ನಿಮ್ಮಲ್ಲೊಬ್ಬನು ತನ್ನ ಹಗ್ಗವನ್ನು ತೆಗೆದುಕೊಂಡು, ನಂತರ ತನ್ನ ಬೆನ್ನ ಮೇಲೆ ಸೌದೆಯ ಹೊರೆಯೊಂದಿಗೆ ಬಂದು, ನಂತರ ಅದನ್ನು ಮಾರಿ, ಮತ್ತು…

ನಿಮ್ಮಲ್ಲೊಬ್ಬನು ತನ್ನ ಹಗ್ಗವನ್ನು ತೆಗೆದುಕೊಂಡು, ನಂತರ ತನ್ನ ಬೆನ್ನ ಮೇಲೆ ಸೌದೆಯ ಹೊರೆಯೊಂದಿಗೆ ಬಂದು, ನಂತರ ಅದನ್ನು ಮಾರಿ, ಮತ್ತು ಅದರ ಮೂಲಕ ಅಲ್ಲಾಹು ಅವನ ಮುಖವನ್ನು (ಭಿಕ್ಷಾಟನೆಯ ಅವಮಾನದಿಂದ) ಕಾಪಾಡುವುದು, ಅವನು ಜನರಲ್ಲಿ ಬೇಡುವುದಕ್ಕಿಂತ ಉತ್ತಮವಾಗಿದೆ; ಅವರು (ಜನರು) ಅವನಿಗೆ ಕೊಡಲಿ ಅಥವಾ ಕೊಡದಿರಲಿ

ಝುಬೈರ್ ಇಬ್ನುಲ್ ಅವ್ವಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ತನ್ನ ಹಗ್ಗವನ್ನು ತೆಗೆದುಕೊಂಡು, ನಂತರ ತನ್ನ ಬೆನ್ನ ಮೇಲೆ ಸೌದೆಯ ಹೊರೆಯೊಂದಿಗೆ ಬಂದು, ನಂತರ ಅದನ್ನು ಮಾರಿ, ಮತ್ತು ಅದರ ಮೂಲಕ ಅಲ್ಲಾಹು ಅವನ ಮುಖವನ್ನು (ಭಿಕ್ಷಾಟನೆಯ ಅವಮಾನದಿಂದ) ಕಾಪಾಡುವುದು, ಅವನು ಜನರಲ್ಲಿ ಬೇಡುವುದಕ್ಕಿಂತ ಉತ್ತಮವಾಗಿದೆ; ಅವರು (ಜನರು) ಅವನಿಗೆ ಕೊಡಲಿ ಅಥವಾ ಕೊಡದಿರಲಿ".

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಜನರಲ್ಲೊಬ್ಬನು ಯಾವುದಾದರೂ ಒಂದು ಕೆಲಸವನ್ನು ಮಾಡುವುದು - ಅದು ಹಗ್ಗವನ್ನು ತೆಗೆದುಕೊಂಡು, ತನ್ನ ಬೆನ್ನ ಮೇಲೆ ಸೌದೆಯನ್ನು ಸಂಗ್ರಹಿಸಿ, ಅದನ್ನು ಮಾರಿ ಅದರಿಂದ ತಿನ್ನುವುದು, ಅಥವಾ ದಾನ ಮಾಡುವುದು ಮತ್ತು ಅದರ ಮೂಲಕ ಜನರ ಮೇಲೆ ಅವಲಂಬಿತನಾಗುವುದರಿಂದ ದೂರವಾಗಿ ಭಿಕ್ಷಾಟನೆಯ ಅವಮಾನದಿಂದ ತನ್ನ ಮುಖವನ್ನು ಕಾಪಾಡಿಕೊಳ್ಳುವುದಾಗಿದ್ದರೂ ಸಹ - ಇದು ಅವನು ಜನರಲ್ಲಿ ಬೇಡುವುದಕ್ಕಿಂತ ಉತ್ತಮವಾಗಿದೆ. ಅವರು ಅವನಿಗೆ ಕೊಡಲಿ ಅಥವಾ ಕೊಡದಿರಲಿ. ಏಕೆಂದರೆ ಜನರಲ್ಲಿ ಬೇಡುವುದು ಅವಮಾನಕರವಾಗಿದೆ. ಸತ್ಯವಿಶ್ವಾಸಿಯು ಗೌರವಾನ್ವಿತನು, ಅವಮಾನಿತನಲ್ಲ.

فوائد الحديث

ಭಿಕ್ಷಾಟನೆಯಿಂದ ದೂರವಿರಲು ಮತ್ತು ಅದರಿಂದ ನಿರ್ಲಿಪ್ತರಾಗಿರಲು ಬಲವಾಗಿ ಪ್ರೋತ್ಸಾಹಿಸಲಾಗಿದೆ.

