ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್‌ಗಳಲ್ಲಿ "ಕುಲ್ ಯಾ ಅಯ್ಯುಹಲ್…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್‌ಗಳಲ್ಲಿ "ಕುಲ್ ಯಾ ಅಯ್ಯುಹಲ್ ಕಾಫಿರೂನ್" ಮತ್ತು "ಕುಲ್ ಹುವಲ್ಲಾಹು ಅಹದ್" ಅನ್ನು ಪಠಿಸಿದರು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್‌ಗಳಲ್ಲಿ "ಕುಲ್ ಯಾ ಅಯ್ಯುಹಲ್ ಕಾಫಿರೂನ್" ಮತ್ತು "ಕುಲ್ ಹುವಲ್ಲಾಹು ಅಹದ್" ಅನ್ನು ಪಠಿಸಿದರು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್‌ನ ಎರಡು ರಕ್ಅತ್‌ ರವಾತಿಬ್ ನಮಾಝಿನಲ್ಲಿ ಸೂರ ಫಾತಿಹ ಪಠಿಸಿದ ನಂತರ ಮೊದಲ ರಕ್ಅತ್‌ನಲ್ಲಿ "ಕುಲ್ ಯಾ ಅಯ್ಯುಹಲ್ ಕಾಫಿರೂನ್" (ಸೂರ ಕಾಫಿರೂನ್) ಮತ್ತು ಎರಡನೇ ರಕ್ಅತ್‌ನಲ್ಲಿ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಪಠಿಸಲು ಇಷ್ಟಪಡುತ್ತಿದ್ದರು.

فوائد الحديث

ಫಜ್ರ್‌ನ ಸುನ್ನತ್‌ ನಮಾಝಿನಲ್ಲಿ ಸೂರ ಫಾತಿಹ ಪಠಿಸಿದ ನಂತರ ಈ ಎರಡು ಸೂರಗಳನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.

ಈ ಎರಡು ಸೂರಗಳನ್ನು 'ಸೂರ ಇಖ್ಲಾಸ್' ಎಂದು ಕರೆಯಲಾಗುತ್ತದೆ. ಏಕೆಂದರೆ ಸೂರ ಕಾಫಿರೂನ್‌ನಲ್ಲಿ ಅಲ್ಲಾಹನನ್ನು ಹೊರತುಪಡಿಸಿ ಮುಶ್ರಿಕರು ಆರಾಧಿಸುವ ಎಲ್ಲದರಿಂದಲೂ ಮುಕ್ತಿಯನ್ನು ಘೋಷಿಸಲಾಗುತ್ತದೆ. ಅವರು ಅಲ್ಲಾಹನ ದಾಸರಲ್ಲ. ಏಕೆಂದರೆ ಅವರ ಸಹಭಾಗಿತ್ವವು ಅವರ ಕರ್ಮಗಳನ್ನು ವ್ಯರ್ಥಗೊಳಿಸುತ್ತದೆ. ಆರಾಧನೆಗೆ ಅಲ್ಲಾಹು ಮಾತ್ರ ಅರ್ಹನಾಗಿದ್ದಾನೆ. ಅದೇ ರೀತಿ, ಸೂರ ಇಖ್ಲಾಸ್‌ನಲ್ಲಿ ಅಲ್ಲಾಹನ ತೌಹೀದ್ (ಏಕದೇವತ್ವ), ಅವನಿಗಿರುವ ನಿಷ್ಕಳಂಕತೆ ಮತ್ತು ಅವನ ಗುಣಲಕ್ಷಣಗಳ ವಿವರಣೆಯಿದೆ.

التصنيفات

Method of Prayer