಿ ಮಾಡುವಷ್ಟರ ಮಟ್ಟಿಗೆ ತಲುಪಲಾರಿರಿ ಹಾಗಿದ್ದರಲ್ಲವೇ ನೀವು ನನಗೆ ಹಾನಿ ಮಾಡುವಿರಿ!. ಹಾಗೆಯೇ ನೀವು ನನಗೆ ಲಾಭ ಮಾಡುವಷ್ಟರ ಮಟ್ಟಿಗೆ ತಲುಪಲಾರಿರಿ; ಹಾಗಿದ್ದರಲ್ಲವೇ ನೀವು ನನಗೆ ಲಾಭ ಮಾಡುವಿರಿ".

ಕಾಲವನ್ನು ದೂಷಿಸುವುದನ್ನು ಮತ್ತು ಬಣ್ಣಿಸುವುದನ್ನು ಮೂರು ವಿಧಗಳಾಗಿ ವಿಂಗಡಿಸಬಹುದು: 1. ಕಾಲವೇ ಕರ್ತ (ಘಟನೆಗಳನ್ನು ನಡೆಸುವವನು) ಎಂದು ಭಾವಿಸಿ ಅದನ್ನು ದೂಷಿಸುವುದು. ಕಾಲವೇ ವಿಷಯಗಳನ್ನು ಒಳಿತು ಮತ್ತು ಕೆಡುಕಿಗೆ ತಿರುಗಿಸಿ ಬಿಡುತ್ತದೆ ಎಂದು ನಂಬುವುದು! ಇದು ದೊಡ್ಡ ಶಿರ್ಕ್ ಆಗಿದೆ. ಏಕೆಂದರೆ ಇವನು ಅಲ್ಲಾಹುವಿನೊಂದಿಗೆ ಇನ್ನೊಬ್ಬ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾನೆ ಮತ್ತು ಘಟನೆಗಳ ಸೃಷ್ಟಿಯನ್ನು ಅಲ್ಲಾಹುವೇತರರಿಗೆ ಕಲ್ಪಿಸುತ್ತಾನೆ. 2. ಕಾಲವೇ ಕರ್ತ ಎಂದು ನಂಬದೆ ಅಲ್ಲಾಹುವೇ ಕರ್ತ ಎಂಬ ನಂಬಿಕೆಯಿಂದ ಅದನ್ನು ದೂಷಿಸುವುದು. ಆದರೆ ಈ ಅನಿಷ್ಟಕ್ಕೆ ಕಾಲವೇ ಕಾರಣ ಎಂದು ನಂಬಿ ಅವನು ಅದನ್ನು ದೂಷಿಸುತ್ತಾನೆ. ಇದು ನಿಷಿದ್ಧವಾಗಿದೆ. 3. ದೂಷಣೆಯಿಲ್ಲದೆ ಕೇವಲ ಮಾಹಿತಿಯನ್ನು ನೀಡುವುದು ಉದ್ದೇಶವಾಗಿದ್ದರೆ, ಅದಕ್ಕೆ ಅನುಮತಿಯಿದೆ. ಉದಾಹರಣೆಗೆ, ಲೂತ್ (ಅವರ ಮೇಲೆ ಶಾಂತಿಯಿರಲಿ) ರವರ ಮಾತು: "ಮತ್ತು ಅವರು ಹೇಳಿದರು: ಇದು ಬಹಳ ಕಠಿಣವಾದ ದಿನವಾಗಿದೆ."

التصنيفات

ಮಾತನಾಡುವ ಮತ್ತು ಮೌನವಾಗಿರುವ ಶಿಷ್ಟಾಚಾರ