ಜೀವನೋಪಾಯವನ್ನು ಗಳಿಸುವುದಕ್ಕಾಗಿ ಕೆಲಸ ಮಾಡಲು ಪ್ರೋತ್ಸಾಹಿಸಲಾಗಿದೆ. ಅದು ಜನರ ದೃಷ್ಟಿಯಲ್ಲಿ ಸರಳ ಮತ್ತು ಕೀಳು ವೃತ್ತಿಯಾಗಿದ್ದರೂ ಸಹ.

ಇಸ್ಲಾಂ ಭಿಕ್ಷಾಟನೆ ಮತ್ತು ನಿರುದ್ಯೋಗದ ವಿರುದ್ಧ ಹೋರಾಡುತ್ತದೆ. ಆದ್ದರಿಂದ ಅದು ಶ್ರಮ ಮತ್ತು ಕೆಲಸವನ್ನು ಕಡ್ಡಾಯಗೊಳಿಸಿದೆ. ಅದು ಸೌದೆ ಸಂಗ್ರಹಿಸುವಂತಹ ಕಷ್ಟಕರವಾದ ಕೆಲಸವೇ ಆಗಿದ್ದರೂ ಸಹ.

ಕೆಲಸ ಮಾಡಲು ಮತ್ತು ಜೀವನೋಪಾಯವನ್ನು ಗಳಿಸಲು ಸಾಮರ್ಥ್ಯವಿರುವಾಗ ಭಿಕ್ಷಾಟನೆ ಮಾಡುವುದು ಅನುಮತಿಸಲಾಗಿಲ್ಲ.

ಅಗತ್ಯವಿದ್ದಾಗ ಸುಲ್ತಾನನಲ್ಲಿ (ಆಡಳಿತಗಾರನಲ್ಲಿ) ಕೇಳುವುದು ಅನುಮತಿಸಲಾಗಿದೆ. ಅಲ್ಲಾಹು ಹೇಳುತ್ತಾನೆ: "ಮತ್ತು ನಿಮ್ಮ ಬಳಿಗೆ ಅವರು ಸವಾರಿಗಾಗಿ ಬಂದಾಗ ನೀವು, "ನಿಮಗೆ ಸವಾರಿಗೆ ನೀಡಲು ನನ್ನ ಬಳಿ ಏನೂ ಇಲ್ಲ" ಎಂದು ಹೇಳಿದಿರೋ ಅವರ ಮೇಲೂ (ಯುದ್ಧಕ್ಕೆ ಬಾರದಿದ್ದಕ್ಕೆ) ದೋಷವಿಲ್ಲ. ಅವರು ಖರ್ಚು ಮಾಡಲು ಏನನ್ನೂ ಕಾಣದ ದುಃಖದಿಂದ ಅವರ ಕಣ್ಣುಗಳು ಕಣ್ಣೀರು ಸುರಿಸುತ್ತಾ ಹಿಂತಿರುಗಿದರು." [ಸೂರಃ ಅತ್ತೌಬಾ: 92].

ಯಾರು ಭಿಕ್ಷೆ ಬೇಡುವ ಅನಿವಾರ್ಯತೆಗೆ ಒಳಗಾಗುತ್ತಾರೋ ಮತ್ತು ಸಂಪಾದನೆ ಮಾಡಲು ಹಾಗೂ ಸೌದೆ ಸಂಗ್ರಹಿಸಲು ದುರ್ಬಲರಾಗಿರುತ್ತಾರೋ, ಅವರಿಗೆ ಭಿಕ್ಷೆ ಬೇಡಲು ಅನುಮತಿಯಿದೆ. ಆದರೆ ಅವರು ಹಠ ಹಿಡಿಯಬಾರದು ಮತ್ತು ಪೀಡಿಸಬಾರದು. ಅಲ್ಲಾಹು ಹೇಳುತ್ತಾನೆ: "ಅವರು ಜನರನ್ನು ಹಠ ಹಿಡಿದು ಕೇಳುವುದಿಲ್ಲ." [ಸೂರಃ ಅಲ್-ಬಖರಾ: 273].

ಇಮಾಮ್ ನವವಿ ಹೇಳುತ್ತಾರೆ: "ದಾನ ಮಾಡಲು, ತನ್ನ ಕೈಯ ದುಡಿಮೆಯಿಂದ ತಿನ್ನಲು, ಮತ್ತು ಅನುಮತಿಸಲ್ಪಟ್ಟ ಮಾರ್ಗಗಳಿಂದ ಸಂಪಾದಿಸಲು ಇದರಲ್ಲಿ ಪ್ರೋತ್ಸಾಹಿಸಲಾಗಿದೆ."

التصنيفات

Sales