ಯಾರಾದರೂ ಬಲಿಕೊಡಲು (ಕುರ್ಬಾನಿ ಮಾಡಲು) ಪ್ರಾಣಿಯನ್ನು ಹೊಂದಿದ್ದರೆ ಮತ್ತು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ಅವನು…

ಯಾರಾದರೂ ಬಲಿಕೊಡಲು (ಕುರ್ಬಾನಿ ಮಾಡಲು) ಪ್ರಾಣಿಯನ್ನು ಹೊಂದಿದ್ದರೆ ಮತ್ತು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ಅವನು ಬಲಿ ಕೊಡುವವರೆಗೆ (ಕುರ್ಬಾನಿ ಮಾಡುವವರೆಗೆ) ತನ್ನ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು

ಸತ್ಯವಿಶ್ವಾಸಿಗಳ ಮಾತೆ ಮತ್ತು ಪ್ರವಾದಿಪತ್ನಿಯಾದ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಬಲಿಕೊಡಲು (ಕುರ್ಬಾನಿ ಮಾಡಲು) ಪ್ರಾಣಿಯನ್ನು ಹೊಂದಿದ್ದರೆ ಮತ್ತು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ಅವನು ಬಲಿ ಕೊಡುವವರೆಗೆ (ಕುರ್ಬಾನಿ ಮಾಡುವವರೆಗೆ) ತನ್ನ ಕೂದಲು ಅಥವಾ ಉಗುರುಗಳಿಂದ ಏನನ್ನೂ ಕತ್ತರಿಸಬಾರದು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುವುದೇನೆಂದರೆ, ಬಲಿ ಕೊಡಲು (ಕುರ್ಬಾನಿ ಮಾಡಲು) ಬಯಸುವವರು ದುಲ್-ಹಿಜ್ಜಾ ತಿಂಗಳ ಚಂದ್ರನು ಕಾಣಿಸಿಕೊಂಡರೆ, ನಂತರ ಬಲಿ ಕೊಡುವವರೆಗೆ ತಮ್ಮ ತಲೆ, ಕಂಕುಳು, ಮೀಸೆ ಅಥವಾ ಇತರ ಭಾಗಗಳ ಕೂದಲು ಅಥವಾ ಕೈ-ಕಾಲುಗಳ ಉಗುರುಗಳಿಂದ ಏನನ್ನೂ ಕತ್ತರಿಸಬಾರದು.

فوائد الحديث

ದುಲ್-ಹಿಜ್ಜಾ ತಿಂಗಳ ಮೊದಲ ಹತ್ತು ದಿನಗಳು ಪ್ರಾರಂಭವಾದ ನಂತರ ಬಲಿ ಕೊಡಲು (ಕುರ್ಬಾನಿ ಮಾಡಲು) ನಿಯ್ಯತ್ ಮಾಡುವವರು, ನಿಯ್ಯತ್ ಮಾಡಿದ ಕ್ಷಣದಿಂದ ಬಲಿ ಕೊಡುವವರೆಗೆ ಮೇಲೆ ಹೇಳಿದ ವಿಷಯಗಳಿಂದ ದೂರವಿರಬೇಕು.

ಮೊದಲ ದಿನ (ಬಕ್ರೀದ್ ಹಬ್ಬದ ದಿನ) ಬಲಿ ಕೊಡಲು ಸಾಧ್ಯವಾಗದಿದ್ದರೆ, ತಶ್ರೀಕ್‌ನ ದಿನಗಳಲ್ಲಿ (ದುಲ್-ಹಿಜ್ಜಾ 11,12,13) ಬಲಿ ಕೊಡುವ ದಿನದವರೆಗೆ ಈ ವಿಷಯಗಳಿಂದ ದೂರವಿರಬೇಕು.

التصنيفات

Sacrifice