ಖಂಡಿತವಾಗಿಯೂ ಈ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ (ಧಿಕ್ರ್),…

ಖಂಡಿತವಾಗಿಯೂ ಈ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ (ಧಿಕ್ರ್), ನಮಾಝ್ ಮತ್ತು ಕುರ್‌ಆನ್ ಪಾರಾಯಣಕ್ಕಾಗಿ ಇರುವುದಾಗಿವೆ

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿದ್ದಾಗ, ಒಬ್ಬ ಅಲೆಮಾರಿ ಅರಬ್ಬ ಬಂದನು. ಅವನು ಎದ್ದು ನಿಂತು ಮಸೀದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದನು. ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರು ಹೇಳಿದರು: "ನಿಲ್ಲಿಸು! ನಿಲ್ಲಿಸು!" ವರದಿಗಾರರು ಹೇಳುತ್ತಾರೆ: ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನಿಗೆ ಅಡ್ಡಿಪಡಿಸಬೇಡಿ, ಅವನನ್ನು ಬಿಡಿ". ಆಗ ಅವರು ಅವನನ್ನು ಮೂತ್ರ ವಿಸರ್ಜಿಸಿ ಮುಗಿಸುವವರೆಗೆ ಬಿಟ್ಟರು. ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ಕರೆದು ಹೇಳಿದರು: "ಖಂಡಿತವಾಗಿಯೂ ಈ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ (ಧಿಕ್ರ್), ನಮಾಝ್ ಮತ್ತು ಕುರ್‌ಆನ್ ಪಾರಾಯಣಕ್ಕಾಗಿ ಇರುವುದಾಗಿವೆ." ಅಥವಾ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದಂತೆ. ವರದಿಗಾರರು ಹೇಳುತ್ತಾರೆ: ನಂತರ ಅವರು (ಪ್ರವಾದಿ) ಜನರಲ್ಲೊಬ್ಬರಿಗೆ ಆದೇಶಿಸಿದರು. ಅವನು ಒಂದು ಬಕೆಟ್ ನೀರಿನೊಂದಿಗೆ ಬಂದು ಅದರ ಮೇಲೆ ಸುರಿದನು.

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮಸೀದಿಯಲ್ಲಿ ತಮ್ಮ ಸಹಾಬಿಗಳೊಂದಿಗೆ ಇದ್ದಾಗ ಮರುಭೂಮಿಯಿಂದ ಒಬ್ಬ ಅಲೆಮಾರಿ ಅರಬ್ಬ ಬಂದು, ಮಸೀದಿಯ ಒಂದು ಮೂಲೆಯಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸಿದನು. ಆಗ ಸಹಾಬಿಗಳು ಅವನನ್ನು ಗದರಿಸಿ ಹೇಳಿದರು: ನಿಲ್ಲಿಸು ಮೂತ್ರ ಮಾಡುವುದನ್ನು ನಿಲ್ಲಿಸು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನನ್ನು ಬಿಡಿ, ಅವನ ಮೂತ್ರವನ್ನು ಮಧ್ಯದಲ್ಲಿ ತಡೆಯಬೇಡಿ. ಅವರು ಅವನು ಮುಗಿಸುವವರೆಗೆ ಅವನನ್ನು ಬಿಟ್ಟರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ಕರೆದು ಹೇಳಿದರು: ಖಂಡಿತವಾಗಿಯೂ ಮಸೀದಿಗಳು ಇಂತಹ ಯಾವುದೇ ಮೂತ್ರಕ್ಕಾಗಲಿ, ಅಥವಾ ಯಾವುದೇ ರೀತಿಯ ಹೊಲಸಿಗಾಗಲಿ ಇರುವಂಥದ್ದಲ್ಲ. ಅವು ಕೇವಲ ಅಲ್ಲಾಹನ ಸ್ಮರಣೆ, ನಮಾಝ್, ಮತ್ತು ಕುರ್‌ಆನ್ ಪಾರಾಯಣ ಮುಂತಾದವುಗಳಿಗೆ ಇರುವುದಾಗಿವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳಲ್ಲಿ ಒಬ್ಬ ವ್ಯಕ್ತಿಗೆ ಆದೇಶಿಸಿದರು. ಅವನು ನೀರಿನಿಂದ ತುಂಬಿದ ಒಂದು ಬಕೆಟ್‌ನೊಂದಿಗೆ ಬಂದು ಅದನ್ನು ಆ ಮೂತ್ರದ ಮೇಲೆ ಸುಸೂತ್ರವಾಗಿ ಸುರಿದನು.

