ಜನಾಝಾದ (ಅಂತ್ಯಕ್ರಿಯೆಯ) ವಿಷಯದಲ್ಲಿ ಆತುರ ಮಾಡಿರಿ. ಏಕೆಂದರೆ, (ಆ ಮೃತ ವ್ಯಕ್ತಿ) ಸಜ್ಜನನಾಗಿದ್ದರೆ, ನೀವು ಅದನ್ನು ಒಳಿತಿನ ಕಡೆಗೆ…

ಜನಾಝಾದ (ಅಂತ್ಯಕ್ರಿಯೆಯ) ವಿಷಯದಲ್ಲಿ ಆತುರ ಮಾಡಿರಿ. ಏಕೆಂದರೆ, (ಆ ಮೃತ ವ್ಯಕ್ತಿ) ಸಜ್ಜನನಾಗಿದ್ದರೆ, ನೀವು ಅದನ್ನು ಒಳಿತಿನ ಕಡೆಗೆ ಬೇಗನೆ ಕಳುಹಿಸುತ್ತಿದ್ದೀರಿ. ಒಂದು ವೇಳೆ ಅದು ಅದಲ್ಲದಿದ್ದರೆ (ಕೆಟ್ಟವನಾಗಿದ್ದರೆ), ನೀವು ಅದನ್ನು ನಿಮ್ಮ ಹೆಗಲುಗಳಿಂದ ಕೆಡುಕನ್ನು (ಬೇಗನೆ) ಇಳಿಸುತ್ತಿದ್ದೀರಿ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನಾಝಾದ (ಅಂತ್ಯಕ್ರಿಯೆಯ) ವಿಷಯದಲ್ಲಿ ಆತುರ ಮಾಡಿರಿ. ಏಕೆಂದರೆ, (ಆ ಮೃತ ವ್ಯಕ್ತಿ) ಸಜ್ಜನನಾಗಿದ್ದರೆ, ನೀವು ಅದನ್ನು ಒಳಿತಿನ ಕಡೆಗೆ ಬೇಗನೆ ಕಳುಹಿಸುತ್ತಿದ್ದೀರಿ. ಒಂದು ವೇಳೆ ಅದು ಅದಲ್ಲದಿದ್ದರೆ (ಕೆಟ್ಟವನಾಗಿದ್ದರೆ), ನೀವು ಅದನ್ನು ನಿಮ್ಮ ಹೆಗಲುಗಳಿಂದ ಕೆಡುಕನ್ನು (ಬೇಗನೆ) ಇಳಿಸುತ್ತಿದ್ದೀರಿ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೃತದೇಹದ ಸಿದ್ಧತೆ, ಅದರ ನಮಾಝ್ ಮತ್ತು ಸಮಾಧಿ ಮಾಡುವುದರಲ್ಲಿ ಆತುರಪಡಲು ಆದೇಶಿಸಿದರು; ಏಕೆಂದರೆ, ಜನಾಝಾವು ಸಜ್ಜನನದ್ದಾಗಿದ್ದರೆ, ಅದು ಒಳಿತಾಗಿದೆ, ನೀವು ಅದನ್ನು ಸಮಾಧಿಯ ಸುಖದ ಕಡೆಗೆ ಬೇಗನೆ ಕಳುಹಿಸುತ್ತಿದ್ದೀರಿ. ಮತ್ತು ಒಂದು ವೇಳೆ ಅದು ಅದಲ್ಲದಿದ್ದರೆ, ಅದು ಕೆಡುಕಾಗಿದೆ, ನೀವು ಅದನ್ನು ನಿಮ್ಮ ಹೆಗಲುಗಳಿಂದ ಇಳಿಸುತ್ತಿದ್ದೀರಿ.

فوائد الحديث

ಇಬ್ನ್ ಹಜರ್ ಹೇಳುತ್ತಾರೆ: "ಆತುರಪಡುವುದು ಮುಸ್ತಹಬ್ (ಅಪೇಕ್ಷಣೀಯ) ಆಗಿದೆ. ಆದರೆ ಅದು ಮೃತದೇಹಕ್ಕೆ ಹಾನಿಯುಂಟುಮಾಡುವ ಅಥವಾ ಹೊತ್ತುಕೊಂಡು ಹೋಗುವವರಿಗೆ ಅಥವಾ ಹಿಂಬಾಲಿಸುವವರಿಗೆ ಕಷ್ಟವನ್ನುಂಟುಮಾಡುವಷ್ಟು ತೀವ್ರರೂಪಕ್ಕೆ ತಲುಪಬಾರದು."

ಈ ಆತುರಕ್ಕೆ ಕೆಲವು ನಿಬಂಧನೆಗಳಿವೆ: ಒಂದು ವೇಳೆ ಮರಣವು ಅನಿರೀಕ್ಷಿತವಾಗಿದ್ದು, ಅದು (ಮರಣವಲ್ಲ) ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದ್ದರೆ, ಮರಣವು ಖಚಿತಪಡುವವರೆಗೆ ಸಮಾಧಿ ಮಾಡಬಾರದು. ಅಥವಾ, ಸ್ವಲ್ಪ ವಿಳಂಬ ಮಾಡುವುದರಲ್ಲಿ ಹಿತ (ಪ್ರಯೋಜನ) ಇದ್ದರೆ, ಉದಾಹರಣೆಗೆ ಹೆಚ್ಚು ಜನರು ನಮಾಝ್‌ನಲ್ಲಿ ಭಾಗವಹಿಸಲು, ಅಥವಾ ಸಂಬಂಧಿಕರು ಹಾಜರಾಗಲು, ಮತ್ತು ಮೃತದೇಹವು ಕೆಡುವ ಭಯವಿಲ್ಲದಿದ್ದರೆ (ಸ್ವಲ್ಪ ವಿಳಂಬ ಮಾಡಬಹುದು).

ಜನಾಝಾದ ವಿಷಯದಲ್ಲಿ ಆತುರಪಡಲು ಪ್ರೋತ್ಸಾಹಿಸಲಾಗಿರುವುದು ಮೃತ ವ್ಯಕ್ತಿಯು ಸೌಭಾಗ್ಯವಂತನಾಗಿದ್ದರೆ ಅವನ ಹಿತಕ್ಕಾಗಿ (ಬೇಗನೆ ಸುಖವನ್ನು ತಲುಪಲು), ಅಥವಾ ಅವನು ದುರ್ಭಾಗ್ಯವಂತನಾಗಿದ್ದರೆ ಹಿಂಬಾಲಿಸುವವರ ಹಿತಕ್ಕಾಗಿ (ಕೆಡುಕನ್ನು ಬೇಗನೆ ತಮ್ಮಿಂದ ದೂರ ಮಾಡಲು).

ಇಮಾಮ್ ನವವಿ ಹೇಳುತ್ತಾರೆ: "ಇದರಲ್ಲಿ ಕೆಟ್ಟ, ಸಜ್ಜನರಲ್ಲದ ಜನರ ಸಹವಾಸವನ್ನು ಬಿಡಬೇಕು ಎಂಬ ಪಾಠವಿದೆ."

التصنيفات

Carrying and Burying the Dead