ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ನಮಾಝನ್ನು ಮತ್ತು ಫಜ್ರ್…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ನಮಾಝನ್ನು ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಿದ್ದರು

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್ ನಮಾಝನ್ನು ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್ ನಮಾಝನ್ನು ತಪ್ಪದೆ ನಿರ್ವಹಿಸುತ್ತಿದ್ದರು."

[صحيح] [رواه البخاري]

الشرح

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮನೆಯಲ್ಲಿ ನಫಿಲ್ (ಐಚ್ಛಿಕ) ನಮಾಝ್‌ಗಳನ್ನು ತಪ್ಪದೆ ನಿರ್ವಹಿಸುತ್ತಿದ್ದರು ಮತ್ತು ಅವುಗಳನ್ನು ಬಿಟ್ಟುಬಿಡುತ್ತಿರಲಿಲ್ಲ: ಝುಹರ್ ನಮಾಝ್‌ಗೆ ಮೊದಲು ಎರಡು ಸಲಾಂಗಳೊಂದಿಗೆ ನಾಲ್ಕು ರಕ್ಅತ್, ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್.

فوائد الحديث

ಝುಹರ್ ನಮಾಝ್‌ಗೆ ಮೊದಲು ನಾಲ್ಕು ರಕ್ಅತ್, ಮತ್ತು ಫಜ್ರ್ ನಮಾಝ್‌ಗೆ ಮೊದಲು ಎರಡು ರಕ್ಅತ್ ತಪ್ಪದೆ ನಿರ್ವಹಿಸುವುದು ಅಪೇಕ್ಷಣೀಯವಾಗಿದೆ.

ರವಾತಿಬ್ ನಮಾಝ್‌ಗಳನ್ನು ಮನೆಯಲ್ಲಿಯೇ ನಿರ್ವಹಿಸುವುದು ಉತ್ತಮ. ಈ ನಮಾಝ್‌ಗಳ ಬಗ್ಗೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸಿರುವುದು ಈ ಕಾರಣದಿಂದಲೇ ಆಗಿದೆ.

التصنيفات

Regular Sunnah (Recommended) Prayers