ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು

ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದುವುದಕ್ಕೆ ಮೂರು ದಿನಗಳ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮುಸ್ಲಿಮರಿಗೆ ಪ್ರೋತ್ಸಾಹಿಸುವುದೇನೆಂದರೆ, ಅವರು ಅಲ್ಲಾಹನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು. ಅಂದರೆ ಮರಣಾಸನ್ನ ಸಮಯದಲ್ಲಿ ಅಲ್ಲಾಹು ಅವನನ್ನು ಕರುಣಿಸುತ್ತಾನೆ ಮತ್ತು ಕ್ಷಮಿಸುತ್ತಾನೆ ಎಂಬ ಅವನ ನಿರೀಕ್ಷೆಯು ಹೆಚ್ಚಾಗಿರಬೇಕು. ಏಕೆಂದರೆ, ಭಯವು ಕರ್ಮವನ್ನು ಸುಧಾರಿಸುವುದಕ್ಕೆ ಇರುವುದಾಗಿದೆ. ಮರಣವೇಳೆಯು ಕರ್ಮವೆಸಗುವ ವೇಳೆಯಲ್ಲ. ಆದ್ದರಿಂದ ಆ ಸಮಯದಲ್ಲಿ ನಿರೀಕ್ಷೆಯು ಹೆಚ್ಚಾಗಿರಬೇಕು.

فوائد الحديث

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಉತ್ಸುಕರಾಗಿದ್ದರು, ಮತ್ತು ಅವರ ಎಲ್ಲಾ ಅವಸ್ಥೆಗಳಲ್ಲೂ ಅವರ ಬಗ್ಗೆ ತೀವ್ರ ಮಮಕಾರವನ್ನು ಹೊಂದಿದ್ದರು. ಎಲ್ಲಿಯವರೆಗೆಂದರೆ, ಅವರ ಮರಣದ ಸಮಯದಲ್ಲಿಯೂ ಸಹ ತಮ್ಮ ಸಮುದಾಯಕ್ಕೆ ಉಪದೇಶ ನೀಡುತ್ತಿದ್ದರು ಮತ್ತು ರಕ್ಷಣೆಯ ಮಾರ್ಗಗಳನ್ನು ತೋರಿಸುತ್ತಿದ್ದರು.

ತೀಬಿ ಹೇಳಿದರು: "ಮರಣದ ಸಮಯದಲ್ಲಿ ಅಲ್ಲಾಹನ ಬಗ್ಗೆ ನಿಮ್ಮ ಅಭಿಪ್ರಾಯವು ಒಳ್ಳೆಯದಾಗಬೇಕಾದರೆ, ನೀವು ಈಗಿಂದೀಗಲೇ ನಿಮ್ಮ ಕರ್ಮಗಳನ್ನು ಉತ್ತಮಗೊಳಿಸಬೇಕಾಗಿದೆ. ಏಕೆಂದರೆ ಮರಣದ ಮೊದಲು ಯಾರ ಕರ್ಮವು ಕೆಟ್ಟದಾಗಿರುತ್ತದೋ, ಮರಣದ ಸಮಯದಲ್ಲಿ ಅವನ ಅಭಿಪ್ರಾಯವು ಕೂಡ ಕೆಟ್ಟದಾಗಿರುತ್ತದೆ."

ದಾಸನು ಹೊಂದಿರಬೇಕಾದ ಪರಿಪೂರ್ಣ ಅವಸ್ಥೆ ಏನೆಂದರೆ ನಿರೀಕ್ಷೆ ಮತ್ತು ಭಯವನ್ನು ಸಮವಾಗಿ ಹೊಂದಿರುವುದು ಮತ್ತು ಪ್ರೀತಿಯ ಅಂಶವು ಹೆಚ್ಚಾಗಿರುವುದು. ಏಕೆಂದರೆ, ಪ್ರೀತಿಯು ವಾಹನವಾಗಿದೆ, ನಿರೀಕ್ಷೆವು ವೇಗವರ್ಧಕವಾಗಿದೆ, ಭಯವು ಚಾಲಕನಾಗಿದೆ, ಮತ್ತು ಅಲ್ಲಾಹು ತನ್ನ ಅನುಗ್ರಹ ಮತ್ತು ಘನತೆಯಿಂದ (ನಿರ್ದಿಷ್ಟ ಗುರಿಗೆ) ತಲುಪಿಸುವವವಾಗಿದ್ದಾನೆ."

ಮರಣಾಸನ್ನರಾಗಿರುವವರ ಬಳಿಯಲ್ಲಿರುವವರು ಅವರ ಬಳಿ ನಿರೀಕ್ಷೆಯನ್ನು ಮತ್ತು ಅಲ್ಲಾಹನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದುವುದನ್ನು ಹೆಚ್ಚಿಸಬೇಕು. ಈ ಹದೀಸ್ ನಲ್ಲಿರುವಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದುವುದಕ್ಕೆ ಮೂರು ದಿನಗಳ ಮೊದಲು ಇದನ್ನು ಹೇಳಿದ್ದರು.

التصنيفات

Acts of Heart