ನಿಮಗೆ ವಿಜಯ ಮತ್ತು ಜೀವನೋಪಾಯವು ನಿಮ್ಮಲ್ಲಿರುವ ದುರ್ಬಲರ ಕಾರಣದಿಂದಲ್ಲದೆ (ಬೇರೆ ಕಾರಣದಿಂದ) ದೊರೆಯುತ್ತದೆಯೇ?

ನಿಮಗೆ ವಿಜಯ ಮತ್ತು ಜೀವನೋಪಾಯವು ನಿಮ್ಮಲ್ಲಿರುವ ದುರ್ಬಲರ ಕಾರಣದಿಂದಲ್ಲದೆ (ಬೇರೆ ಕಾರಣದಿಂದ) ದೊರೆಯುತ್ತದೆಯೇ?

ಮುಸ್'ಅಬ್ ಬಿನ್ ಸಅದ್ ರಿಂದ ವರದಿ: ಅವರು ಹೇಳಿದರು: ತನ್ನ ಕೆಳಗಿರುವವರಿಗಿಂತ (ಅಂದರೆ ದುರ್ಬಲರು ಅಥವಾ ಬಡವರಿಗಿಂತ) ತನಗೆ ಹೆಚ್ಚು ಶ್ರೇಷ್ಠತೆಯಿದೆ ಎಂದು ಸಅದ್ ಭಾವಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ವಿಜಯ ಮತ್ತು ಜೀವನೋಪಾಯವು ನಿಮ್ಮಲ್ಲಿರುವ ದುರ್ಬಲರ ಕಾರಣದಿಂದಲ್ಲದೆ (ಬೇರೆ ಕಾರಣದಿಂದ) ದೊರೆಯುತ್ತದೆಯೇ?"

[صحيح] [رواه البخاري]

الشرح

ಸಅದ್ ಬಿನ್ ಅಬೂ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಶೌರ್ಯ ಇತ್ಯಾದಿಗಳ ಕಾರಣದಿಂದಾಗಿ ತಮಗಿಂತ ಕೆಳಗಿರುವ ದುರ್ಬಲರಿಗಿಂತ ತಮಗೆ ಶ್ರೇಷ್ಠತೆಯಿದೆ ಎಂದು ಭಾವಿಸಿದರು! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿಮಗೆ ವಿಜಯ ಮತ್ತು ಜೀವನೋಪಾಯವು ನಿಮ್ಮಲ್ಲಿರುವ ದುರ್ಬಲರಿಂದಲ್ಲದೆ ದೊರೆಯುತ್ತದೆಯೇ? (ಅಂದರೆ, ಅವರ ಕಾರಣದಿಂದಲೇ ದೊರೆಯುತ್ತದೆ) – ಅವರ ಪ್ರಾರ್ಥನೆಗಳು, ಅವರ ನಮಾಝ್‌ಗಳು ಮತ್ತು ಅವರ ನಿಷ್ಕಳಂಕತೆಯ ಕಾರಣದಿಂದ. ಏಕೆಂದರೆ ಅವರು ಸಾಮಾನ್ಯವಾಗಿ ಪ್ರಾರ್ಥನೆಯಲ್ಲಿ ಹೆಚ್ಚು ನಿಷ್ಕಳಂಕರಾಗಿರುತ್ತಾರೆ, ಮತ್ತು ತಮ್ಮ ಹೃದಯಗಳು ಈ ಪ್ರಪಂಚದ ಅಲಂಕಾರಗಳಿಗೆ ಅಂಟಿಕೊಂಡಿಲ್ಲದಿರುವುದರಿಂದ ಆರಾಧನೆಯಲ್ಲಿ ಹೆಚ್ಚು ವಿನಮ್ರತೆ (ಖುಶೂಅ್) ಯುಳ್ಳವರಾಗಿರುತ್ತಾರೆ.

فوائد الحديث

ವಿನಮ್ರತೆಯನ್ನು ಅಳವಡಿಸಿಕೊಳ್ಳಲು ಮತ್ತು ಇತರರ ಮೇಲೆ ಅಹಂಕಾರ ಪಡುವುದನ್ನು ನಿಲ್ಲಿಸಲು ಪ್ರೋತ್ಸಾಹಿಸಲಾಗಿದೆ.

ಇಬ್ನ್ ಹಜರ್ ಹೇಳುತ್ತಾರೆ: "ಬಲಶಾಲಿಯು ತನ್ನ ಶೌರ್ಯದ ಶ್ರೇಷ್ಠತೆಯಿಂದ ಮೇಲುಗೈ ಸಾಧಿಸಿದರೆ, ದುರ್ಬಲನು ತನ್ನ ಪ್ರಾರ್ಥನೆ ಮತ್ತು ನಿಷ್ಕಳಂಕತೆಯ ಶ್ರೇಷ್ಠತೆಯಿಂದ ಮೇಲುಗೈ ಸಾಧಿಸುತ್ತಾನೆ."

ಬಡವರಿಗೆ ಉಪಕಾರ ಮಾಡಲು ಮತ್ತು ಅವರ ಹಕ್ಕುಗಳನ್ನು ನೀಡಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅದು ನಿಮಗೆ ಅಲ್ಲಾಹನ ಕರುಣೆ ಮತ್ತು ವಿಜಯ ದೊರೆಯುವ ಕಾರಣಗಳಲ್ಲಿ ಒಂದಾಗಿದೆ.

التصنيفات

States of the Righteous Believers