فوائد الحديث

ಮಸೀದಿಗಳನ್ನು ಗೌರವಿಸುವುದು, ಮತ್ತು ಅವುಗಳಿಗೆ ಯೋಗ್ಯವಲ್ಲದ ವಿಷಯಗಳಿಂದ ಅವುಗಳನ್ನು ಸಂರಕ್ಷಿಸುವುದು ಕಡ್ಡಾಯವಾಗಿದೆ.

ಇಮಾಮ್ ನವವಿ ಹೇಳುತ್ತಾರೆ: "ಮಸೀದಿಗಳನ್ನು ಹೊಲಸು, ಕಲ್ಮಶ ಮತ್ತು ಉಗುಳಿನಿಂದ ಸಂರಕ್ಷಿಸುವುದು ಮತ್ತು ಶುದ್ಧವಾಗಿಡುವುದು, ಮತ್ತು ಧ್ವನಿ ಏರಿಸಿ ಮಾತನಾಡುವುದು, ಜಗಳಗಳು, ವ್ಯಾಪಾರ, ವ್ಯವಹಾರ ಮತ್ತು ಇತರ ಒಪ್ಪಂದಗಳು, ಮತ್ತು ಅದೇ ಅರ್ಥದಲ್ಲಿ ಬರುವ ಇತರ ವಿಷಯಗಳಿಂದ (ಮಸೀದಿಗಳನ್ನು) ದೂರವಿಡುವುದು ಇದರಲ್ಲಿ ಸೇರುತ್ತವೆ."

ಅಜ್ಞಾನಿಯೊಂದಿಗೆ ಮೃದುವಾಗಿ ವರ್ತಿಸಬೇಕೆಂದು ಮತ್ತು ಕಠೋರತೆ ಅಥವಾ ನೋವು ಮಾಡದೆ ಅವನಿಗೆ ಅಗತ್ಯವಿರುವುದನ್ನು ಕಲಿಸಬೇಕೆಂದು ತಿಳಿಸಲಾಗಿದೆ. ಒಂದು ವೇಳೆ ಅವನು ಆ ತಪ್ಪನ್ನು ತಿರಸ್ಕಾರದಿಂದ ಅಥವಾ ಹಠಮಾರಿತನದಿಂದ ಮಾಡದಿದ್ದರೆ (ಈ ನಿಯಮ ಅನ್ವಯಿಸುತ್ತದೆ).

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದಯಾಳು ಶಿಕ್ಷಕರಾಗಿದ್ದರು, ಮೃದು ಸ್ವಭಾವದ ಮಾರ್ಗದರ್ಶಕರಾಗಿದ್ದರು, ಮತ್ತು ಸಹನಶೀಲ ಶಿಕ್ಷಣತಜ್ಞರಾಗಿದ್ದರು.

ಅಲ್ಲಾಹನ ಮನೆಗಳನ್ನು (ಮಸೀದಿಗಳನ್ನು) ನಮಾಝ್, ಕುರ್‌ಆನ್ ಪಾರಾಯಣ ಮತ್ತು ಅಲ್ಲಾಹನ ಸ್ಮರಣೆಯಿಂದ ಜೀವಂತವಾಗಿಡಲು ಪ್ರೋತ್ಸಾಹಿಸಲಾಗಿದೆ.

التصنيفات

The rulings of mosques